India vs Zimbabwe 2nd ODI: ನಾಳೆ ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ, ಸರಣಿ ಕೈವಶ ಮಾಡಿಕೊಳ್ಳುತ್ತಾ ಟೀಂ ಇಂಡಿಯಾ?

ನಾಳೆ ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IND vs ZIM

IND vs ZIM

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಈಗಾಗಲೇ ಆರಂಭವಾಗಿದ್ದು, ಭಾರತ ತಂಡ ಮೊದಲ ಪಂದ್ಯವನ್ನು 10 ವಿಕೆಟ್​ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ನಾಳೆ 2ನೇ ಏಕದಿನ ಪಂದ್ಯ ನಡೆಯಲಿದೆ.  ನಾಳೆ ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಭಾರತ ಟೂರ್ನಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಳಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳ್ಳಲು ಭಾರತ ಸಿದ್ಧವಾಗಿದೆ. ತಂಡವನ್ನು ಈ ಬಾರಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಮುನ್ನಡೆಸಲಿದ್ದಾರೆ. ಈ ಸರಣಿಯು ಮುಂಬರುವ ಏಷ್ಯಾ ಕಪ್​ 2022 ಮತ್ತು ಐಸಿಸಿ ಟಿ20 ವಿಶ್ವಕಪ್​ನ ತಯಾರಿ ಪಂದ್ಯವಾಗಿ ಗುರುತಿಸಿಕೊಂಡಿದೆ. ಯುವ ತಂಡವಾಗಿರುವುದಿರಂದ ಬಹಳಷ್ಟು ಆಟಗಾರರ ಮೇಲೆ ನಿರೀಕ್ಷೆಗಳಿವೆ.

ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಇನ್ನು, ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಸೋನಿ ಚಾನೆಲ್​ ನೇರಪ್ರಸಾರ ಮಾಡಲಿದೆ.  ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಪಿಚ್​ ವರದಿ:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ.  ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 200 ರನ್ ಮತ್ತು 2ನೇ ಬ್ಯಾಟಿಂಗ್​ ಮಾಡುವ ತಂಡಕ್ಕೆ ಪಿಚ್​ ಹೆಚ್ಚು ಸಹಾಯಕವಾಗಿರಲಿದೆ. ಹೀಗಾಗಿ ನಾಳೆ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: India vs Zimbabwe 1st ODI: ಅಬ್ಬರಿಸಿದ ಧವನ್ - ಗಿಲ್, ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ

ರಾಹುಲ್​ ಬ್ಯಾಟಿಂಗ್​ ಮಾಡಬೇಕಾದ ಅವಶ್ಯಕತೆ:

ಹೌದು, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 189 ರನ್ ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಜಯ ದಾಖಲಿಸಿತು. ಭಾರತದ ಪರ ಶಿಖರ್ ಧವನ್ 113 ಎಸೆತದಲ್ಲಿ 9 ಬೌಂಡರಿಗಳ ನೆರವಿನಿಂದ 81 ರನ್ ಮತ್ತು ಶುಭಮನ್ ಗಿಲ್​ 72 ಎಸೆತದಲ್ಲಿ 10 ಫೋರ್​ ಮತ್ತು 1 ಸಿಕ್ಸ್ ಮೂಲಕ 82 ರನ್ ಸಿಡಿಸುವ ಮೂಲಕ ತಂಡವು ಭರ್ಜರಿ ಬ್ಯಾಟಿಂಗ್ ಮಾಡಿದರು.

ಹೀಗಾಗಿ ನಾಯಕ ಕೆಎಲ್ ರಾಹುಲ್​ ಅವರಿಗೆ ಇಲ್ಲಿ ಬ್ಯಾಟಿಂಗ್​ ಮಾಡುವ ಅವಕಾಶ ದೊರಕಿರಲಿಲ್ಲ. ಆದರೆ ನಾಳಿನ ಪಂದ್ಯದಲ್ಲಾದರೂ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಬೇಕಿದೆ. ಏಕೆಂದರೆ ಅವರು ಮುಂಬರುವ ಏಷ್ಯಾ ಕಪ್​ 2022ಗೆ ಆಯ್ಕೆ ಆಗಿದ್ದಾರೆ. ಅಲ್ಲದೇ ಅವರು ಅನೇಕ ದಿನಗಳಿಂದ ತಂಡದಿಂದ ದೂರ ಇರುವುದರಿಂದ ಅವರು ಮತ್ತೆ ಬ್ಯಾಟಿಂಗ್​ ಲಯಕ್ಕೆ ಬರುವ ಅವಶ್ಯಕತೆ ಇದೆ.

ಇದನ್ನೂ ಓದಿ: India vs Zimbabwe 1st ODI: ಭರ್ಜರಿ ಕಂಬ್ಯಾಕ್​ ಮಾಡಿದ ದೀಪಕ್ ಚಹಾರ್, ಟೀಂ ಇಂಡಿಯಾ ದಾಳಿಗೆ ಜಿಂಬಾಬ್ವೆ ತತ್ತರ

ZIM vs IND ಸಂಭಾವ್ಯ ತಂಡ:

ಸಂಭಾವ್ಯ ಭಾರತ ತಂಡ:  ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲದೀಪ್ ಯಾದವ್, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್

ಸಂಭಾವ್ಯ ಜಿಂಬಾಬ್ವೆ ತಂಡ: ತಡಿವಾನಾಸೆ ಮರುಮಣಿ, ತಕುಡ್ಜ್ವಾನಾಸೆ ಕೈಟಾನೊ, ಇನೋಸೆಂಟ್ ಕಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬಾವಾ (ನಾಯಕ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ತನಕಾ ಚಿವಾಂಗಾ.
Published by:shrikrishna bhat
First published: