India vs Zimbabwe 2nd ODI: ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ, ತಂಡದಲ್ಲಿ ಮಹತ್ವದ ಬದಲಾವಣೆ?

ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಈಗಾಗಲೇ ಆರಂಭವಾಗಿದ್ದು, ಭಾರತ ತಂಡ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IND vs ZIM

IND vs ZIM

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಈಗಾಗಲೇ ಆರಂಭವಾಗಿದ್ದು, ಭಾರತ ತಂಡ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕೈ ವಶ ಮಾಡಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾವಿದೆ. ಇದರ ನಡುವೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಲ್ಲಿಯೂ ಮುಖ್ಯವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಸರಣಿಯು ಮುಂಬರುವ ಏಷ್ಯಾ ಕಪ್​ 2022 (Asia cup 2022)  ಮತ್ತು ಐಸಿಸಿ ಟಿ20 ವಿಶ್ವಕಪ್​ನ (ICC T20 Wordl Cup) ತಯಾರಿ ಪಂದ್ಯವಾಗಿ ಗುರುತಿಸಿಕೊಂಡಿರುವ ಕಾರಣ ತಂಡದಲ್ಲಿ ಯುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.

ಪಂದ್ಯದ ವಿವರ: 

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ.

ಪಿಚ್​ ರಿಪೋರ್ಟ್​:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಒಣ ಮೈದಾನವಾಗಿರುವುದರಿಂದ ಇದು ಬೌಲರ್​ಗಳಿಗೆ ಮತ್ತು ಬ್ಯಾಟರ್​ಗಳಿಗೆ ಹೆಚ್ಚು ಸಹಾಯವಾಗಿರುತ್ತದೆ. ಅಲ್ಲದೇ ಬೌನ್ಸ್ ಬೌಲ್​ಗಳಿಗೆ ಉತ್ತಮವಾಗಿದೆ. ಆದರೂ ಇಲ್ಲಿನ ಸರಾಸರಿ ಮೊತ್ತ 250 ರನ್. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Ben Stokes: ದುಬಾರಿ ಕಾರುಗಳ ಒಡೆಯ ಇಂಗ್ಲೆಂಡ್​ನ ಈ ಸ್ಟಾರ್ ಆಲ್ ರೌಂಡರ್, ಬೆನ್ ಸ್ಟೋಕ್ಸ್ ಆದಾಯ ಕೇಳಿದ್ರೆ ಶಾಕ್​ ಆಗ್ತಿರಾ!

ತಂಡದಲ್ಲಿ ಮಹತ್ವದ ಬದಲಾವಣೆ:

ಹೌದು, ಜಿಂಬಾಬ್ವೆ ನಡುವಿನ  3 ಏಕದಿನ ಪಂದ್ಯದಗಳ ಸರಣಿಯುವ ಮುಂಬರುವ ಏಷ್ಯಾ ಕಪ್​ ಮತ್ತು ಐಸಿಸಿ ಟಿ 20 ವಿಶ್ವಕಪ್​ ಟೂರ್ನಿಗಳಿಗೆ ಮಹತ್ವದ್ದಾಗಿದೆ. ಹೀಗಾಗಿ ಹೆಚ್ಚಾಗಿ ಯುವ ಆಟಗಾರರು ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ಇದರ ನಡುವೆ ಮೊದಲ ಪಂದ್ಯದ ವೇಳೆ ಟೀಂ ಇಂಡಿಯಾ ಉಪ ನಾಯಕನಾಗಿರು ಶಿಖರ್ ಧವನ್ ಹೆಬ್ಬರಳಿಗೆ ಗಾಯ ಮಾಡಿಕೊಂಡಿರುವ ಕಾರಣ ಇಂದು ಪ್ಲೇಯಿಂಗ್ 11 ಅಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಯಾವುದು ಮಾಹಿತಿ ಲಭ್ಯವಾಗಿಲ್ಲ.

ಇದರ ನಡುವೆ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಇದ್ದು, ಶುಭಮನ್ ಗಿಲ್​ ಜೊತೆ ಆರಂಭಿಕರಾಗಿ ತ್ರಿಪಾಠಿ ಅಥವಾ ನಾಯಕ ರಾಹುಲ್​ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಲ್ಲದೇ ಏಷ್ಯಾ ಕಪ್​ಗೆ ಆಯ್ಕೆ ಆಗಿರುವ ರಾಹುಲ್ ಇಂದು ಬ್ಯಾಟಿಂಗ್ ಮಾಡಬೇಕಾಗಿದ್ದು, ಅನೇಕ ದಿನಗಳ ನಂತರ ತಂಡಕ್ಕೆ ಮರಳಿರುವ ಕಾರಣ ರಾಹುಲ್ ಇಂದು ಬ್ಯಾಟಿಂಗ್ ನಲ್ಲಿ ಕಾಣಿಸಿಕೊಳ್ಳುವ  ನಿರೀಕ್ಷೆಯಿದೆ.

ಇದನ್ನೂ ಓದಿ: Anil Kumble: ಕೋಚ್ ಸ್ಥಾನದಿಂದ ಕನ್ನಡಿಗ ಔಟ್, ಇವರ ಜಾಗಕ್ಕೆ ಬರ್ತಾರಾ ಆ ಮಾಜಿ ಸ್ಟಾರ್​ ಆಟಗಾರ?

ZIM vs IND ಸಂಭಾವ್ಯ ತಂಡ:

ಸಂಭಾವ್ಯ ಭಾರತ ತಂಡ:  ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲದೀಪ್ ಯಾದವ್, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್

ಸಂಭಾವ್ಯ ಜಿಂಬಾಬ್ವೆ ತಂಡ: ತಡಿವಾನಾಸೆ ಮರುಮಣಿ, ತಕುಡ್ಜ್ವಾನಾಸೆ ಕೈಟಾನೊ, ಇನೋಸೆಂಟ್ ಕಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬಾವಾ (ನಾಯಕ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ತನಕಾ ಚಿವಾಂಗಾ.
Published by:shrikrishna bhat
First published: