• Home
  • »
  • News
  • »
  • sports
  • »
  • Virat Kohli: ಕಳಪೆ ಫಾರ್ಮ್ ವೇಳೆ ಹೇಗಿದ್ರು ವಿರಾಟ್? ಆ ಚಕ್ರವ್ಯೂಹದಿಂದ ಹೇಗೆ ಹೊರಬಂದ್ರು ಕೊಹ್ಲಿ?

Virat Kohli: ಕಳಪೆ ಫಾರ್ಮ್ ವೇಳೆ ಹೇಗಿದ್ರು ವಿರಾಟ್? ಆ ಚಕ್ರವ್ಯೂಹದಿಂದ ಹೇಗೆ ಹೊರಬಂದ್ರು ಕೊಹ್ಲಿ?

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ನನ್ನ ಕಳಪೆ ಫಾರ್ಮ್ ನ ವಿಷಯದಲ್ಲಿ ನನಗೆ ಒಂದು ರೀತಿಯ ನಿರಾಕರಣೆ, ಹತಾಶೆ ಭಾವನೆ ಬಂದಿತ್ತು. ನಾನು ತುಂಬಾ ಹುಚ್ಚನಂತಾಗಿದ್ದೆ, ನನ್ನ ಜೀವನದಲ್ಲಿ ನನಗೆ ತುಂಬಾನೇ ಆಪ್ತರಾದ ನನ್ನ ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆಯೂ ನಾನು ಹಾಗೆ ಇದ್ದದ್ದು ನ್ಯಾಯೋಚಿತವಲ್ಲ.

  • Share this:

ಕ್ರಿಕೆಟ್‌ನಲ್ಲಿ ಈ ಫಾರ್ಮ್ ಅನ್ನೋದು ಯಾವಾಗ ಬರುತ್ತೆ ಮತ್ತು ಯಾವಾಗ ಹೋಗುತ್ತೆ ಅಂತ ಯಾರೂ ಊಹಿಸುವುದಕ್ಕೂ ಸಾಧ್ಯವಿಲ್ಲ ನೋಡಿ.  ಸಾಮಾನ್ಯವಾಗಿ ಮನುಷ್ಯನ ವ್ಯಕ್ತಿತ್ವ ಒಳ್ಳೆಯ ಸಮಯದಲ್ಲಿ ಒಂದು ರೀತಿ ಇದ್ದರೆ, ಕೆಟ್ಟ ಸಮಯದಲ್ಲಿ ಬೇರೆಯ ರೀತಿಯಲ್ಲಿಯೇ ಇರುತ್ತದೆ ಅಂತ ಹೇಳಬಹುದು. ಸಮಯ ಕೆಟ್ಟದಾಗಿದ್ದಾಗ ಸಿಟ್ಟು, ಅಸೂಯೆ ಮತ್ತು ಆ ಹತಾಶೆ ಎಲ್ಲವೂ ನಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳ ಮುಂದೆ ತೋರಿಸುತ್ತೇವೆ ಮತ್ತು ಅನೇಕ ಬಾರಿ ನಮ್ಮ ಈ ಗುಣಗಳು ಸಂಬಂಧವನ್ನು ಸಹ ಹಾಳು ಮಾಡುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಈ ಮಾತು ಕ್ರಿಕೆಟಿಗರಿಗೂ (Cricket) ಅನ್ವಯಿಸುತ್ತದೆ, ಕಳಪೆ ಫಾರ್ಮ್ ನಲ್ಲಿದ್ದಾಗ ಎಲ್ಲರೂ ಅವರನ್ನು ಟೀಕೆ ಮಾಡುವವರೆ ಆಗಿರುತ್ತಾರೆ. ತುಂಬಾ ಆಪ್ತರು ಮಾತ್ರ ಆ ಕೆಟ್ಟ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತಿರುತ್ತಾರೆ. ಭಾರತದ ಕ್ರಿಕೆಟ್ ತಂಡದ (Team India) ಬ್ಯಾಟರ್ ವಿರಾಟ್ ಕೊಹ್ಲಿ (Virat Kohli ) ಅವರು ಸಹ ಕಳಪೆ ಫಾರ್ಮ್ ಸಮಯದಲ್ಲಿ ತಮ್ಮ ಹತ್ತಿರದವರನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.


ವಿರಾಟ್ ಕಳಪೆ ಫಾರ್ಮ್ ನಲ್ಲಿದ್ದಾಗ ಹೇಗಿದ್ರು ಗೊತ್ತೇ?


ಈ ಸಮಯದಲ್ಲಿ ವಿರಾಟ್ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಅವರ ಕುಟುಂಬದ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸ್ವಲ್ಪ ಹತಾಶರಾಗಿ ಮತ್ತು ಒರಟಾಗಿ ಇರುವಂತೆ ಮಾಡಿತಂತೆ. ವಿರಾಟ್ ಕೊಹ್ಲಿ ಮಂಗಳವಾರ ಶ್ರೀಲಂಕಾ ತಂಡದ ವಿರುದ್ಧ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ತಮ್ಮ 45ನೇ ಏಕದಿನ ಶತಕವನ್ನು (87 ಎಸೆತಗಳಲ್ಲಿ 113 ರನ್) ಗಳಿಸಿದರು. ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು 67 ರನ್ ಗಳಿಂದ ಗೆಲುವು ಸಾಧಿಸಿತು. 34 ವರ್ಷದ ಕೊಹ್ಲಿ 2022 ರ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 113 ರನ್ ಗಳಿಸಿದ್ದರು ಮತ್ತು ಈಗ ಒಟ್ಟು 73 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.


ಹಾಗೆ ಇದ್ದದ್ದು ನ್ಯಾಯೋಚಿತವಲ್ಲ:


"ನನ್ನ ಕಳಪೆ ಫಾರ್ಮ್ ನ ವಿಷಯದಲ್ಲಿ ನನಗೆ ಒಂದು ರೀತಿಯ ನಿರಾಕರಣೆ, ಹತಾಶೆ ಭಾವನೆ ಬಂದಿತ್ತು. ನಾನು ತುಂಬಾ ಹುಚ್ಚನಂತಾಗಿದ್ದೆ, ನನ್ನ ಜೀವನದಲ್ಲಿ ನನಗೆ ತುಂಬಾನೇ ಆಪ್ತರಾದ ನನ್ನ ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆಯೂ ನಾನು ಹಾಗೆ ಇದ್ದದ್ದು ನ್ಯಾಯೋಚಿತವಲ್ಲ, ನಿಮ್ಮನ್ನು ಬೆಂಬಲಿಸುವ ಜನರ ಜೊತೆ ಚೆನ್ನಾಗಿರುವುದು ಮುಖ್ಯವಾಗುತ್ತದೆ. ಆದ್ದರಿಂದ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಯಿತು ಮತ್ತು ವಿಷಯಗಳನ್ನು ನನ್ನ ದೃಷ್ಟಿಕೋನದಲ್ಲಿ ನೋಡುವಂತೆ ಅವರಿಗೆ ಹೇಳಬೇಕಾಯಿತು" ಎಂದು ಕೊಹ್ಲಿ ಅವರು ಬಿಸಿಸಿಐ ಟಿವಿ ಸಂದರ್ಶನದಲ್ಲಿ ಸಹ ಆಟಗಾರರಾದ ಸೂರ್ಯಕುಮಾರ್ ಯಾದವ್ ಅವರ ಮುಂದೆ ಹೇಳಿದರು.


ಇದನ್ನೂ ಓದಿ: MS Dhoni: ಧೋನಿ ನಿವೃತ್ತಿಯ ಬಗ್ಗೆ ಈ ಆಟಗಾರನಿಗೆ ಮಾತ್ರ ಹೇಳಿದ್ರಂತೆ! ಇಂಟ್ರಸ್ಟಿಂಗ್​ ಮಾಹಿತಿ ಬಿಚ್ಚಿಟ್ಟ ಕೋಚ್​


"ನಾನು ನನ್ನ ಕ್ರಿಕೆಟ್ ನಿಂದ ಸ್ವಲ್ಪ ಸಮಯ ದೂರವಿದ್ದೆ. ನನ್ನ ವ್ಯಾಮೋಹಗಳು, ನನ್ನ ಆಸೆಗಳು ಸಂಪೂರ್ಣವಾಗಿ ನನ್ನನ್ನು ಆಕ್ರಮಿಸಿಕೊಂಡಿದ್ದವು. ನಾನು ನನ್ನ ಬಗ್ಗೆ ಪ್ರಾಮಾಣಿಕನಾಗಿರಬೇಕು ಮತ್ತು ನಾನು ದುರ್ಬಲನಾಗಿದ್ದಾಗ ನಾನು ಚೆನ್ನಾಗಿ ಆಡುತ್ತಿಲ್ಲ, ನಾನು ಅತ್ಯಂತ ಕೆಟ್ಟ ಆಟಗಾರ ಅಂತ ನಾನು ಅದನ್ನು ಒಪ್ಪಿಕೊಳ್ಳಬೇಕು. ನಾನು ಅದನ್ನು ನಿರಾಕರಿಸಲು ಸಾಧ್ಯವಿಲ್ಲ" ಎಂದು ಕೊಹ್ಲಿ ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಂಡರು.


ಸೂರ್ಯಕುಮಾರ್‌ಗೆ ವಿರಾಟ್ ಹೇಳಿದ್ದೇನು?:


ವಾಸ್ತವವಾಗಿ, ಟಿ20 ಕ್ರಿಕೆಟ್ ಗೆ ಸಂಬಂಧಿಸಿದಂತೆ ಸೂರ್ಯ ಅವರಿಗೆ ವಿರಾಟ್ ಒಂದು ಸಲಹೆಯನ್ನು ನೀಡಿದ್ದರು. "ಕೆಲವೊಮ್ಮೆ ನೀವು (ಸೂರ್ಯ) ಹೆಚ್ಚು ಹೆಚ್ಚು ಕ್ರಿಕೆಟ್ ಆಡುವಾಗ ಜನರು ನಿಮ್ಮನ್ನು ವಿಭಿನ್ನವಾಗಿ ನೋಡಲು ಶುರು ಮಾಡುತ್ತಾರೆ. ಸೂರ್ಯ ಪ್ರತಿ ಬಾರಿ ಕಣಕ್ಕೆ ಇಳಿದಾಗ ತಂಡಕ್ಕಾಗಿ ರನ್ ಗಳನ್ನು ಬಾರಿಸುತ್ತಾರೆ ಅಂತ ಜನರು ನಿರೀಕ್ಷೆ ಮಾಡಲು ಶುರು ಮಾಡುತ್ತಾರೆ” ಅಂತ ವಿರಾಟ್ ತಮ್ಮ ಕಿರಿಯ ಸಹೋದ್ಯೋಗಿಗೆ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ತಾವು ಹೊತ್ತಿರುವ ನಿರೀಕ್ಷೆಗಳ ಭಾರದ ಬಗ್ಗೆ ಹೇಳಿದರು.
ನಿಮ್ಮ ಬ್ಯಾಟ್ ನಿಂದ ರನ್ ಗಳು ಬರುತ್ತಿರುವಾಗ ಎಲ್ಲವೂ ಚೆನ್ನಾಗಿಯೇ ನಡೆದಿರುತ್ತದೆ, ಆದರೆ ನನ್ನ ವಿಷಯದಲ್ಲಿ ಫಾರ್ಮ್ ಸ್ವಲ್ಪ ವಿಚಲಿತವಾದರೂ ಹತಾಶೆ ನನ್ನನ್ನು ಅವರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಎಂದು ಹೇಳಿದರು. ಶತಕದೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ ನಂತರ ತಮ್ಮ ಉತ್ತಮ ಫಾರ್ಮ್ ಅನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಲು ಬಯಸುತ್ತೇನೆ ಎಂದು ಕೊಹ್ಲಿ ಹೇಳಿದರು.


ನಾನು ಈಗ ತುಂಬಾನೇ ಸಂತೋಷವಾಗಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಾನು ಅಂತಹ ಆರಂಭವನ್ನು ಹೊಂದಿರಲಿಲ್ಲ ಎಂದು ಕೊಹ್ಲಿ ಹೇಳಿದರು. ಇದು ವರ್ಷದ ಮೊದಲ ಪಂದ್ಯವಾಗಿತ್ತು ಮತ್ತು ನಾನು ಶತಕವನ್ನು ಗಳಿಸಿದ್ದೇನೆ, ಆದ್ದರಿಂದ ನಾನು ಇದನ್ನು ಮುಂದುವರೆಸಲು ಆಶಿಸುತ್ತೇನೆ, ಏಕೆಂದರೆ ಇದು ವಿಶ್ವಕಪ್ ವರ್ಷವಾಗಿದೆ ಮತ್ತು ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಟೆಸ್ಟ್ ಸರಣಿಯೂ ಸಹ ಮುಂದೆ ಆಡಬೇಕಿದೆ ಅಂತ ಹೇಳಿದರು.

Published by:shrikrishna bhat
First published: