• Home
  • »
  • News
  • »
  • sports
  • »
  • IND vs SL T20 Series: ಭಾರತಕ್ಕೆ ಬಂದಿಳಿದ ಶ್ರೀಲಂಕಾ ತಂಡ, ಇಂಡಿಯಾ-ಲಂಕಾ ಸರಣಿ ಆರಂಭ ಯಾವಾಗ?

IND vs SL T20 Series: ಭಾರತಕ್ಕೆ ಬಂದಿಳಿದ ಶ್ರೀಲಂಕಾ ತಂಡ, ಇಂಡಿಯಾ-ಲಂಕಾ ಸರಣಿ ಆರಂಭ ಯಾವಾಗ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SL T20 Series: ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ 3 T20 ಮತ್ತು ODI ಪಂದ್ಯಗಳ ಸರಣಿಯು ಜನವರಿ 3 ರಿಂದ ಪ್ರಾರಂಭವಾಗುತ್ತದೆ. ಈ ಸರಣಿಗಾಗಿ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದೆ.

  • Share this:

ಶ್ರೀಲಂಕಾ ತಂಡ ಕೊಲಂಬೊದಿಂದ ಭಾರತ (IND vs SL ) ಪ್ರವಾಸಕ್ಕಾಗಿ ಬಂದಿಳಿದಿದೆ. ಪ್ರವಾಸಿ ತಂಡವು ಭಾರತದಲ್ಲಿ 3 T20 ಮತ್ತು ODI ಪಂದ್ಯಗಳ ಸರಣಿಗಳನ್ನು ಆಡಲಿದೆ. ಜನವರಿ 3ರಿಂದ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿದೆ. ಎರಡನೇ ಪಂದ್ಯ ಜನವರಿ 5 ರಂದು ಪುಣೆಯಲ್ಲಿ ನಡೆಯಲಿದ್ದು, ಮೂರನೇ ಟಿ20 ಪಂದ್ಯ ಜನವರಿ 7 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿ ಆರಂಬವಾಗಲಿದ್ದು, ಟಿ20 ಸರಣಿಗೆ ಹಾರ್ದಿಕ್​ ಪಾಂಡ್ಯ (Hardik Pandya) ಮತ್ತು ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕರಾಗಿರಲಿದ್ದಾರೆ.


ಭಾರತಕ್ಕೆ ಬಂದಿಳಿದ ಶ್ರೀಲಂಕಾ:


ಇನ್ನು, ಏಕದಿನ ಮತ್ತು ಟಿ20 ಸರಣಿಗಾಗಿ ಶ್ರೀಲಂಕಾ ತಂಡವು ಭಾರತಕ್ಕೆ ಬಂದಿಳಿದಿದೆ. ಪ್ರವಾಸಿ ತಂಡ ಭಾನುವಾರದಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಲಿದೆ. ಶ್ರೀಲಂಕಾ ತನ್ನ T20 ಮತ್ತು ODI ತಂಡವನ್ನು ಡಿಸೆಂಬರ್ 28ರಂದು ಪ್ರಕಟಿಸಿತು. ಅವಿಷ್ಕಾ ಫೆರ್ನಾಂಡೊ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ, ವನಿಂದು ಹಸರಂಗ ಅವರನ್ನು ಟಿ20 ಮತ್ತು ಕುಶಾಲ್ ಮೆಂಡಿಸ್ ಏಕದಿನ ಸರಣಿಗೆ ಉಪನಾಯಕರನ್ನಾಗಿ ಮಾಡಲಾಗಿದೆ. ಎರಡೂ ತಂಡಗಳ ಕಮಾಂಡ್ ದಸುನ್ ಶನಕ ಅವರ ಕೈಯಲ್ಲಿರಲಿದೆ.24ರ ಹರೆಯದ ಅವಿಷ್ಕಾ ಫೆರ್ನಾಂಡೊ ಗಾಯದ ಸಮಸ್ಯೆಯಿಂದ ತಂಡದಿಂದ ಬಹಳ ಕಾಲ ಹೊರಗಿದ್ದರು. ಈ ಬಾರಿ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು ಫೈನಲ್‌ನಲ್ಲಿ ಪಂದ್ಯಶ್ರೇಷ್ಠರಾದರು. ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿರುವ ಸದೀರ ಸಮರವಿಕ್ರಮ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅವರು ಲೀಗ್‌ನಲ್ಲಿ ಪಂದ್ಯಾವಳಿಯ ಪುರುಷೋತ್ತಮರಾಗಿದ್ದರು. ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ನುವಾನ್ ತುಷಾರ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ 14 ವಿಕೆಟ್ ಪಡೆದಿದ್ದರು.


IND vs SL ತಂಡ:


ಭಾರತದ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್‌), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ, ಮುಖೇಶ್ ಕುಮಾರ್.


ಇದನ್ನೂ ಓದಿ: Team India: ಈ ವರ್ಷ ಮತ್ತೊಮ್ಮೆ ಚಾಂಪಿಯನ್​ ಆಗುತ್ತಾ ಟೀಂ ಇಂಡಿಯಾ? ಮರುಕಳಿಸುತ್ತಾ 2011ರ ಇತಿಹಾಸ?


ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.


ಶ್ರೀಲಂಕಾ ತಂಡ: ದಸುನ್‌ ಶನಕ (ನಾಯಕ), ಪತುಮ್‌ ಸಿಸಂಕ, ಅವಿಷ್ಕಾ ಫರ್ನಾಂಡೊ, ಸಾದೀರಾ ಸಮರವಿಕ್ರಮ, ಕುಶಲ್‌ ಮೆಂಡಿಸ್‌ (ಉಪನಾಯಕ/ ಏಕದಿನ ಸರಣಿಗೆ), ಭಾನುಕ ರಾಜಪಕ್ಷ (ಟT20), ಚರಿತ್‌ ಅಸಲಂಕ, ಧನಂಜಯ ಡಿ’ಸಿಲ್ವಾ, ವಾನಿಂದು ಹಸರಂಗ (ಉಪನಾಯಕ/ ಟಿ20 ಸರಣಿಗೆ), ಅಶೇನ್‌ ಬಂಡಾರ, ಮಹೀಶ ತೀಕ್ಷಣ, ಜೆಫ್ರಿ ವಾಂಡೆರ್ಸೆ (ODI), ಚಮಿಕಾ ಕರುಣಾರತ್ನೆ, ದಿಲ್ಷಾನ್‌ ಮಧುಶಂಕ, ಕಸುನ್‌ ರಜಿತ, ನುವಾನಿಂದು ಫರ್ನಾಂಡೊ (ODI), ದುನಿತ್‌ ವೆಲ್ಲಾಲ್ಗೆ, ಪ್ರಮೋದ್‌ ಮದುಶಾನ್‌, ಲಾಹಿರು ಕುಮಾರ, ನುವಾನ್‌ ತುಶಾರ (T20).

Published by:shrikrishna bhat
First published: