• Home
  • »
  • News
  • »
  • sports
  • »
  • IND vs SL ODI 2023: ಭಾರತ-ಲಂಕಾ ಏಕದಿನ ಸರಣಿ; ರೋಹಿತ್-ಕೊಹ್ಲಿ ಕಂಬ್ಯಾಕ್​, ಪಂದ್ಯ ಯಾವಾಗ? ಇಲ್ಲಿದೆ ಲೈವ್​ಸ್ಟ್ರೀಮಿಂಗ್​ ವಿವರ

IND vs SL ODI 2023: ಭಾರತ-ಲಂಕಾ ಏಕದಿನ ಸರಣಿ; ರೋಹಿತ್-ಕೊಹ್ಲಿ ಕಂಬ್ಯಾಕ್​, ಪಂದ್ಯ ಯಾವಾಗ? ಇಲ್ಲಿದೆ ಲೈವ್​ಸ್ಟ್ರೀಮಿಂಗ್​ ವಿವರ

IND vs SL ODI

IND vs SL ODI

IND vs SL ODI: ಭಾರತ ಮತ್ತು ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ಜನವರಿ 10 ರಂದು ಗುವಾಹಟಿಯಲ್ಲಿ ಸರಣಿ ಆರಂಭವಾಗಲಿದೆ.

  • News18 Kannada
  • Last Updated :
  • New Delhi, India
  • Share this:

ಮೂರು ಪಂದ್ಯಗಳ ಟಿ20 ಸರಣಿಯ ಮುಕ್ತಾಯದ ನಂತರ ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಟಿ20 ಸರಣಿಯ ರೀತಿಯಲ್ಲಿಯೇ ಟೀಂ ಇಂಡಿಯಾ (Team India) ಏಕದಿನ ಸರಣಿಯನ್ನೂ ಗೆಲ್ಲಲು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಅದರಲ್ಲಿಯೂ ಈ ಏಕದಿನ ಸರಣಿ ಈವರ್ಷದ ಐಸಿಸಿ ಏಕದಿನ ವಿಶ್ವಕಪ್ (ODI World Cup)​ ಭಾಗವಾಗಲಿದ್ದು, ಇದೊಂದು ಅಭ್ಯಾಸದ ಸರಣಿಗಳಾಗಿ ಪರಿಗಣಿಸಲಾಗುತ್ತಿದೆ. ಇನ್ನು, ಭಾರತ ಮತ್ತು ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ಜನವರಿ 10 ರಂದು ಗುವಾಹಟಿಯಲ್ಲಿ (Guwahati) ಸರಣಿ ಆರಂಭವಾಗಲಿದೆ. ಮುಂದಿನ ಎರಡು ಪಂದ್ಯಗಳು ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಜನವರಿ 12 ಮತ್ತು 15 ರಂದು ನಡೆಯಲಿದೆ. ಈ ಸರಣಿಗೆ ಮತ್ತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.


ODI ಸರಣಿ ವೇಳಾಪಟ್ಟಿ:


ಜನವರಿ 10 - 1ನೇ ODI, ಗುವಾಹಟಿ
ಜನವರಿ 12 - 2ನೇ ODI, ಕೋಲ್ಕತ್ತಾ
ಜನವರಿ 15 - 3ನೇ ODI, ತಿರುವನಂತಪುರಂ


ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರ:


ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ಗುವಾಹಟಿಯಲ್ಲಿ ಆರಂಭವಾಗಲಿದೆ. ಲಂಕಾ ವಿರುದ್ಧದ ಎಲ್ಲಾ ಮೂರು ODI ಪಂದ್ಯಗಳು ಮಧ್ಯಾಹ್ನ 1:30 ISTಗೆ ಪ್ರಾರಂಭವಾಗುತ್ತವೆ. ಏಕದಿನ ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಇನ್ನು, ಪಂದ್ಯದ ಸಂಪೂರ್ಣ ಮಾಹಿತಿಗಾಗಿ News18 Kannada ವೆಬ್​ಸೈಟ್​ ಅನುಸರಿಸಿ.


ಸ್ಟಾರ್ ಆಟಗಾರರು ತಂಡಕ್ಕೆ ಕಂಬ್ಯಾಕ್:


ಇನ್ನು, ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇದೀಗ ಏಕದಿನ ಸರಣಿಯಿಂದ ಕಂಬ್ಯಾಕ್​ ಮಾಡುತ್ತಿದ್ದಾರೆ. ಈಗಾಗಲೇ ಈ ಮೂವರು ಸ್ಟಾರ್​ ಆಟಗಾರರು ಸರಣಿಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.


ಇದನ್ನೂ ಓದಿ: Suryakumar Yadav: ರೋಹಿತ್​ ದಾಖಲೆ ಮುರಿದ ಸೂರ್ಯಕುಮಾರ್! SKY ಶತಕಕ್ಕೆ ರೆಕಾರ್ಡ್ಸ್​​ಗಳೆಲ್ಲಾ ಪುಡಿ ಪುಡಿ


ಇವರುಗಳಲ್ಲದೇ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಬುಮ್ರಾ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಫಿಟ್​ ಆಗಿದ್ದಾರೆ ಎಂದು ಅನುಮತಿ ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬುಮ್ರಾ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಗಾಯದಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಬುಮ್ರಾ ಎನ್‌ಸಿಎಯಲ್ಲಿ ಪುನರ್ವಸತಿಯಲ್ಲಿದ್ದರು. ಸದ್ಯ ಅವರು ಫಿಟ್ ಆಗಿದ್ದಾರೆ ಎಂದು ಕ್ರಿಕೆಟ್ ಅಕಾಡೆಮಿ ಘೋಷಿಸಿದೆ.


ಏಕದಿನ ಸರಣಿಗೆ ಭಾರತ-ಶ್ರೀಲಂಕಾ ತಂಡ:


ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ಸಿ), ಹಾರ್ದಿಕ್ ಪಾಂಡ್ಯ (ವಿಸಿ), ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯುಕೆ), ಇಶಾನ್ ಕಿಶನ್ (ಡಬ್ಲ್ಯುಕೆ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.


ಶ್ರೀಲಂಕಾದ ಏಕದಿನ ತಂಡ: ಪಾತುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೋ, ಅಶೆನ್ ಬಂಡಾರ, ನುವಾನಿಡು ಫೆರ್ನಾಂಡೋ,ದಾಸುನ್ ಶನಕ(ಸಿ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಚಾಮಿಕ ಕರುಣಾರತ್ನ, ವನಿಂದು ಹಸರಂಗ, ಕುಸಲ್ ಮೆಂಡಿಸ್ (ವಾಕ್), ಸದೀರ ಸಮರವಿಕ್ರಮ, ಮಹೇಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಜೆಫ್ರಿ ವಾಂಡರ್ಸ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು