ಭಾರತ ಮತ್ತು ಶ್ರೀಲಂಕಾ (IND vs SL ODI) ನಡುವಿನ ಪ್ರಸ್ತಾವಿತ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಟಾಸ್ ಸೋತ ಭಾರತ ತಂಡ ಮೊದಲು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಶ್ರೀಲಂಕಾ ತಂಡದ ಮುಂದೆ 374 ರನ್ಗಳ ಬೃಹತ್ ಗುರಿಯನ್ನು ನೀಡಿತು. ಈ ಮೊತ್ತ ಬೆನ್ನಟ್ಟಿದ ಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸುವ ಮೂಲಕ 67 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಲಂಕಾ ಪರ ಮಿಂಚಿದ ಶನಕ್:
ಇನ್ನು, ಭಾರತ ನೀಡಿದ ಬೃಹತ್ ಮೊತ್ತ ಚೇಸ್ ಮಾಡಿದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸುವ ಮೂಲಕ 67 ರನ್ ಗಳಿಂದ ಸೋಲನ್ನಪ್ಪಿತು. ಶ್ರೀಲಂಕಾ ಪರ ನಾಯಕ ದಸುನ್ ಶಾನಕ ಮತ್ತೊಮ್ಮೆ ಭಾರತದ ವಿರುದ್ಧ ಅಬ್ಬರಿಸಿದರು. ಅವರು 88 ಎಸೆತದಲ್ಲಿ 3 ಸಿಕ್ಸ್ ಮತ್ತು 12 ಫೋರ್ ನೆರವಿನಿಂದ 108 ರನ್ ಗಳಿಸಿ ಮಿಂಚಿದರು. ಅವರಂತೆ ಪಾತುಮ್ ನಿಸ್ಸಾಂಕ ಸಹ 80 ಎಸೆತದಲ್ಲಿ 72 ರನ್ ಗಳಿಸಿದರು. ಉಳಿದಿಂತೆ ಕುಸಲ್ ಮೆಂಡಿಸ್, ಅವಿಷ್ಕ ಫೆರ್ನಾಂಡೊ 5 ರನ್, ಧನಂಜಯ ಡಿ ಸಿಲ್ವ 47 ರನ್, ಚರಿತ್ ಅಸಲಂಕಾ ಶೂನ್ಯ, ವನಿಂದು ಹಸರಂಗ 16 ರನ್, ಚಾಮಿಕ ಕರುಣಾರತ್ನೆ 14 ರನ್, ದುನಿತ್ ವೆಲ್ಲಲಾಗೆ 0 ರನ್, ಕಸುನ್ ರಜಿತ 9 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
A fighting hundred from Dasun Shanaka, but India wrap up a comfortable win! 👊
They go 1-0 up in the ODI series 👏#INDvSL | 📝 https://t.co/E7dL6sWRIi pic.twitter.com/S79KNJfZPb
— ICC (@ICC) January 10, 2023
ಪಂದ್ಯದ ಆರಂಭದಿಂದಲೇ ಶ್ರೀಲಂಕಾ ಬ್ಯಾಟ್ಸ್ಮನ್ಗಳ ಮೇಲೆ ಹಿಡಿತ ಸಾಧಿಸಿದ ಭಾರತದ ಬೌಲರ್ಗಳು ಭರ್ಜರಿ ದಾಳಿ ನಡೆಸಿದರು. ಭಾರತದ ಪರ ವೇಗಿ ಉಮ್ರಾನ್ ಮಲಿಕ್ ಮತ್ತೊಮ್ಮೆ ಮಿಂಚುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅವರು 8 ಓವರ್ಗೆ 57 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ 2 ವಿಕೆಟ್ ಮತ್ತು ಮೊಹಮ್ಮದ್ ಶಮಿ, ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Virat Kohli: ಮತ್ತೊಂದು ಶತಕ, ಇನ್ನೊಂದು ದಾಖಲೆ; ಸಚಿನ್ ರೆಕಾರ್ಡ್ ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ
ಭಾರತದ ಪರ ತ್ರಿಮೂರ್ತಿಗಳ ಅಬ್ಬರ:
ಇನ್ನು, ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 67 ಎಸೆತದಲ್ಲಿ 9 ಫೋರ್ ಮತ್ತು 3 ಸಿಕ್ಸ್ಗಳ ನೆರವಿನಿಂದ 83 ರನ್ ಮತ್ತು ಶುಭ್ಮನ್ ಗಿಲ್ 60 ಎಸೆತದಲ್ಲಿ 11 ಫೋರ್ ಮೂಲಕ 70 ರನ್ ಗಳಿಸುವ ಮೂಲಕ ಶತಕ ವಂಚಿತರಾದರು. ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಇಂದು ಶತಕದ ಆಟವಾಡಿದರು, ಅವರು , 876 ಎಸೆತದಲ್ಲಿ 1 ಸಿಕ್ಸ್ ಮತ್ತು 12 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 28 ರನ್, ಕೆಎಲ್ ರಾಹುಲ್ 39 ರನ್, ಹಾರ್ದಿಕ್ ಪಾಂಡ್ಯ 14 ರನ್, ಅಕ್ಷರ್ ಪಟೇಲ್ 9 ರನ್, ಮೊಹಮ್ಮದ್ ಸಿರಾಜ್ 7 ರನ್, ಮೊಹಮ್ಮದ್ ಶಮಿ 4 ರನ್ ಗಳಿಸಿದರು.
ಭಾರತ-ಲಂಕಾ ಮುಂದಿನ ಪಂದ್ಯ ಯಾವಾಗ:
ಭಾರತ-ಶ್ರೀಲಂಕಾ ನಡುವಿನ 3 ಪಂದ್ಯಗಳ 2ನೇ ಪಂದ್ಯವು ಜನವರಿ 12ರಂದು ನಡೆಯಲಿದೆ. ಈ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ