ಭಾರತ ಮತ್ತು ಶ್ರೀಲಂಕಾ (IND sv SL) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ 73ನೇ ಶತಕವಾಗಿದೆ ಮತ್ತು ಇದು ಏಕದಿನ ಸರಣಿಯಲ್ಲಿ ವಿರಾಟ್ ಅವರ 45ನೇ ಶತಕವಾಗಿದೆ. ಹೊಸ ವರ್ಷದ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಶತಕ ಸಿಡಿಸಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ವಿರಾಟ್ 73ನೇ ಶತಕದ ಬಳಿಕ ಪತ್ನಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶೇಷ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ.
ಕೊಹ್ಲಿ ಶತಕಕ್ಕೆ ಅನುಷ್ಕಾ ವಿಶ್:
ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಯಶಸ್ಸಿಗೆ ಪತ್ನಿ ಅನುಷ್ಕಾ ಶರ್ಮಾಗೆ ಮನ್ನಣೆ ನೀಡುತ್ತಾರೆ. ಎರಡು ವರ್ಷಗಳ ಕಾಲ ವಿರಾಟ್ ಕೊಹ್ಲಿ ಫಾರ್ಮ್ನಲ್ಲಿ ಇಲ್ಲದಿದ್ದಾಗ, ಅನುಷ್ಕಾ ಶರ್ಮಾ ಅವರಿಗೆ ಅಮೂಲ್ಯವಾದ ಬೆಂಬಲವನ್ನು ನೀಡಿದರು. ಕಳೆದ ವರ್ಷ 71ನೇ ಅಂತರಾಷ್ಟ್ರೀಯ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಅನುಷ್ಕಾ ಮತ್ತು ಅವರ ಮಗಳು ವಾಮಿಕಾ ಇಬ್ಬರಿಗೂ ಧನ್ಯವಾದ ಹೇಳಿದ್ದರು. ಇದೀಗ ಅದೇ ರೀತಿ ಅನುಷ್ಕಾ ಸಹ ಕೊಹ್ಲಿಯ 73ನೇ ಶತಕಕ್ಕೆ ಇನ್ಸ್ಟಾಗ್ರಾಂ ನಲ್ಲಿ ಸ್ಟೋರಿ ಹಾಖುವ ಮೂಲಕ ವಿಶ್ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಶತಕದ ನಂತರ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಹಾಕಿದ್ದಾರೆ. ಈ ಸ್ಟೋರಿಯಲ್ಲಿ ಅನುಷ್ಕಾ ಭಾರತ vs ಶ್ರೀಲಂಕಾ ಪಂದ್ಯದ ವೇಳೆ ಟಿವಿ ಪರದೆಯ ಮೇಲೆ ವಿರಾಟ್ ಕೊಹ್ಲಿಯ ಫೋಟೋವನ್ನು ಬಂದಾಗ ಅದನ್ನು ಹಂಚಿಕೊಂಡಿದ್ದಾರೆ. ಅವಳು ಅದರ ಮೇಲೆ ಕೆಂಪು ಹೃದಯದ ಎಮೋಜಿಯನ್ನು ಕೂಡ ಸೇರಿಸಿದ್ದಾರೆ.
ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ:
ಈ ಶತಕದ ಮೂಲಕ ವಿರಾಟ್ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ದೇಶದಲ್ಲಿ 160 ಪಂದ್ಯಗಳಲ್ಲಿ 20 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ತಾಯ್ನಾಡಿನಲ್ಲಿ ಕೇವಲ 99 ಪಂದ್ಯಗಳಲ್ಲಿ 20 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಶತಕದ ಬಳಿಕ ಇದೀಗ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಇದಲ್ಲದೇ ಸಚಿನ್ ಶ್ರೀಲಂಕಾ ವಿರುದ್ಧ 8 ಶತಕ ಸಿಡಿಸಿದ್ದರೆ, ಕೊಹ್ಲಿ 9 ಶತಕ ಸಿಡಿಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. 34 ವರ್ಷದ ವಿರಾಟ್ ಕೊಹ್ಲಿ 484 ಪಂದ್ಯಗಳಲ್ಲಿ 73ನೇ ಏಕದಿನ ಶತಕ ಪೂರೈಸಿದ್ದಾರೆ. ಇದು ಏಕದಿನದಲ್ಲಿ ಕೊಹ್ಲಿ ಅವರ ಸತತ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಕಳೆದ ತಿಂಗಳು ಡಿಸೆಂಬರ್ನಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಶತಕ ಬಾರಿಸಿದ್ದರು.
ಇದನ್ನೂ ಓದಿ: Virat Kohli: 1043 ದಿನಗಳ ನಂತರ ಶತಕ ಗಳಿಸಿದ ಕೊಹ್ಲಿ, ರೆಕಾರ್ಡ್ಸ್ ಬ್ರೇಕ್ ಮಾಡೋದ್ರಲ್ಲಿ ಇವರೇ ಕಿಂಗ್!
IND vs SL ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಅವಿಷ್ಕ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ