• Home
  • »
  • News
  • »
  • sports
  • »
  • IND vs SL 1st ODI: ಕೊಹ್ಲಿ ಶತಕ, ರೋಹಿತ್-ಗಿಲ್ ಅದ್ಭುತ ಜೊತೆಯಾಟ; ಮೊದಲ ಏಕದಿನ ಪಂದ್ಯದ ರಿಯಲ್ ಹೀರೋಗಳು

IND vs SL 1st ODI: ಕೊಹ್ಲಿ ಶತಕ, ರೋಹಿತ್-ಗಿಲ್ ಅದ್ಭುತ ಜೊತೆಯಾಟ; ಮೊದಲ ಏಕದಿನ ಪಂದ್ಯದ ರಿಯಲ್ ಹೀರೋಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SL ODI: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

  • Share this:

ಭಾರತ ಕ್ರಿಕೆಟ್ ತಂಡ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೆಲುವಿನೊಂದಿಗೆ ಹೊಸ ವರ್ಷವನ್ನು ಆರಂಭಿಸಿದೆ. ಇದು ಏಕದಿನ ವಿಶ್ವಕಪ್‌ನ ವರ್ಷವಾಗಿರುವುದರಿಂದ ಟೀಂ ಇಂಡಿಯಾದ (Team India) ಪ್ರತಿಯೊಂದು ಗೆಲುವೂ ಮಹತ್ವದ್ದಾಗಿದೆ. ಗುವಾಹಟಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ODI (IND vs SL) ನಲ್ಲಿ, ಭಾರತವು ಲಂಕಾವನ್ನು 67 ರನ್‌ಗಳಿಂದ ಸೋಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಏಕದಿನ ಪಂದ್ಯ ಜನವರಿ 12 ರಂದು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ (Eden Gardens)​ ಮೈದಾನದಲ್ಲಿ ನಡೆಯಲಿದೆ. ಗುವಾಹಟಿ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಪ್ರಮುಖ ಹೀರೋಗಳು ಯಾರೆಂದು ನೋಡೋಣ ಬನ್ನಿ.


ಕೊಹ್ಲಿ ಸ್ಮರಣೀಯ ಇನ್ನಿಂಗ್ಸ್:


ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು ದೊಡ್ಡ ಸ್ಕೋರ್ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಹ್ಲಿ ತಮ್ಮ ODI ವೃತ್ತಿಜೀವನದ 45 ನೇ ಶತಕವನ್ನು ಗಳಿಸಿದರು, ಇದು ಭಾರತಕ್ಕೆ 7 ವಿಕೆಟ್‌ಗೆ 373 ರನ್‌ಗಳ ಬೃಹತ್ ಸ್ಕೋರ್ ಗಳಿಸಲು ಸಹಾಯ ಮಾಡಿತು. ಕೊಹ್ಲಿ 87 ಎಸೆತಗಳಲ್ಲಿ 113 ರನ್‌ ಗಳಿಸಿದರು. ಭಾರತದ ಮಾಜಿ ನಾಯಕನ ಅದೃಷ್ಟ ಕೂಡ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿತು. ಅವರು 52 ಮತ್ತು 81 ರನ್‌ಗಳ ಸ್ಕೋರ್‌ನಲ್ಲಿ 2 ಜೀವ ದಾನವನ್ನು ಪಡೆದರು, ಅದರ ಲಾಭವನ್ನು ಬಳಿಕ ಸಂಪೂರ್ಣವಾಗಿ ಪಡೆದುಕೊಂಡರು.


ರೋಹಿತ್- ಶುಭಮನ್ ಗಿಲ್ ಜೊತೆಯಾಟ:


ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೊತೆಗೆ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು, ಇನ್ ಫಾರ್ಮ್ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಟ್ಟ ವಿರೋದಗಳಿಗೆ ಇಬ್ಬರೂ ಸರಿಯಾಗಿ ಉತ್ತರ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 143 ರನ್ ಸೇರಿಸಿದರು. ಸಮತಟ್ಟಾದ ಪಿಚ್‌ನಲ್ಲಿ, ಶ್ರೀಲಂಕಾದ ವೇಗದ ಬೌಲರ್‌ಗಳ ವಿರುದ್ಧ ರೋಹಿತ್‌ ಉತ್ತಮ ಬ್ಯಾಟಿಂಗ್ ಮಾಡಿದರು. ಭಾರತದ ನಾಯಕ ಹಲವು ಪುಲ್ ಶಾಟ್ ಗಳನ್ನು ಆಡಿ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರೋಹಿತ್ 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದರು.


ಇದನ್ನೂ ಓದಿ: Virat Kohli: 'ವಿರಾಟ' ಶತಕದ ಹಿಂದಿದ್ಯಂತೆ ಆಹಾರದ ಗುಟ್ಟು! ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟರು ಕಿಂಗ್ ಕೊಹ್ಲಿ


ಶುಭಮನ್ ಗಿಲ್ 5ನೇ ಅರ್ಧಶತಕ:


ಶುಭಮನ್ ಗಿಲ್, ODI ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಗಿಲ್ 51 ಎಸೆತಗಳಲ್ಲಿ 5ನೇ ಅರ್ಧಶತಕ ಪೂರೈಸಿದರು. ಗಿಲ್ 60 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 70 ರನ್ ಗಳಿಸಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಶತಕದ ಬರ ನೀಗಿಸುವ ಯತ್ನದಲ್ಲಿದ್ದ ರೋಹಿತ್ ಇದಾದ ಬಳಿಕ ಚೊಚ್ಚಲ ಆಟಗಾರ ದಿಲ್ಶಾನ್ ಮಧುಶಂಕ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗಿಲ್ ಪ್ರದರ್ಶನ ಉತ್ತಮವಾಗಿರಲಿಲ್ಲ ಆದರೆ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.


ಉಮ್ರಾನ್ ಮಲಿಕ್ ಸೂಪರ್​ ಬೌಲಿಂಗ್:


ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಚೊಚ್ಚಲ ಪಂದ್ಯದಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಪ್ರಭಾವ ಬೀರುತ್ತಿದ್ದಾರೆ. ಉಮ್ರಾನ್ 8 ಓವರ್ ಗಳಲ್ಲಿ 57 ರನ್ ನೀಡಿ 3 ವಿಕೆಟ್ ಪಡೆದರು. ಅವರು ಆರಂಭಿಕರಾದ ಪಾತುಮ್ ನಿಸ್ಸಾಂಕ ಮತ್ತು ಚರಿತ್ ಅಸ್ಲಂಕಾ ಅವರ ವಿಕೆಟ್‌ಗಳನ್ನು ಪಡೆದರು. ಈ ವೇಳೆ ಉಮ್ರಾನ್ ತನ್ನ ವೇಗದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಬಲಗೈ ವೇಗದ ಬೌಲರ್ ಅತಿ ಕಡಿಮೆ ಸಮಯದಲ್ಲಿ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ.


ಆರಂಭಿಕರ ಮೇಲೆ ದಾಳಿ ಮಾಡಿದ ಸಿರಾಜ್:


ಮೊಹಮ್ಮದ್ ಸಿರಾಜ್ ಕೂಡ ಬೌಲಿಂಗ್‌ಗೆ ಉತ್ತಮ ಆರಂಭ ನೀಡಿದರು. ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಸಿರಾಜ್ ಆರಂಭಿಕ ಅವಿಷ್ಕಾ ಫೆರ್ನಾಂಡೊ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆಗ ಶ್ರೀಲಂಕಾದ ಒಟ್ಟು ಸ್ಕೋರ್ ಗೆ 19 ರನ್ ಆಗಿತ್ತು. ಬಳಿಕ ಅವಿಷ್ಕಾ 5 ರನ್ ಗಳಿಸಿ ಔಟಾದರು. ಇದಾದ ಬಳಿಕ ಸಿರಾಜ್ ಅಪಾಯಕಾರಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಸಾಲ್ ಮೆಂಡಿಸ್ ಅವರನ್ನು ಬೌಲ್ಡ್ ಮಾಡಿ ಭಾರತಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟರು. ಮೆಂಡಿಸ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸಿರಾಜ್ 7 ಓವರ್ ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು.

Published by:shrikrishna bhat
First published: