ಭಾರತ ತಂಡ ಜನವರಿ 7ರಂದು ಶ್ರೀಲಂಕಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದೆ. ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 229 ರನ್ ಗಳ ಗುರಿ ನೀಡಿದ್ದರು. ಭಾರತ ತಂಡದ ಪರ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ಶತಕ (112) ಸಿಡಿಸಿದ್ದಾರೆ. ಈ ಶತಕದೊಂದಿಗೆ ಸೂರ್ಯ 2023ರ ಮೊದಲ ಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
45 ಎಸೆತಗಳಲ್ಲಿ ಶತಕ:
ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಸ್ಫೋಟಕ ಆರಂಭವನ್ನು ನೀಡಿದರು. 45 ಎಸೆತಗಳಲ್ಲಿ ಶತಕ ಪೂರೈಸಿದ ಅವರು 51 ಎಸೆತಗಳಲ್ಲಿ ಒಟ್ಟು 112 ರನ್ ಗಳಿಸಿದರು. ಈ ಆಕರ್ಷಕ ಶತಕದಲ್ಲಿ ಬರೋಬ್ಬರಿ 9 ಸಿಕ್ಸ್ ಮತ್ತು 7 ಫೋರ್ಗಳು ಸೇರಿದ್ದವು. ಹಾಗಿದ್ದರೆ ಕಳೆದ 11 ವರ್ಷದಲ್ಲಿ ಯಾವೆಲ್ಲಾ ಆಟಗಾರರು ವರ್ಷದ ಮೊದಲು ಶತಕ ಸಿಡಿಸಿದರು ಎನ್ನುವುದನ್ನು ನೋಡೋಣ ಬನ್ನಿ.
ಕಳೆದ 11 ವರ್ಷಗಳಲ್ಲಿ ಮೊದಲ ಶತಕವನ್ನು ಗಳಿಸಿದವರು:
2012: ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ
2013: ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ
2014: ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ODIಗಳಲ್ಲಿ
2015: KL ರಾಹುಲ್, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗದಲ್ಲಿ
2016: ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ ODIನಲ್ಲಿ
2017: ವಿರಾಟ್ ಕೊಹ್ಲಿ, ಏಕದಿನದಲ್ಲಿ ಇಂಗ್ಲೆಂಡ್ ವಿರುದ್ಧ
2018: ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ
2019: ಚೇತೇಶ್ವರ ಪೂಜಾರ, ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ
2020: ರೋಹಿತ್ ಶರ್ಮಾ, ODIನಲ್ಲಿ ಆಸ್ಟ್ರೇಲಿಯಾ ವಿರುದ್ಧ
2021: ರೋಹಿತ್ ಶರ್ಮಾ,
2022: ರಿಷಭ್ ಪಂತ್, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ
2023: ಸೂರ್ಯಕುಮಾರ್ ಯಾದವ್, ಶ್ರೀಲಂಕಾ ವಿರುದ್ಧ ಟಿ20 ಪಂದ್ಯ.
ಸೂರ್ಯಕುಮಾರ್ ಶತಕಕ್ಕೆ ಕ್ರಿಕೆಟ್ ದಿಗ್ಗಜರ ಮೆಚ್ಚುಗೆ:
ಸೂರ್ಯಕುಮಾರ್ ಅವರ ಹೊಡೆತದ ಕುರಿತು ವಿವರಣೆಗಾರ ಹರ್ಷಾ ಭೋಗ್ಲೆ, ಅನೇಕ ಬ್ಯಾಟ್ಸ್ಮನ್ಗಳು ತಮ್ಮ ಕನಸಿನಲ್ಲಿಯೂ ಇದನ್ನು ಮಾಡಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಕಾಶದ ಚಿತ್ರವನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಬೆಂಕಿಯ ಎರಡು ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಚಪ್ಪಾಳೆ ತಟ್ಟುತ್ತಲೇ ಬ್ಯಾಟರ್ ಅನ್ನು ಶ್ಲಾಘಿಸಿದ್ದಾರೆ. ಇನ್ನು, ಇಯಾನ್ ಬಿಷಪ್, ಮೊಹಮ್ಮದ್ ಕೈಫ್, ಆರ್ಪಿ ಸಿಂಗ್, ಆಕಾಶ್ ಚೋಪ್ರಾ, ಐಸ್ಲ್ಯಾಂಡ್ ಕ್ರಿಕೆಟ್ ಮತ್ತು ಇತರರು ಸೂರ್ಯ ಅವರ ಬ್ಯಾಟಿಂಗ್ಗ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಛತ್ತೀಸ್ಗಢ ಕೇಡರ್ನ ಐಎಎಸ್ ಆಗಿರುವ ಅವ್ನಿಶ್ ಸರಣ್, ಆಕಾಶದ ಶಾಟ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರ ಮೇಲೆ, ಈ ಶಾಟ್ ಅನ್ನು ಹೇಗೆ ಆಡಲಾಯಿತು ಎಂಬುದನ್ನು ಜನರು ವಿಭಿನ್ನ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದರು. ಇದು ಸೂರ್ಯನ ಹೊರತಾಗಿ ಯಾರಿಂದಲೂ ಸಾಧ್ಯವಿಲ್ಲ ಎಂದರು ಕೆಲವರು ಶ್ಲಾಘಿಸಿದ್ದಾರೆ.
ಅಭಿಮಾನಿಗಳು ಅನೇಕ ತಮಾಷೆಯ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಸೂರ್ಯಕುಮಾರ್ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 112 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಭಾರತ 228 ರನ್ ಗಳಿಸಿತು. ಇದಾದ ನಂತರ ಶ್ರೀಲಂಕಾವನ್ನು 137 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ ಪಂದ್ಯ ಮತ್ತು ಸರಣಿಯನ್ನು ಗೆದ್ದುಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ