ಶನಿವಾರ ರಾಜ್ಕೋಟ್ನಲ್ಲಿ ಶ್ರೀಲಂಕಾ (IND vs SL) ವಿರುದ್ಧ ನಡೆದ ಟಿ20 ಪಂದ್ಯದಲ್ಲಿ, ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಸೂರ್ಯ ಅವರ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗೆ ಲಂಕಾ ಬೌಲರ್ಗಳು ಸುಸ್ತಾಗಿದ್ದಂತೂ ನಿಜ. ಅವರು ಶ್ರೀಲಂಕಾ ಪಂದ್ಯದಲ್ಲಿ ಸ್ಕೈ 7 ಬೌಂಡರಿ ಹಾಗೂ 9 ಸಿಕ್ಸರ್ಗಳನ್ನು ಬಾರಿಸುವ ಮೂಲಕ 112 ರನ್ಗಳ ಬೃಹತ್ ಇನ್ನಿಂಗ್ಸ್ ಆಡಿದರು. ಈ ಮೂಲಕ ಅವರು ತಮ್ಮ ಟಿ20 ಕ್ರಿಕೆಟ್ನಲ್ಲಿ (T20 Cricket) 3ನೇ ಶತಕ ಸಿಡಿಸಿದ್ದಲ್ಲದೇ 2023ರ ಚೊಚ್ಚಲ ಶತಕವನ್ನೂ ಸಿಡಿಸಿ ಮಿಂಚಿದರು. ಈ ಮೂಲಕ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಸರಣಿ ಜಯ ಗಳಿಸಿತು.
ಲಗಾನ್ ಸಿನಿಮಾ ನೆನಪಿಸಿದ SKY:
ಶ್ರೀಲಂಕಾದ ಬೌಲರ್ ಮಧುಶಂಕ 13ನೇ ಓವರ್ ಬೌಲ್ ಮಾಡಲು ಬಂದಾಗ ಸೂರ್ಯಕುಮಾರ್ ಯಾದವ್ ಆಫ್ ಸ್ಟಂಪ್ ಹೊರಗೆ ಫ್ಲಾಟ್ ಫುಲ್ ಟಾಸ್ ಬೌಲ್ ಅನ್ನು ಬೌಂಡರಿ ಗೆರೆ ದಾಟಿಸಿದರು. ಸೂರ್ಯಕುಮಾರ್ ಈ ಶಾಟ್ನ್ನು ಮುಂದಕ್ಕೆ ತಿರುಗಿಸಿ ಸಿಕ್ಸರ್ ಸಿಡಿಸಿದರು. ಶಾಟ್ ಮುಗಿಸಿದ ಸೂರ್ಯ ಕ್ರೀಸ್ ನಿಂದ ಹೊರ ಹೋಗಿದ್ದಲ್ಲದೆ, ಪಿಚ್ ನಿಂದ ಹೊರಕ್ಕೆ ಹೋಗಿ ಬೌಲ್ಗೆ ಫಿನಿಶಿಂಗ್ ಟಚ್ ನೀಡಿದರು. ಈ ಹೊಡೆತವನ್ನು ನೋಡಿ ಎಲ್ಲರೂ ಒಮ್ಮೆ ಅಚ್ಚರಿಯಾಗಿದ್ದಂತೂ ಸತ್ಯ. ಈ ಶಾಟ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತ್ತು. ಅದರಲ್ಲಿಯೂ ಲಗಾನ್ ಚಿತ್ರದ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ.
This is where he got the inspiration from 😁#SuryakumarYadav #Surya pic.twitter.com/wT3OhIzpIo
— Ali shaikh (@alishaikh3310) January 7, 2023
ಸೂರ್ಯಕುಮಾರ್ ಅವರ ಹೊಡೆತದ ಕುರಿತು ವಿವರಣೆಗಾರ ಹರ್ಷಾ ಭೋಗ್ಲೆ, ಅನೇಕ ಬ್ಯಾಟ್ಸ್ಮನ್ಗಳು ತಮ್ಮ ಕನಸಿನಲ್ಲಿಯೂ ಇದನ್ನು ಮಾಡಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಕಾಶದ ಚಿತ್ರವನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಬೆಂಕಿಯ ಎರಡು ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಚಪ್ಪಾಳೆ ತಟ್ಟುತ್ತಲೇ ಬ್ಯಾಟರ್ ಅನ್ನು ಶ್ಲಾಘಿಸಿದ್ದಾರೆ. ಇನ್ನು, ಇಯಾನ್ ಬಿಷಪ್, ಮೊಹಮ್ಮದ್ ಕೈಫ್, ಆರ್ಪಿ ಸಿಂಗ್, ಆಕಾಶ್ ಚೋಪ್ರಾ, ಐಸ್ಲ್ಯಾಂಡ್ ಕ್ರಿಕೆಟ್ ಮತ್ತು ಇತರರು ಸೂರ್ಯ ಅವರ ಬ್ಯಾಟಿಂಗ್ಗ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಛತ್ತೀಸ್ಗಢ ಕೇಡರ್ನ ಐಎಎಸ್ ಆಗಿರುವ ಅವ್ನಿಶ್ ಸರಣ್, ಆಕಾಶದ ಶಾಟ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರ ಮೇಲೆ, ಈ ಶಾಟ್ ಅನ್ನು ಹೇಗೆ ಆಡಲಾಯಿತು ಎಂಬುದನ್ನು ಜನರು ವಿಭಿನ್ನ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದರು. ಇದು ಸೂರ್ಯನ ಹೊರತಾಗಿ ಯಾರಿಂದಲೂ ಸಾಧ್ಯವಿಲ್ಲ ಎಂದರು ಕೆಲವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Suryakumar Yadav: ರೋಹಿತ್ ದಾಖಲೆ ಮುರಿದ ಸೂರ್ಯಕುಮಾರ್! SKY ಶತಕಕ್ಕೆ ರೆಕಾರ್ಡ್ಸ್ಗಳೆಲ್ಲಾ ಪುಡಿ ಪುಡಿ
ಅಭಿಮಾನಿಗಳು ಅನೇಕ ತಮಾಷೆಯ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಸೂರ್ಯಕುಮಾರ್ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 112 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಭಾರತ 228 ರನ್ ಗಳಿಸಿತು. ಇದಾದ ನಂತರ ಶ್ರೀಲಂಕಾವನ್ನು 137 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ ಪಂದ್ಯ ಮತ್ತು ಸರಣಿಯನ್ನು ಗೆದ್ದುಕೊಂಡಿತು.
ಭಾರತ-ಲಂಕಾ ಏಕದಿನ ಸರಣಿ:
ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1ರಿಮದ ಗೆದ್ದು ಬೀಗಿದೆ. ಇದೀಗ ಜನವರಿ 10ರಿಂದ ಉಭಯ ತಂಡಗಳು 3 ಪಂದ್ಯಗಳ ಏಖದಿನ ಸರಣಿಯಲ್ಲಿ ಮತ್ತೆ ಮುಖಾಮುಖಿ ಆಗಲಿದೆ. ಬಳಿಕ ಜನವರಿ 12 ಮತ್ತು ಜನವರಿ 15ರಂದು ಕ್ರಮವಾಗಿ 2 ಮತ್ತು 3ನೇ ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ