ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡಗಳು (IND vs SL 3 ನೇ T20) ಇಂದು ಮೂರನೇ ಮತ್ತು ನಿರ್ಣಾಯಕ T20 ಪಂದ್ಯದಲ್ಲಿ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ (Saurashtra Cricket Association Stadium) ಮುಖಾಮುಖಿ ಆಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ 229 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡವು 16. 4 ಓವರ್ಗಳಲ್ಲಿ 137 ರನ್ ಗಳಿಸುವ ಮೂಲಕ 91 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಭಾರತ ತಂಡ 3 ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಭರ್ಜರಿಯಾಗಿ ಸರಣಿ ಜಯಿಸಿದೆ. ಈ ಮೂಲಕ ಸರಣಿ ಗೆಲ್ಲಬೆಕೆಂದಿದ್ದ ಲಂಕಾ ಕನಸಿಗೆ ತಣ್ಣೀರೆರಚಿದರು.
ಭರ್ಜರಿ ಬೌಲಿಂಗ್ ಮಾಡಿದ ಟೀಂ ಇಂಡಿಯಾ:
ಟೀಂ ಇಂಡಿಯಾ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾಗೆ ಭಾರತೀಯ ಬೌಲರ್ಗಳು ಇನ್ನಿಲ್ಲದಂತೆ ಕಾಡಿದರು. 2ನೇ ಪಂದ್ಯದಲ್ಲಿ 5 ನೋಬಾಲ್ ಎಸೆದು ಎಲ್ಲರ ಟೀಕೆಗೆ ಗುರಿಯಾಗಿದ್ದ ಅರ್ಷದೀಪ್ ಸಿಂಗ್ ಇಂದು ಭರ್ಜರಿ ಬೌಲಿಂಗ್ ದಾಳಿ ಮಾಡಿದರು. ಅವರು 2.4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಉಮ್ರಾನ್ ಮಲಿಕ್, ಚಹಾಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು.
Arshdeep Singh picks up the final wicket of the innings as #TeamIndia win by 91 runs and clinch the series 2-1.
This is also India's 25th bilateral series win against Sri Lanka in India.#INDvSL @mastercardindia pic.twitter.com/AT7UyqA6hf
— BCCI (@BCCI) January 7, 2023
ಶ್ರೀಲಂಕಾ ತಂಡವು 16. 4 ಓವರ್ಗಳಲ್ಲಿ 137 ರನ್ ಗಳಿಸುವ ಮೂಲಕ 91 ರನ್ ಗಳಿಂದ ಸೋಲನ್ನಪ್ಪಿತು. ದಸುನ್ ಶಾನಕ 23 ರನ್, ಪಾತುಮ್ ನಿಸ್ಸಾಂಕ 15 ರನ್, ಕುಸಲ್ ಮೆಂಡಿಸ್ 23 ರನ್, ಧನಂಜಯ ಡಿ ಸಿಲ್ವಾ 22 ರನ್, ಚರಿತ್ ಅಸಲಂಕಾ 19 ರನ್, ಅವಿಷ್ಕ ಫರ್ನಾಂಡೊ 1 ರನ್, ವನಿಂದು ಹಸರಂಗ 9 ರನ್, ಚಮಿಕಾ ಕರುಣಾರತ್ನೆ ಶೂನ್ಯ, ಮಹೀಶ್ ತೀಕ್ಷಣ 2 ರನ್, ಕಸುನ್ ರಜಿತಾ 9 ರನ್, ದಿಲ್ಶನ್ ಮಧುಶಂಕ 1 ರನ್ ಗಳಿಸಿದರು.
ಶತಕ ಸಿಡಿಸಿ ಮಿಂಚಿದ್ದ ಸೂರ್ಯಕುಮಾರ್:
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಇಂದು ಸೂರ್ಯಕುಮಾರ್ ಯಾದವ್ ಮತ್ತೆ ಅಬ್ಬರಿಸಿದರು. ಸಿಕ್ಸ್ಗಳ ಸುರಿಮಳೆಗೈದ ಯಾದವ್ ಭರ್ಜರಿಯಾಗಿ ಟಿ20 ಕ್ರಿಕೆಟ್ನಲ್ಲಿ ತಮ್ಮ 3ನೇ ಶತಕ ಸಿಡಿಸಿದರು. ಈ ಮೂಲಕ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದರು. ಭಾರತದ ಪರ ಸೂರ್ಯಕುಮಾರ್ ಯಾದವ್ 52 ಎಸೆತದಲ್ಲಿ 9 ಸಿಕ್ಸ್ ಮತ್ತು 7 ಪೋರ್ಗಳ ಮೂಲಕ 112 ರನ್ ಗಳಿಸಿದರು. ಉಳದಂತೆ, ಇಶಾನ್ ಕಿಶನ್ 1 ರನ್, ಶುಭ್ಮನ್ ಗಿಲ್ 46 ರನ್, ರಾಹುಲ್ ತ್ರಿಪಾಠಿ 35 ರನ್, ನಾಯಕ ಹಾರ್ದಿಕ್ ಪಾಂಡ್ಯ 4 ರನ್, ದೀಪಕ್ ಹೂಡ 4 ರನ್ ಮತ್ತು ಅಕ್ಷರ್ ಪಟೇಲ್ 21 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟುವಲ್ಲಿ ಪ್ರಮುಖಪಾತ್ರವಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ