• Home
  • »
  • News
  • »
  • sports
  • »
  • Virat Kohli: ಈಡನ್​ ಗಾರ್ಡನ್​ನಲ್ಲಿ ವಿರಾಟ್​​ ಕೊಹ್ಲಿ ಭರ್ಜರಿ ಡ್ಯಾನ್ಸ್! ಹುಚ್ಚೆದ್ದು ಕುಣಿದ ಫ್ಯಾನ್ಸ್

Virat Kohli: ಈಡನ್​ ಗಾರ್ಡನ್​ನಲ್ಲಿ ವಿರಾಟ್​​ ಕೊಹ್ಲಿ ಭರ್ಜರಿ ಡ್ಯಾನ್ಸ್! ಹುಚ್ಚೆದ್ದು ಕುಣಿದ ಫ್ಯಾನ್ಸ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಭಾರತ ಏಕದಿನ ವಿಶ್ವಕಪ್‌ನ ವರ್ಷವನ್ನು ಅದ್ದೂರಿಯಾಗಿ ಆರಂಭಿಸಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ.

  • Share this:

ಭಾರತ ಜನವರಿ 12 ರಂದು ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ (IND vs SL) ODI ಸರಣಿಯ ಎರಡನೇ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ (Virat Kohli) ಎರಡನೇ ಏಕದಿನ ಪಂದ್ಯದಲ್ಲಿ ಅಷ್ಟಾಗಿ ಮಿಂಚಲಿಲ್ಲ. ಅವರು ಕೇವಲ 4 ರನ್​​ಗೆ ವಿಕೆಟ್​ ಒಪ್ಪಿಸಿದರು. ಇದರ ಹೊರತಾಗಿಯೂ ಅವರು ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪಂದ್ಯದ ವೇಳೆ ವಿರಾಟ್ ಕೊಹ್ಲಿ ಸಲ್ಮಾನ್ ಖಾನ್ (Salman Khan) ಅವರ ರೀತಿಯಲ್ಲಿ ಡ್ಯಾನ್ಸ್​ (Dance) ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಕೊಹ್ಲಿ ಜೊತೆ ಟೀಂ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಸಹ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.


ಕೊಹ್ಲಿ-ಕಿಶನ್ ಭರ್ಜರಿ ಡ್ಯಾನ್ಸ್:


ಇನ್ನು, ವಿಡಿಯೋದಲ್ಲಿ ಫೀಲ್ಡಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಸಲ್ಮಾನ್ ಖಾನ್ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದಂತೆ ಕಂಡುಬಂದಿದೆ. ನಂತರ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ವಿರಾಟ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.ಇಬ್ಬರೂ ಆಟಗಾರರು ಡ್ಯಾನ್ಸ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ಇಶಾನ್ ಕಿಶನ್ ಇದುವರೆಗೆ ಈ ಸರಣಿಯಲ್ಲಿ ಪ್ಲೇಯಿಂಗ್-11ರ ಭಾಗವಾಗಿಲ್ಲ. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಬಿರುಸಿನ ದ್ವಿಶತಕ ಬಾರಿಸುವ ಮೂಲಕ ಹಲವು ದೊಡ್ಡ ದಾಖಲೆಗಳನ್ನು ನಾಶಪಡಿಸಿದ್ದರು. ಆದರೆ ಇಂತಹ ಯುವ ಆಟಗಾರನಿಗೆ ಈ ಬಾರಿ ಒಂದೇ ಒಂದು ಅವಕಾಶ ನೀಡಿಲ್ಲ.


2023ರಲ್ಲಿ ಕೊಹ್ಲಿ ಶತಕದ ಆರಂಭ:


ಟೀಂ ಇಂಡಿಯಾದ ಮಾಜಿ ನಾಯಕ ಕೊಹ್ಲಿ ಮೂರು ವರ್ಷಗಳ ನಂತರ ಏಷ್ಯಾಕಪ್ ವೇಳೆ ಶತಕದ ಬರವನ್ನು ನೀಗಿಸಿದರು. ಆ ಬಳಿಕ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲೂ ಭರ್ಜರಿ ಶತಕ ಬಾರಿಸಿದ್ದರು. ಅದೇ ಸಮಯದಲ್ಲಿ, ಕೊಹ್ಲಿ ಅದ್ಭುತ ಶತಕದೊಂದಿಗೆ 2023 ಅನ್ನು ಪ್ರಾರಂಭಿಸಿದ್ದಾರೆ. ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಪಂದ್ಯದಲ್ಲಿ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಇನ್ನು, ಶ್ರೀಲಂಕಾ ವಿರುದ್ಧದ ಸರಣಿಯ ಕೊನೆಯ ಪಂದ್ಯ ತಿರುವನಂತಪುರದಲ್ಲಿ ಜನವರಿ 15 ರಂದು ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಈ ಸರ್ಣಿ ಗೆಲುವಿನ ಮೂಲಕ ಭಾರತ ತಂಡ ಏಕದಿನ ವಿಶ್ವಕಪ್‌ಗೆ ಸಂಪೂರ್ಣ ಸಜ್ಜಾಗಿದೆ.


ಇದನ್ನೂ ಓದಿ: Hardik Pandya: ಮೈದಾನದಲ್ಲೇ ಪಾಂಡ್ಯ ಉಗ್ರ ರೂಪ! ಸಹ ಆಟಗಾರನಿಗೆ ಕೆಟ್ಟದಾಗಿ ಬೈದ ಹಾರ್ದಿಕ್


ಸಿಟ್ಟಾದ ಹಾರ್ದಿಕ್ ಪಾಂಡ್ಯ:


ಭಾರತ ಮತ್ತು ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಕೋಪಗೊಂಡ ಘಟನೆ ನಡೆದಿದೆ. ಹೌದು, ಓವರ್ ಮುಗಿದ ನಂತರ ತಂಡದ ಸದಸ್ಯರ ಬಳಿಗೆ ಬಂದು ನೀರು ಕೊಡುವುದು ಚಹಾಲ್ ಅವರ ಜವಾಬ್ದಾರಿಯಾಗಿತ್ತು. ಚಹಾಲ್ ಬಹುಶಃ ನೀರು ತರುವ ಬದಲು ಡಗ್‌ಔಟ್‌ನಲ್ಲಿ ಕುಳಿತುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸಿಟ್ಟಾದ ಹಾರ್ದಿಕ್​ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.

Published by:shrikrishna bhat
First published: