ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (IND vs SL) ಇಂದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದು ಬಹುತೇಕ ಖಚಿತ ಎಂಬಂತಾಗಿದೆ. ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Greenfield International Stadium) ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಭಾರತದ ಪರ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕದ ಮೂಲಕ ತಂಡವು ಬೃಹತ್ ಮೊತ್ತ ದಾಖಲಿಸಿತು. ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ 391 ರನ್ಗಳ ಟಾರ್ಗೆಟ್ ನೀಡಿದೆ.
ಕೊಹ್ಲಿ-ಗಿಲ್ ಭರ್ಜರಿ ಶತಕ:
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 42 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕಗಳ ಜೊತೆಯಾಟ ಮಾತ್ರವಲ್ಲದೇ ಇಬ್ಬರೂ ಸಹ ಭರ್ಜರಿ ಶತಕ ಸಿಡಿಸಿದರು. ಶುಭ್ಮನ್ ಗಿಲ್ 97 ಎಸೆತದಲ್ಲಿ 2 ಸಿಕ್ಸ್ ಮತ್ತು 14 ಫೋರ್ ಮೂಲಕ 116 ರನ್ ಗಳಿಸಿದರು. ಅದರಂತೆ ವಿರಾಟ್ ಕೊಹ್ಲಿ ಸಹ 110 ಎಸೆತದಲ್ಲಿ 8 ಸಿಕ್ಸ್ ಮತ್ತು 13 ಫೋರ್ ಮೂಲಕ ಭರ್ಜರಿ 166 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಶ್ರೇಯಸ್ ಐಯ್ಯರ್ 38 ರನ್, ಕೆಎಲ್ ರಾಹುಲ್ 7 ರನ್, ಸೂರ್ಯಕುಮಾರ್ ಯಾದವ್ 4 ರನ್ ಮತ್ತು ಅಕ್ಷರ್ ಪಟೇಲ್ 2 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಗಳಿಸುವಲ್ಲಿ ಸಹಾಯಕರಾದರು.
ಗಿಲ್-ಕೊಹ್ಲಿ ಭರ್ಜರಿ ಶತಕ:
ಇನ್ನು, ಕಳೆದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿದಿದ್ದ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಇಂದು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಸಂತಸವನ್ನು ಇಮ್ಮಡಿಗೊಳಿಸಿದರು. ಇಬ್ಬರೂ ಸಹ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಶುಭ್ ಮನ್ ಗಿಲ್ ಏಕದಿನ ಮಾದರಿಯಲ್ಲಿ ತಮ್ಮ ವೃತ್ತಿ ಜೀವನದ 2ನೇ ಶತಕ ಸಿಡಿಸಿದರೆ, ಇತ್ತ ವಿರಾಟ್ ಕೊಹ್ಲಿ ಏಕದಿನದಲ್ಲಿ 46ನೇ ಶತಕ ಮತ್ತು ಒಟ್ಟಾರೆಯಾಗಿ 74 ಶತಕಗಳನ್ನು ಗಳಿಸಿದರು. ಕೊನೆಯ 4 ಏಕದಿನ ಪಂದ್ಯದಲ್ಲಿ ಕೊಹ್ಲಿ 3 ಪಂದ್ಯದಲ್ಲಿ ಶತಕದ ಆಟವಾಡಿದರು. ಈ ಮೂಲಕ ಕೊಹ್ಲಿ ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ.
Innings Break!
A stupendous knock of 166* from @imVkohli & a fine 116 by @ShubmanGill guides #TeamIndia to a formidable total of 390/5.
Scorecard - https://t.co/muZgJH3f0i #INDvSL @mastercardindia pic.twitter.com/aGHQU7PQVw
— BCCI (@BCCI) January 15, 2023
ಇತ್ತ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಲಂಕಾ ಬೌಲರ್ಗಳು ಭಾರತೀಯ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಶ್ರೀಲಂಕಾ ಪರ ಕಸುನ್ ರಜಿತಾ ಮತ್ತು ಲಹಿರು ಕುಮಾರ ತಲಾ 2 ವಿಕೆಟ್ ಪಡೆದರೆ ಚಾಮಿಕಾ ಕರುಣಾರತ್ನೆ 1 ವಿಕೆಟ್ ಪಡೆದರು.
ಇದನ್ನೂ ಓದಿ: Virat Kohli: ಶ್ರೀಲಂಕಾ ವಿರುದ್ಧ ಕೊಹ್ಲಿ ಸ್ಫೋಟಕ ಶತಕ, ಮೈದಾನದಲ್ಲಿಯೇ ಲಂಕಾ ಆಟಗಾರನಿಗೆ ಗಂಭೀರ ಗಾಯ
ಭಾರತ-ಲಂಕಾ ಹೆಡ್ ಟು ಹೆಡ್:
ಇನ್ನು, ಭಾರತ ಮತ್ತು ಶ್ರೀಲಂಕಾ ಈವರೆಗೂ ಒಟ್ಟು 164 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 95 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 57 ಪಂದ್ಯಗಳಲ್ಲಿ ಜಯ ಗಳಿಸಿದೆ. ಉಳಿದಂತೆ 11 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಒಂದು ಪಂದ್ಯ ಟೈ ಗೊಂಡಿತ್ತು. ಇನ್ನು, ಕಳೆದ 2 ಪಂದ್ಯಗಳನ್ನೂ ಗೆದ್ದಿರುವ ಭಾರತ ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ ಕೇವಲ 1 ಏಕದಿನ ಪಂದ್ಯವನ್ನಾಡಿದೆ.
ಭಾರತ-ಶ್ರೀಲಂಕಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ಪ್ಲೇಯಿಂಗ್ 11: ಎನ್ ಫೆರ್ನಾಂಡೋ, ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಚರಿತ್ ಅಸ್ಲಂಕಾ, ಅಶೆಲ್ ಭಂಡಾರ, ದಸುನ್ ಶನಕ, ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತಾ ಮತ್ತು ಲಹಿರು ಕುಮಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ