ಭಾರತ ಕ್ರಿಕೆಟ್ ಮತ್ತು ಶ್ರೀಲಂಕಾ (IND vs SL) ತಂಡದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಮೈದಾನದಲ್ಲಿಯೇ ದೊಡ್ಡ ಅವಘಡ ಸಂಭವಿಸಿದೆ. ವಿರಾಟ್ ಕೊಹ್ಲಿ (Virat Kohli) ಹೊಡೆದ ಹೊಡೆತವನ್ನು ತಡೆಯಲು ಯತ್ನಿಸಿದ ಶ್ರೀಲಂಕಾದ (Sri Lanka) ಇಬ್ಬರು ಆಟಗಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೌಂಡರಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ ನಂತರ, ಇಬ್ಬರೂ ಆಟಗಾರರನ್ನು ಸ್ಟ್ರೆಚರ್ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿದೆ. ಹೀಗಾಗಿ ಪಂದ್ಯವನ್ನು ಕೆಲ ಕ್ಷಣಗಳ ವರೆಗೆ ಸ್ಥಗಿತ ಗೊಳಿಸಲಾಗಿತ್ತು. ಆದರೆ ಈವರೆಗೂ ಈ ಇಬ್ಬರು ಆಟಗಾರರರ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮೈದಾದಲ್ಲಿಯೇ ಡಿಕ್ಕಿ ಹೊಡೆದ ಪ್ಲೇಯರ್ಸ್:
ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದ ವೇಳೆ ಆಘಾತಕಾರಿ ಘಟನೆ ನಡೆದಿದೆ. 42.5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಶಾಟ್ ಲೆಗ್ ಕಡೆ ಬಾರಿಸಿದ ಬೌಂಡರಿಯನ್ನು ತಡೆಯಲು ಲಂಕಾ ಆಟಗಾರರು ಓಡಿ ಬಂದರು. ಈ ಹೊಡೆತವನ್ನು ನಿಲ್ಲಿಸಲು ಬಂದ ಶ್ರೀಲಂಕಾದ ಇಬ್ಬರು ಆಟಗಾರರಾದ ಅಶೆನ್ ಬಂಡಾರಾ ಮತ್ತು ಜೆಫ್ರಿ ವಾಂಡರ್ಸೆ ವೇಗವಾಗಿ ಓಡುತ್ತಿರುವಾಗ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದಿದ್ದಾರೆ. ವಾಂಡರ್ಸೆ ಜಾರಿ ಬಂಡಾರ ಅವರನ್ನು ನೇರವಾಗಿ ಡಿಕ್ಕಿ ಹೊಡೆದರು. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರಿಂದ ಪಂದ್ಯವನ್ನು ಬಹಳ ಹೊತ್ತು ನಿಲ್ಲಿಸಬೇಕಾಯಿತು.
Two Sri Lankan players suffered massive collision while fielding in #INDvsSL 3rd ODI #CricketTwitter #SLvsIND pic.twitter.com/sz9SIvTtoz
— Hot Talks With Arnav😁 (@ArnavHot) January 15, 2023
ಕೊಹ್ಲಿ ಹೊಡೆದ ಶಾಟ್ ನಿಲ್ಲಿಸುವಾಗ ಗಾಯಗೊಂಡಿದ್ದ ಬಂಡಾರ ಮತ್ತು ವಾಂಡರ್ಸೆ ಅವರನ್ನು ಸ್ಟ್ರೆಚರ್ ಮೇಲೆ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಈ ಇಬ್ಬರು ಆಟಗಾರರ ಸ್ಥಾನದಲ್ಲಿ ಶ್ರೀಲಂಕಾದ ಮೀಸಲು ಆಟಗಾರರು ಆಡಲು ಬಂದರು. ಇಬ್ಬರೂ ಆಟಗಾರರು ತೀವ್ರವಾಗಿ ಗಾಯಗೊಂಡಿದ್ದಾರೆ, ಆದ್ದರಿಂದ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
IND vs SL 3rd ODI: LIVE सामन्यात धक्कादायक घटना
Jeffrey Vandersay, Ashen Bandara, IND vs SL 3rd ODI pic.twitter.com/sArftUKcqX
— Saurabh Spotlight (@spot_the_lights) January 15, 2023
ಇದನ್ನೂ ಓದಿ: Virat Kohli: ಶ್ರೀಲಂಕಾ ವಿರುದ್ಧ ಕೊಹ್ಲಿ ಸ್ಫೋಟಕ ಶತಕ, ಮೈದಾನದಲ್ಲಿಯೇ ಲಂಕಾ ಆಟಗಾರನಿಗೆ ಗಂಭೀರ ಗಾಯ
ಭಾರತ-ಶ್ರೀಲಂಕಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ಪ್ಲೇಯಿಂಗ್ 11: ಎನ್ ಫೆರ್ನಾಂಡೋ, ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಚರಿತ್ ಅಸ್ಲಂಕಾ, ಅಶೆಲ್ ಭಂಡಾರ, ದಸುನ್ ಶನಕ, ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತಾ ಮತ್ತು ಲಹಿರು ಕುಮಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ