ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (IND vs SL) ಇಂದು ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Greenfield International Stadium) ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿದೆ. ಭಾರತ ನೀಡಿದ 391 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ತಂಡವು ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಸಂಪೂರ್ಣ ತತ್ತರಿಸಿತು. ಲಂಕಾ 22 ಓವರ್ಗಳಿಗೆ ಕೇವಲ 73 ರನ್ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಭಾರತ ಬರೋಬ್ಬರಿ 317 ರನ್ಗಳ ದಾಖಲೆಯ ಜಯ ಸಾಧಿಸಿತು.
ಟೀಂ ಇಂಡಿಯಾ ದಾಳಿಗೆ ಲಂಕಾ ತತ್ತರ:
ಭಾರತ ನೀಡಿದ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 22 ಓವರ್ಗಳಿಗೆ ಕೇವಲ 73 ರನ್ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಲಂಕಾ 3 ಪಂದ್ಯಗಳ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು, ಶ್ರೀಲಂಕಾ ಪರ, ಎನ್ ಫೆರ್ನಾಂಡೋ 19 ರನ್, ಅವಿಷ್ಕಾ ಫೆರ್ನಾಂಡೋ 1 ರನ್, ಕುಸಾಲ್ ಮೆಂಡಿಸ್ 4 ರನ್, ಚರಿತ್ ಅಸ್ಲಂಕಾ 1 ರನ್, ಅಶೆಲ್ ಭಂಡಾರ ಶೂನ್ಯ, ದಸುನ್ ಶನಕ 11 ರನ್, ವನಿಂದು ಹಸರಂಗ 1ರನ್, ಚಾಮಿಕಾ ಕರುಣಾರತ್ನೆ 1 ರನ್, ಕಸುನ್ ರಜಿತಾ 13 ರನ್ ಮತ್ತು ಲಹಿರು ಕುಮಾರ 9 ರನ್ ಗಳಿಸಿದರು.
Domination 👊
India complete a 3-0 whitewash against Sri Lanka in the ODI series 👏#INDvSL | 📝: https://t.co/rqPHqsDqAY pic.twitter.com/kR17ai4LOC
— ICC (@ICC) January 15, 2023
ಇನ್ನು, ಬ್ಯಾಟಿಂಗ್ನಲ್ಲಿ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಬಳಿಕ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಸಹ ಉತ್ತಮ ದಾಳಿ ನಡೆಸುವ ಮೂಲಕ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಸಿರಾಜ್ ಇಂದು 10 ಓವರ್ ಮಾಡಿ 32 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಶಮಿ ಮತ್ತು ಕುಲ್ದೀಪ್ ಯಾವದ್ ತಲಾ 2 ವಿಕೆಟ್ ಪಡೆದು ಸಿರಾಜ್ಗೆ ಉತ್ತಮ ಸಾಥ್ ನೀಡಿದರು.
ಇದನ್ನೂ ಓದಿ: Virat Kohli: ‘ವಿರಾಟ್‘ ರೂಪಕ್ಕೆ ದಾಖಲೆಗಳೆಲ್ಲಾ ಪೀಸ್-ಪೀಸ್! ಹೊಸ ರೆಕಾರ್ಡ್ ಬರೆದ ಕಿಂಗ್ ಕೊಹ್ಲಿ
ಭಾರತಕ್ಕೆ ಮತ್ತೊಂದು ದಾಖಲೆಯ ಗೆಲುವು:
ಟೀಂ ಇಂಡಿಯಾ ಏಕದಿನದಲ್ಲಿ 257 ರನ್ಗಳ ಅತಿ ದೊಡ್ಡ ಗೆಲುವು ಸಾಧಿಸಿತ್ತು. ಮಾರ್ಚ್ 2007ರಲ್ಲಿ ಭಾರತವು ವಿಶ್ವಕಪ್ ಪಂದ್ಯದಲ್ಲಿ ಬರ್ಮುಡಾವನ್ನು 257 ರನ್ಗಳಿಂದ ಸೋಲಿಸಿತ್ತು. ಈ ಪಂದ್ಯ ವೆಸ್ಟ್ ಇಂಡೀಸ್ನಲ್ಲಿ ನಡೆದಿತ್ತು. ಟೀಂ ಇಂಡಿಯಾ 5 ವಿಕೆಟ್ಗೆ 413 ರನ್ ಗಳಿಸಿತ್ತು. ವೀರೇಂದ್ರ ಸೆಹ್ವಾಗ್ ಶತಕ ಬಾರಿಸಿದ್ದರು. ಇದಕ್ಕೆ ಉತ್ತರವಾಗಿ ಬರ್ಮುಡಾ ತಂಡ 156 ರನ್ ಗಳಿಸಿ 257 ನರ್ಗಳ ಸೋಲನ್ನಪ್ಪಿತ್ತು. ಇದಲ್ಲದೇ 2008ರಲ್ಲಿ ಕರಾಚಿಯಲ್ಲಿ ಹಾಂಕಾಂಗ್ ವಿರುದ್ಧ ಭಾರತ 256 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇದಲ್ಲದೇ ಟೀಂ ಇಂಡಿಯಾ ಇನ್ನೂ 3 ಪಂದ್ಯಗಳನ್ನು 200 ಅಥವಾ ಅದಕ್ಕಿಂತ ಹೆಚ್ಚು ರನ್ಗಳಿಂದ ಗೆದ್ದಿತ್ತು. 2022 ರಲ್ಲಿ, ಭಾರತ ಬಾಂಗ್ಲಾದೇಶವನ್ನು 227 ರನ್ಗಳಿಂದ, 2018 ರಲ್ಲಿ ವೆಸ್ಟ್ ಇಂಡೀಸ್ನಲ್ಲಿ 224 ರನ್ಗಳಿಂದ ಮತ್ತು 2003ರಲ್ಲಿ ಬಾಂಗ್ಲಾದೇಶವನ್ನು 200 ರನ್ಗಳಿಂದ ಸೋಲಿಸಿತ್ತು.
ಆದರೆ ಇದೀಗ ಭಾರತ ತಂಡವು ತನ್ನ ದಾಖಲೆಯನ್ನು ತಾನೇ ಮುರಿದುಕೊಂಡಿದೆ. ಹೌದು, ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 317 ರನ್ಗಳ ದೊಡ್ಡ ಜಯ ಸಾಧಿಸುವ ಮೂಲಕ ಅತಿ ದೊಡ್ಡ ಗೆಲುವು ಪಡೆದ ತಂಡಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಭಾರತ 300ಕ್ಕಿಂತ ಹೆಚ್ಚಿನ ರನ್ಗಳ ಗೆಲುವು ದಾಖಲಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ