ಭಾರತ ಮತ್ತು ಶ್ರೀಲಂಕಾ (IND vs SL) ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯವು ನಾಳೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (Maharashtra Cricket Association Stadium) ನಡೆಯಲಿದೆ. ಭಾರತ ತಂಡವು ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಕೇವಲ ಎರಡು ರನ್ಗಳ ಅಂತರದಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಶಿವಂ ಮಾವಿ ಅವರ ಅದ್ಭುತ ಬೌಲಿಂಗ್ನಿಂದ ಟೀಂ ಇಂಡಿಯಾ ಗೆದ್ದುಬೀಗಿದವು. ಹೀಗಾಗಿ ನಾಳಿನ ಪಂದ್ಯವನ್ನು ಗೆದ್ದು ಸರಣಿ ಗೆಲ್ಲಲು ಟೀಂ ಇಂಡಿಯಾ ಸಜ್ಜಾಗಿದೆ. ಇದರಿಂದಾಗಿ ಈಗಾಗಲೇ ಭಾರತ ತಂಡದ ಆಟಗಾರರು ಪುಣೆಗೆ ಆಗಮಿಸಿದ್ದಾರೆ.
ಪಂದ್ಯದ ವಿವರ:
ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡವು ಇಲ್ಲಿ 3 ಪಂದ್ಯಗಳ ಟಿ20 ಪಂದ್ಯವನ್ನು ಆಡಲಿದೆ. ಈ ಟಿ20 ಸರಣಿಯ 2ನೇ ಪಂದ್ಯವು ನಾಳೆ ನಡೆಯಲಿದೆ. ಈ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು 6:30ಕ್ಕೆ ಟಾಸ್ ಮತ್ತು 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ ಹಾಟ್ಸ್ಟಾರ್ ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
We have arrived here in Pune ahead of the second #INDvSL T20I 🚐😎#TeamIndia pic.twitter.com/QBA7PamXze
— BCCI (@BCCI) January 4, 2023
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ಮತ್ತು ಭಾರತ ಎರಡನೇ ಟಿ20 ಪಂದ್ಯ ನಡೆಯಲಿದೆ. ಇಲ್ಲಿ ಉಭಯ ತಂಡಗಳು 2 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಇದೇ ಮೈದಾನದಲ್ಲಿ ಶ್ರೀಲಂಕಾ ಕೊನೆಯ ಬಾರಿಗೆ ಭಾರತದಲ್ಲಿ ಟಿ20 ಪಂದ್ಯವನ್ನು ಗೆದ್ದಿತ್ತು. ಈ ಮೈದಾನವು 50 ಕ್ಕೂ ಹೆಚ್ಚು T20 ಪಂದ್ಯಗಳನ್ನು ಆಯೋಜಿಸಿದೆ ಮತ್ತು ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 162 ರನ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಒಂದು ಸಣ್ಣ ಪಾತ್ರವನ್ನು ವಹಿಸಬಹುದು ಏಕೆಂದರೆ ಮೊದಲು ಬ್ಯಾಟಿಂಗ್ ಮಾಡುವ ತಂಡ ಮತ್ತು ಎರಡನೆಯದು ಇಲ್ಲಿ ಒಂದೇ ರೀತಿಯ ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ನಾಳಿನ ಹವಾಮಾನದ ಆಧಾರದ ಮೇಲೆ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡುತ್ತದೆ.
ಇದನ್ನೂ ಓದಿ: Indian cricket: ಧವನ್ ವೃತ್ತಿಜೀವನ ಮುಗಿತಾ? ಡೇಂಜರ್ ಝೋನ್ನಲ್ಲಿದ್ದಾರೆ ಈ ಮೂವರು ಆಟಗಾರರು, ಇದೇ ಅವರಿಗೆ ಕೊನೆ ಅವಕಾಶ!
IND vs SL ಸಂಭಾವ್ಯ ಪ್ಲೇಯಿಂಗ್ 11:
ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ,ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್.
ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11: ಪಥುಮ್ ನಿಸಾಂಕ, ಕುಸಾಲ್ ಮೆಂಡಿಸ್ (ವಿ.ಕೀ), ಧನಂಜಯ್ ಡಿ ಸಿಲ್ವಾ, ಚರಿತಾ ಅಸಲಂಕ, ಭನುಕ ರಾಜಪಕ್ಷ, ದಸೂನ್ ಶಾನಕ (ನಾಯಕ), ವಾನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಕಸೂನ್ ರಜಿತ, ದಿಲ್ಷಾನ್ ಮದುಶಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ