• Home
  • »
  • News
  • »
  • sports
  • »
  • India vs Sri lanka: ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿದ ಶ್ರೀಲಂಕಾ, ಹಾರ್ದಿಕ್ ಗೆಲುವಿನ ಓಟಕ್ಕೆ ಸಿಂಹಳೀಯರ ಬ್ರೇಕ್!

India vs Sri lanka: ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿದ ಶ್ರೀಲಂಕಾ, ಹಾರ್ದಿಕ್ ಗೆಲುವಿನ ಓಟಕ್ಕೆ ಸಿಂಹಳೀಯರ ಬ್ರೇಕ್!

IND vs SL

IND vs SL

India vs Sri lanka: ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 16 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು, ಕೊನೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ.

  • Share this:

ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಇಂದು 2ನೇ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೆಣಸಾಡಿದವು. 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (Maharashtra Cricket Association Stadium) ನಡೆಯಿತು. ಶ್ರೀಲಂಕಾ ನೀಡಿದ 207 ರನ್ ಗಳ ಬಿಗ್​ ಟಾರ್ಗೆಟ್​ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲಿ ಉತ್ತಮ ಅಡಿಪಾಯ ದೊರಕಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 16 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು, ಕೊನೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ.


ಅಬ್ಬರಿಸಿದ ಅಕ್ಷರ್​-ಸೂರ್ಯ:


ಇನ್ನು, ಭಾರತದ ಪರ ಇಂದು ಆರಂಭಿಕರು ಮತ್ತೊಮ್ಮೆ ವಿಫಲರಾದರು. ಇಶಾನ್ ಕಿಶನ್​ 2 ರನ್ ಮತ್ತು ಶುಭಮನ್​ ಗಿಲ್ 5 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ರಾಹುಲ್ ತ್ರಿಪಾಠಿ ಸಹ ಪಾದಾರ್ಪಣಾ ಪಂದ್ಯದಲ್ಲಿಯೇ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಬಳಿಕ ಸೂರ್ಯಕುಮಾರ್ ಯಾದವ್ 36 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಫೋರ್​ ಮೂಲಕ 51 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 12 ರನ್, ದೀಪಕ್ ಹೂಡ 9 ರನ್ ಗಳಸಿದರು. ಆದರೆ ಅಂತಿಮ ಕ್ಷಣದಲ್ಲಿ ಕೊಂಚ ಗೆಲುವಿನ ಆಸೆ ಮೂಡಿಸಿದ ಶಿವಂ ಮಾವಿ 15 ಎಸೆತದಲ್ಲಿ 27 ರನ್ ಮತ್ತು ಅಕ್ಷರ್ ಪಟೇಲ್​ 31 ಎಸೆತದಲ್ಲಿ 6 ಸಿಕ್ಸ್ ಮತ್ತು 3 ಪೋರ್​ ಮೂಲಕ 65 ರನ್ ಗಳಿಸಿದರು.



ಸಂಘಟಿತ ಬೌಲಿಂಗ್​ ದಾಳಿ ಮಾಡಿದ ಲಂಕಾ:


ಇನ್ನು, ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದ ಲಂಕಾ ಕೇವಲ ಬ್ಯಾಟಿಂಗ್​ ಮಾತ್ರವಲ್ಲದೇ ಬೌಲಿಂಗ್​ನಲ್ಲಿಯೂ ಸಖತ್​ ಆಗಿ ಮಿಂಚಿದರು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ, ಕಸುನ್ ರಜಿತಾ ಮತ್ತು ದಸುನ್ ಶಾನಕ ತಲಾ 2 ವಿಕೆಟ್​ ಪಡೆದರೆ, ಚಮಿಕಾ ಕರುಣಾರತ್ನೆ ಮತ್ತು ವನಿಂದು ಹಸರಂಗ ತಲಾ 1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪತ್ರವಹಿಸಿದರು.


ಇದನ್ನೂ ಓದಿ: Ranji Trophy 2023: 21 ಬೌಂಡರಿ, 12 ಸಿಕ್ಸರ್, ರಣಜಿ ಪಂದ್ಯದಲ್ಲಿ ಟಿ20 ಆಟವಾಡಿದ IPL ಆಟಗಾರ


ಬ್ಯಾಟಿಂಗ್​ನಲ್ಲಿಯೂ ಮಿಂಚಿದ್ದ ಲಂಕಾ:


ಶ್ರೀಲಂಕಾ ಪರ ಪಾತುಮ್ ನಿಸ್ಸಾಂಕ 33 ರನ್, ಕುಸಲ್ ಮೆಂಡಿಸ್ 312 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಫೋರ್​ ಮೂಲಕ 52 ರನ್, ಧನಂಜಯ ಡಿ ಸಿಲ್ವಾ 3 ರನ್, ಚರಿತ್ ಅಸಲಂಕಾ 37 ರನ್, ಭಾನುಕ ರಾಜಪಕ್ಸೆ 2 ರನ್, ದಸುನ್ ಶಾನಕ 22 ಎಸೆತದಲ್ಲಿ 6 ಸಿಕ್ಸ್ ಮತ್ತು 2 ಫೋರ್​ ಮೂಲಕ 56 ರನ್ ಮತ್ತು ಚಮಿಕಾ ಕರುಣಾರತ್ನೆ 11 ರನ್ ಗಳಿಸಿದರು.


ಆದರೆ ಭಾರತದ ಪರ ಉಮ್ರಾನ್ ಮಲಿಕ್​ ಮಾತ್ರ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಕಳೆದ ಪಂದ್ಯದ ಹೀರೋ ಶಿವಂ ಮಾವಿ 4 ಓವರ್​ಗೆ 53 ರನ್ ನೀಡಿದರೆ, ಅರ್ಷದೀಪ್​ ಸಿಂಗ್​ ಬರೋಬ್ಬರಿ 5 ನೋ ಬಾಲ್​ ಸೆಸೆದು ಇನ್ನಷ್ಟು ದುಬಾರಿಯಾದರು. ಉಳಿದಂತೆ ಉಮ್ರಾನ್ ಮಲಿಕ್ 4 ಓವರ್​ಗೆ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ಮತ್ತು ಚಹಾಲ್ 1 ವಿಕೆಟ್ ಪಡೆದರು. ಆದರೆ ಇಂದಿನ ಪಂದ್ಯದಲ್ಲಿ  ಭಾರತೀಯ ಬೌಲರ್​ಗಳು ಲಂಕಾ ಆಟಗಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

Published by:shrikrishna bhat
First published: