ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಭವಿಷ್ಯದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀಲಂಕಾ (IND vs SL) ವಿರುದ್ಧದ ಟಿ20 ಸರಣಿಯ ವೇಳೆ ಅವರಿಗೆ ತಂಡದಲ್ಲಿ ದೊಡ್ಡ ಜವಾಬ್ದಾರಿಯನ್ನೂ ನೀಡಲಾಗಿತ್ತು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೆ ಮರಳಿದ ಬಳಿಕ ಅವರು ತಂಡದ ನಾಯಕತ್ವವನ್ನು ಪಡೆದರು. ಆದರೆ KL ರಾಹುಲ್ ಬದಲಿಗೆ ತಂಡದ ಹೊಸ ಉಪನಾಯಕರಾಗಿ ಹಾರ್ದಿಕ್ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ (Hardik Pandya) ತನ್ನ ವರ್ತನೆಯಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ (Eden Gardens) ನಡೆದ 2ನೇ ಏಕದಿನ ಪಂದ್ಯದ ವೇಳೆಯೂ ಅವರು ತಮ್ಮ ವರ್ತನೆಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಹಾರ್ದಿಕ್ ಅವರು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಅಷ್ಟಕ್ಕೂ ಪಾಂಡ್ಯ ಕೋಪಗೊಂಡಿದ್ದು ಏಕೆ?:
ಶ್ರೀಲಂಕಾ ವಿರುದ್ಧದ 2ನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಕುಲದೀಪ್ ಯಾದವ್ ಬದಲಿಗೆ ಯುಜ್ವೇಂದ್ರ ಚಹಾಲ್ ಅವರನ್ನು ಆಡುವ ಅಂತಿಮ ತಂಡದಲ್ಲಿ ಸೇರಿಸಿದರು. ಯುಜುವೇಂದ್ರ ಚಾಹಲ್ ಪಂದ್ಯವನ್ನು ಆಡಲು ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಈ ರೀತಿ ಮಾಡಲಾಗಿದೆ ಎಂದು ಅವರು ಹೇಳಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕುಲದೀಪ್ 3 ವಿಕೆಟ್ ಪಡೆದರು.
ಈ ಸಮಯದಲ್ಲಿ ಭಾರತದ ಫೀಲ್ಡಿಂಗ್ ಸಮಯದಲ್ಲಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಓವರ್ ಮುಗಿದ ನಂತರ ತಂಡದ ಸದಸ್ಯರ ಬಳಿಗೆ ಬಂದು ನೀರು ಕೊಡುವುದು ಚಹಾಲ್ ಅವರ ಜವಾಬ್ದಾರಿಯಾಗಿತ್ತು. ಚಹಾಲ್ ಬಹುಶಃ ನೀರು ತರುವ ಬದಲು ಡಗ್ಔಟ್ನಲ್ಲಿ ಕುಳಿತುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸಿಟ್ಟಾದ ಹಾರ್ದಿಕ್ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಷ್ಟಕ್ಕೂ ಚಹಾಲ್ ಮಾಡಿದ ತಪ್ಪೇನು?:
ಹಾರ್ದಿಕ್ ಪಾಂಡ್ಯ ಅವರಿಗೆ ನೀರಿನ ಅಗತ್ಯವಿತ್ತು. ಇದೇ ಕಾರಣಕ್ಕೆ ಯುಜುವೇಂದ್ರ ಚಾಹಲ್ ಅವರನ್ನು ನೀರಿಗಾಗಿ ಕರೆದಿದ್ದಾರೆ. ನೀರು ಸಿಗದಿದ್ದಕ್ಕೆ ಹಾರ್ದಿಕ್ ಕೋಪಗೊಂಡಿದ್ದು, ಯುಜುವೇಂದ್ರ ಚಾಹಲ್ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ. ಇದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ವೈರಲ್ ಆದಂದಿನಿಂದ ಹಾರ್ದಿಕ್ ವರ್ತನೆಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನ್ಯೂಸ್ 18 ಈ ವೀಡಿಯೊವನ್ನು ಬಳಸುವುದಿಲ್ಲ. ವೀಡಿಯೊದಲ್ಲಿ ಮಾತನಾಡಿರುವ ರೀತಿಯ ಪದಗಳನ್ನು ಬಳಸಿರುವುದರಿಂದ ನಾವು ಅದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: Naomi Osaka: ಮದುವೆ ಆಗದೇ ಗರ್ಭಿಣಿಯಾಗ್ತಿದ್ದಾರೆ 25ರ ಹರೆಯದ ಆಟಗಾರ್ತಿ, ಸಂತಸದ ಸುದ್ದಿ ಕೇಳಿ ಫ್ಯಾನ್ಸ್ ಶಾಕ್!
ಸರಣಿ ಗೆದ್ದ ಟೀಂ ಇಂಡಿಯಾ:
ಇನ್ನು, ಭಾರತ ತಂಡವು ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಇನ್ನೂ 1 ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಸರಣಿಯನ್ನು ಗೆದ್ದಿದೆ. ಇಂದು ನಡೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 17 ರನ್ ಮತ್ತು ಶುಭ್ಮನ್ ಗಿಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಸಹ ಕೇವಲ 4 ರನ್ ಗಳಿಸಿ ಔಟ್ ಆದರು. ಆದರೆ ಕನ್ನಡಿಗ ಕೆಎಲ್ ರಾಹುಲ್ 103 ಎಸೆತದಲ್ಲಿ 64 ರನ್ ಗಳಿಸುವ ಮೂಲಕ ತಂಡದ ಗೆಲುವುನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 28 ರನ್, ಹಾರ್ದಿಕ್ ಪಾಂಡ್ಯ 36 ರನ್, ಅಕ್ಷರ್ ಪಟೇಲ್ 21 ರನ್ ಮತ್ತು ಕುಲ್ದೀಪ್ ಯಾದವ್ 10 ರನ್ ಗಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ