ಗುವಾಹಟಿಯಲ್ಲಿ ಆರಂಭವಾದ ಏಕದಿನ ಸರಣಿಯ ಕದನ ಇದೀಗ ಕೋಲ್ಕತ್ತಾ ತಲುಪಿದ್ದು, ಶ್ರೀಲಂಕಾ (IND vs SL) ವಿರುದ್ಧದ ಸರಣಿಯ ಎರಡನೇ ಪಂದ್ಯವನ್ನು ಭಾರತ ಆಡಬೇಕಿದೆ. ಕೋಲ್ಕತ್ತಾದಲ್ಲಿನ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಈ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿರುವುದರಿಂದ ಹೆಚ್ಚಿನ ಸ್ಕೋರ್ಗಳ ಪಂದ್ಯವನ್ನು ನೋಡಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಶ್ರೀಲಂಕಾ ನಾಯಕ ದಸುನ್ ಶನಕಾಗೆ (Dasun Shanaka) ಟೀಂ ಇಂಡಿಯಾ (Team India) ಬ್ರೇಕ್ ಹುಡುಕಬೇಕಿದೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆದ್ದರೂ ಲಂಕಾ ತಂಡ 50 ಓವರ್ಗಳಲ್ಲಿ ಬ್ಯಾಟ್ ಮಾಡಿ 306 ರನ್ ಗಳಿಸಿತ್ತು. ಹೀಗಾಗಿ ನಾಳಿನ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಭರ್ಜರಿ ಫೈಪೋಟಿ ನಡೆಯುವ ಸಾಧ್ಯತೆ ಇದೆ.
ದಾಖಲೆ ಮುರಿಯುತ್ತಾ ಲಂಕಾ?:
ಶ್ರೀಲಂಕಾ ತಂಡ ಭಾರತ ಪ್ರವಾಸದಲ್ಲಿ ಇಲ್ಲಿಯವರೆಗೆ ಏಕದಿನ ಸರಣಿಯನ್ನು ಹೆಸರಿಸಲು ಸಾಧ್ಯವಾಗಿಲ್ಲ. ಮೊದಲ ಪಂದ್ಯ ಸೋತಿರುವ ಲಂಕಾ ತಂಡ ಉಳಿದೆರಡು ಪಂದ್ಯಗಳನ್ನು ಗೆದ್ದು ಭಾರತದಲ್ಲಿ ಚೊಚ್ಚಲ ಬಾರಿಗೆ ಏಕದಿನ ಸರಣಿ ಗೆಲ್ಲುವ ಉತ್ಸಹದಲ್ಲಿದೆ. ಟೀಂ ಇಂಡಿಯಾದ ಆಡುವ 11 ಅನ್ನು ನೋಡಿದರೆ, ಈ ಪಂದ್ಯದಲ್ಲಿ ಭಾರತ ತನ್ನ ಅಗ್ರ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಬಹುದು. ಬೌಲಿಂಗ್ ನಲ್ಲಿ ಕೆಲವು ಬದಲಾವಣೆಗಳು ಸಾಧ್ಯವಾದರೂ. ನಾಯಕ ರೋಹಿತ್ ಶರ್ಮಾ ಯುಜ್ವೇಂದ್ರ ಚಹಾಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಪ್ಲೇಯಿಂಗ್ ಹನ್ನೊಂದರಲ್ಲಿ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.
Touchdown Kolkata 📍
A special birthday celebration here for #TeamIndia Head Coach Rahul Dravid 😃🎂#INDvSL pic.twitter.com/FbLvxbYWuN
— BCCI (@BCCI) January 11, 2023
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ನಾಳೆ ಅಂದರೆ ಗುರುವಾರ, ಜನವರಿ 12 ರಂದು ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ODI ಸರಣಿಯ ಎರಡನೇ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ: PAK vs NZ: ಅಂಪೈರ್ಗೆ ಬೌಲ್ನಿಂದ ಹೊಡೆದ ಪಾಕ್ ಆಟಗಾರ, ವಿಡಿಯೋ ವೈರಲ್
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ODI ಪಂದ್ಯವನ್ನು ಹೇಗೆ ಉಚಿತವಾಗಿ ವೀಕ್ಷಿಸಬಹುದು?
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯವು ಡಿಡಿ ಫ್ರೀ ಟು ಏರ್ ಚಾನೆಲ್ನಲ್ಲಿ ಟಿವಿಯಲ್ಲಿ ಲಭ್ಯವಿರುತ್ತದೆ. ಇದಲ್ಲದೇ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನೆಲ್ನಲ್ಲಿಯೂ ಪಂದ್ಯವನ್ನು ಪ್ರಸಾರ ಮಾಡಲಾಗುತ್ತದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಪಂದ್ಯ ಲೈವ್ ಸ್ಟ್ರೀಮಿಂಗ್ ಎಲ್ಲಿ?
ಪಂದ್ಯವನ್ನು ಡಿಡಿ ಫ್ರೀ ಟು ಏರ್ನ ಮೊಬೈಲ್ ಅಪ್ಲಿಕೇಶನ್ನಲ್ಲಿ ಹಾಗೂ ಜಿಯೋ ಟಿವಿ ಆ್ಯಪ್ ಮೂಲಕ ಉಚಿತವಾಗಿ ವೀಕ್ಷಿಸಬಹುದು. ಇದರೊಂದಿಗೆ ಡಿಸ್ನಿ ಹಾಟ್ಸ್ಟಾರ್ನ ಮೊಬೈಲ್ ಅಪ್ಲಿಕೇಶನ್ನಲ್ಲಿಯೂ ಪಂದ್ಯವನ್ನು ಆನಂದಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ