• Home
  • »
  • News
  • »
  • sports
  • »
  • IND vs SL 2023: ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಆಟೋ ಚಾಲಕನ ಮಗ, ಶ್ರೀಲಂಕಾ ವಿರುದ್ಧದ ಟಿ20 ತಂಡಕ್ಕೆ ಆಯ್ಕೆ

IND vs SL 2023: ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಆಟೋ ಚಾಲಕನ ಮಗ, ಶ್ರೀಲಂಕಾ ವಿರುದ್ಧದ ಟಿ20 ತಂಡಕ್ಕೆ ಆಯ್ಕೆ

IND vs SL 2023

IND vs SL 2023

IND vs SL 2023: ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪ್ರಥಮ ದರ್ಜೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವ ಬೌಲರ್​ ಎಂಟ್ರಿಕೊಟ್ಟಿದ್ದಾರೆ.

  • Share this:

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾದ (Team India) ಆಯ್ಕೆಗಾರರು ಹಿರಿಯ ಆಟಗಾರರನ್ನು ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಲು ಆರಂಭಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಭಾರತ (IND vs SL) ತಂಡವನ್ನು ಪ್ರಕಟಿಸಲಾಗಿದ್ದು, ಪ್ರಥಮ ದರ್ಜೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಖೇಶ್ ಕುಮಾರ್ (Mukesh Kumar) ಅವರನ್ನು ಟೀಂ ಇಂಡಿಯಾದ ಟಿ20 ತಂಡಕ್ಕೆ ಆಯ್ಕೆ ಮಾಡಿದೆ. ಆದರೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್ (KL Rahul) ಮತ್ತು ವಿರಾಟ್ ಕೊಹ್ಲಿ (Virat Kohli) ಟಿ20 ಸರಣಿಯಿಂದ ಹೊರಗುಳಿದಿದ್ದು, ರಿಷಬ್ ಪಂತ್ (Rishabh Pant) ಟಿ20 ಮತ್ತು ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೇ ಅಚ್ಚರಿ ಎಂಬಂತೆ ಕೆಎಲ್ ರಾಹುಲ್ ಉಪನಾಯಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.


ಆಟೋ ಚಾಲಕನ ಮಗ ಟೀಂ ಇಂಡಿಯಾಗೆ ಎಂಟ್ರಿ:


ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕಾಕಡ್ಕುಂಡ್ ಗ್ರಾಮದವರಾದ ಮುಖೇಶ್ ಕುಮಾರ್ ಈಗ ಟೀಂ ಇಂಡಿಯಾ ಪರ ಆಡಲಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 58 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಅವರು, ಈ ವೇಳೆ ಅವರು ಒಟ್ಟು 123 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಬಾಂಗ್ಲಾದೇಶ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅವರು 6 ವಿಕೆಟ್ ಪಡೆದರು. ಈ ಶ್ರೇಷ್ಠ ಅಂಕಿಅಂಶಗಳ ಸಹಾಯದಿಂದ ಅವರು ಇಂದು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.


ಮುಖೇಶ್ ಅವರ ತಂದೆ ಓರ್ವ ಆಟೋ ಡ್ರೈವರ್ ಆಗಿದ್ದು, ಮುಖೇಶ್ ಸಿಆರ್‌ಪಿಎಫ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಬಯಸಿದ್ದರು. ಆದಾಗ್ಯೂ, ಕುಮಾರ್ ಮೂರು ಬಾರಿ ಪರೀಕ್ಷೆಯಲ್ಲಿ ವಿಫಲರಾದರು ಮತ್ತು ಕ್ರಿಕೆಟ್‌ನಲ್ಲಿ ಏನಾದರೂ ಮಾಡಬೇಕೆಂದು ಬಯಸಿದ್ದರು. ಅದರ ಭಾಗವಾಗಿ ಇದೀಗ ಮುಖೇಶ್ ಅಕ್ಟೋಬರ್ 2 ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ODI ತಂಡಕ್ಕೆ ಆಯ್ಕೆ ಆದರು. ಡಿಸೆಂಬರ್‌ನಲ್ಲಿ ಅವರು ಐಪಿಎಲ್​ 2023ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೊಂದಿಗೆ 5.5 ಕೋಟಿ ರೂಪಾಯಿಗಳ ಒಪ್ಪಂದವನ್ನು ಪಡೆದರು.


ಇದನ್ನೂ ಓದಿ: IND vs SL India Squad: ಶ್ರೀಲಂಕಾ ವಿರುದ್ಧದ ಏಕದಿನ-ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ತಂಡದಿಂದ ಸ್ಟಾರ್​ ಪ್ಲೇಯರ್ಸ್​ ಔಟ್​!


ಐಪಿಎಲ್‌ನಲ್ಲಿ ಮುಖೇಶ್ ಲಕ್​ ಚೆಂಜ್​:


ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಮುಖೇಶ್ ಕುಮಾರ್ ದೊಡ್ಡ ಮೊತ್ತಕ್ಕೆ ಬಿಡ್​ ಆಗಿದ್ದಾರೆ. 5 ಕೋಟಿ 50 ಲಕ್ಷ ರೂ.ಗಳ ಬೃಹತ್ ಮೊತ್ತ ನೀಡಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಈ ವರ್ಷ ಡೆಲ್ಲಿ ಒಟ್ಟು 5 ಆಟಗಾರರನ್ನು ಖರೀದಿಸಿದ್ದು, ಅದರಲ್ಲಿ ಮುಖೇಶ್ ಕುಮಾರ್ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.


ಟಿ20 ತಂಡಕ್ಕೆ ಹಾರ್ದಿಕ್​ ನಾಯಕ:


ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಆರಂಭದ 3 ಪಂದ್ಯಗಳ ಟಿ20 ಸರಣಿಯಿಂದ ಹೊರಗಿಟ್ಟಿದೆ. ಆದರೆ ಅವರು ಏಕದಿನ ಸರಣಿ ವೇಳೆಗೆ ಮತ್ತೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಜೊತೆಗೆ ಕುಲದೀಪ್ ಯಾದವ್ ಸುದೀರ್ಘ ಸಮಯದ ನಂತರ ಟಿ20 ತಂಡಕ್ಕೆ ಮರಳಿದ್ದಾರೆ. ಅಲ್ಲದೇ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಸಹ ಹೊರಗುಳಿದಿದ್ದು, ಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್​ ಪಾಂಡ್ಯ ಮತ್ತೊಮ್ಮೆ ನಾಯಕರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೇ ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್ ಉಪನಾಯಕರಾಗಿ ಆಯ್ಕೆ ಆಗಿದ್ದಾರೆ.


ಶ್ರೀಲಂಕಾ ಸರಣಿಗೆ ಭಾರತದ T20 ತಂಡ:


ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ ಶಿವಂ ಮಾವಿ, ಮುಖೇಶ್ ಕುಮಾರ್.

Published by:shrikrishna bhat
First published: