ಭಾರತ ಮತ್ತು ಶ್ರೀಲಂಕಾ (IND vs SL) ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಹಾರ್ದಿಕ್ ರಾಜ್ (Hardik Raj) ಎಂಬ ಶೀರ್ಷಿಕೆಯುಳ್ಳ ಜಾಹೀರಾತನ್ನು ಅಳಿಸಿದ್ದು, ಇದೀಗ ಸಂಸ್ಥೆಯು ಅದೇ ಜಾಹೀರಾತನ್ನು ವಿಭಿನ್ನ ಮಾದರಿಯ ಶೀರ್ಷಿಕೆಯ ಮೂಲಕ ಟ್ವೀಟ್ ಮಾಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ವರ್ಷದ ಆರಂಭವನ್ನು ಹೊಸ ಏಷ್ಯನ್ ಟಿ20 ಚಾಂಪಿಯನ್ಗಳ ವಿರುದ್ಧ ತಮ್ಮ ಸಿಡಿಲಬ್ಬರದ ಪ್ರದರ್ಶನದ ಮೂಲಕ ಆರಂಭಿಸಲಿದ್ದಾರೆ ಎಂಬ ಜಾಹೀರಾತನ್ನು ನೀಡಿದ್ದು, ಹಾರ್ದಿಕ್ ಅವರನ್ನು ಹೈಲೈಟ್ ಮಾಡಿ ಜಾಹೀರಾತಿನ ಬಿಡುಗಡೆ ಮಾಡಿದೆ. ಪಾಂಡ್ಯ ಸಮನಾಗಿ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕನನ್ನು ಪ್ರದರ್ಶಿಸುವ ಜಾಹೀರಾತಿನ ಬಿಡುಗಡೆಯನ್ನು ಮಾಡಿದ್ದು, ಅದರಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲ.
ಸ್ಟಾರ್ ಸ್ಪೋರ್ಟ್ಸ್ ಟ್ರೇಲರ್:
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದ್ದು ಅದಕ್ಕನುಸಾರವಾಗಿ ಜಾಹೀರಾತು ಪ್ರಕಟವಾಗಿದೆ. ಪಂದ್ಯವು ಅತ್ಯಂತ ಕುತೂಹಕಾರಿಯಾಲಿದ್ದು ತಂಡಗಳಲ್ಲಿ T20I ನುರಿತ ಆಟಗಾರರೇ ಆಡಲಿದ್ದಾರೆ ಎಂದು ವರದಿಯಾಗಿದೆ. ಒಂದರ್ಥದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ಗೆ ಕೊಂಚ ಸಂಕಷ್ಟವನ್ನುಂಟು ಮಾಡಿದ್ದು, ಸ್ಟಾರ್ ಸ್ಪೋರ್ಟ್ಸ್ ಟ್ರೇಲರ್ ಕೂಡ ಇದೇ ಮಾಹಿತಿಯನ್ನು ನೀಡಿದೆ.
.@hardikpandya7 is ready to kick-start the New Year with a bang against the Asian T20I Champions, 🇱🇰!#BelieveInBlue & get ready to witness some 🔥 action from this new #TeamIndia
Mastercard #INDvSL series | Starts Jan 3 | Star Sports & Disney+Hotstar pic.twitter.com/tgAOc2zAQf
— Star Sports (@StarSportsIndia) December 25, 2022
ಹಾರ್ದಿಕ್ ಪಾಂಡ್ಯ ಏಷ್ಯನ್ T20I ಚಾಂಪಿಯನ್ಸ್ ವಿರುದ್ಧ ತಮ್ಮ ಎಂದಿನ ಸಿಡಿಲಬ್ಬರದ ಪ್ರದರ್ಶದ ಮೂಲಕ ಹೊಸ ವರ್ಷವನ್ನು ಆರಂಭಿಸಲಿದ್ದಾರೆ. ಹಾರ್ದಿಕ್ ರಾಜ್ ಮುಂದಾಳತ್ವದಲ್ಲಿ ಈ ಹೊಸ ಟೀಮ್ಇಂಡಿಯಾದಿಂದ ಕೆಲವು ? ಆ್ಯಕ್ಷನ್ಗೆ ಸಾಕ್ಷಿಯಾಗಲು ಸಿದ್ಧರಾಗಿ ಎಂಬ ಶೀರ್ಷಿಕೆಯುಳ್ಳ ವಿಡಿಯೋದಲ್ಲಿ ಪಾಂಡ್ಯ ನಾಯಕತ್ವವನ್ನು ಎದ್ದುಗಾಣಿಸಿಸಲಾಗಿದೆ.
ತಂಡದಿಂದ ಹೆಚ್ಚಿನ ನಿರೀಕ್ಷೆ:
ಶ್ರೀಲಂಕಾ ನಾಯಕನಾಗಿ ದಸುನ್ ಶನಕ ಮತ್ತು ಅವರ ಪ್ರತಿರೂಪವಾಗಿ ಹಾರ್ದಿಕ್ ಪಾಂಡ್ಯ ಎಂಬ ಪೋಸ್ಟರ್ನೊಂದಿಗೆ ಸಂಸ್ಥೆ ಜಾಹೀರಾತನ್ನು ಕೊನೆಗೊಳಿಸಿದೆ. ಭಾರತವು ತನ್ನ ವರ್ಷದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರೂ, ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ 2024 ರ T20 ವಿಶ್ವಕಪ್ಗೆ ತಮ್ಮ ಪ್ರಸ್ತುತಿಯನ್ನು ಪ್ರಾರಂಭಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜನವರಿ 3 ರಂದು ಪ್ರಾರಂಭವಾಗುವ ಮೂರು ODI ಗಳಲ್ಲಿ ತಂಡವು 3 ಪಂದ್ಯಗಳ T20I ಗಳಲ್ಲಿ ಶ್ರೀಲಂಕಾದೊಂದಿಗೆ ಆಡಲಿದೆ.
ಇದನ್ನೂ ಓದಿ: IND vs PAK: ಭಾರತ-ಪಾಕ್ ನಡುವೆ ಶೀಘ್ರವೇ ಟೆಸ್ಟ್ ಸರಣಿ ಹಣಾಹಣಿ! ಆದ್ರೆ ಪಂದ್ಯ ನಡೆಯೋದು ಎಲ್ಲಿ?
ಕುತೂಹಲ ಹೆಚ್ಚಿಸಿದ ಸ್ಟಾರ್ ಸ್ಪೋರ್ಟ್ಸ್ ಜಾಹೀರಾತು:
ಸ್ಟಾರ್ ಸ್ಪೋರ್ಟ್ಸ್ನ ಈ ಜಾಹೀರಾತು ಶೀರ್ಷಿಕೆ ಸಾಕಷ್ಟು ಕುತೂಹಲ ಸೃಷ್ಟಿಸಿದ್ದು ಮಾತ್ರವಲ್ಲದೆ ಸಂಸ್ಥೆಯು ಬಿಸಿಸಿಐ ಅನ್ನು ಹೊರಗಿರಿಸಿ ತನ್ನಷ್ಟಕ್ಕೆ ತಂಡದ ಆಯ್ಕೆಯನ್ನು ಮಾಡಿದೆಯೇ ಎಂಬ ಸಂದೇಹವನ್ನು ಉಂಟುಮಾಡಿತ್ತು. ಪ್ರಸಾರಕರು ಟ್ವೀಟ್ ಅನ್ನು ಖಾತೆಯಿಂದ ಅಳಿಸಿದ್ದು, ಬೇರೆ ರೂಪದಲ್ಲಿ ಜಾಹೀರಾತಿನ ಶೀರ್ಷಿಕೆಯೊಂದಿಗೆ ವಿಡಿಯೋ ಪ್ರಸಾರಮಾಡಿದ್ದಾರೆ.
ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಋತುವಿನ ಮೊದಲ ಪಂದ್ಯವು ಜನವರಿ 3 ರಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯಲಿದೆ, ಜನವರಿ 12 ರಂದು ODI ಪಂದ್ಯಗಳು ಪ್ರಾರಂಭವಾಗಲಿವೆ.
ಕೆಎಲ್ ರಾಹುಲ್ -ರೋಹಿತ್ ಔಟ್:
ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ತಂಡವನ್ನು ಮುನ್ನಡೆಸಲಾಗುವುದಿಲ್ಲ. ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಹೊಸ ನಾಯಕರನ್ನಾಗಿ ನಿಯೋಜಿಸಲಾಗಿದೆ. ಕೆಎಲ್ ರಾಹುಲ್ ಕೆಲವೊಂದು ಪಂದ್ಯಾಟಗಳಲ್ಲಿ ನೀರಸ ಪ್ರದರ್ಶನವನ್ನು ನೀಡಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ