• Home
  • »
  • News
  • »
  • sports
  • »
  • IND vs SL: ಶ್ರೀಲಂಕಾ ಸರಣಿಗೆ ರಿಷಭ್ ಪಂತ್​ ಆಯ್ಕೆ ಆಗದಿರಲು ಕಾರಣವೇನು? ಇಲ್ಲಿದೆ ಶಾಕಿಂಗ್​ ರೀಸನ್​

IND vs SL: ಶ್ರೀಲಂಕಾ ಸರಣಿಗೆ ರಿಷಭ್ ಪಂತ್​ ಆಯ್ಕೆ ಆಗದಿರಲು ಕಾರಣವೇನು? ಇಲ್ಲಿದೆ ಶಾಕಿಂಗ್​ ರೀಸನ್​

ರಿಷಬ್ ಪಂತ್

ರಿಷಬ್ ಪಂತ್

Rishabh Pant: ರಿಷಭ್ ಪಂತ್ ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಅವರು ಇದೀಗ ಶ್ರೀಲಂಕಾ ಸರಣಿಗೆ ಆಯ್ಕೆ ಆಗದಿರುವುದು ಅಚ್ಚರಿ ಮೂಡಿಸಿದೆ.

  • Share this:

ಶ್ರೀಲಂಕಾ ವಿರುದ್ಧ (IND vs SL) ಮಂಗಳವಾರ ತಡರಾತ್ರಿ T20 ಮತ್ತು ODI ತಂಡವನ್ನು ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ರಿಷಭ್ ಪಂತ್ (Rishabh Pant)​ ಮಾತ್ರ ತಂಡಕ್ಕೆ ಆಯ್ಕೆಯಾಗಿಲ್ಲ. ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸದಲ್ಲಿ ಏಕದಿನ ಸರಣಿಯಿಂದಲೂ ಪಂತ್​ ಹಿಂದೆ ಸರಿದಿದ್ದರು. ಆದರೆ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ರಿಷಭ್​ ಮತ್ತೊಮ್ಮೆ ಕಂಬ್ಯಾಕ್​ ಮಾಡಿದ್ದರು. ಅಲ್ಲದೇ ಅವರು ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನೂ ಸಹ ನೀಡಿದ್ದರು. ಆದರೆ ಇದೀಗ ಬಿಸಿಸಿಐ (BCCI) ಪ್ರಕಟಿಸಿರುವ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ರಿಷಭ್ ಪಂತ್​ ಆಯ್ಕೆ ಆಗಿಲ್ಲ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.


ಟೀಂ ಇಂಡಿಯಾದಿಂದ ರಿಷಭ್ ಪಂತ್​ ಔಟ್​:


ತಂಡವನ್ನು ಘೋಷಿಸಿದ ನಂತರ ಬಿಸಿಸಿಐ ಬಿಡುಗಡೆ ಮಾಡಿದ ಬಿಡುಗಡೆಯಲ್ಲಿ ಯಾವ ಆಟಗಾರನಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಯಾರನ್ನು ಕೈಬಿಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಪಂತ್​ ಆಯ್ಕೆ ಏಕೆ ಆಗಲಿಲ್ಲ ಎಂಬುದರ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿಲ್ಲ. ಇನ್ನು, ಪಂತ್​ ಆಯ್ಕೆ ಆಗದಿರುವುದರ ಕುರಿತು ಕೆಲ ಮೂಲಗಳಿಂದ ಕೇಲೀಬರುತ್ತಿರುವ ಕಾರಣ ಎಂದರೆ ಅದು ಪಂತ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಪಂತ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಿಕೊಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.


ಪಂತ್​ ಮೊಣಕಾಲಿನ ಇಂಜುರಿಗೆ ಒಳಗಾಗಿದ್ದು, ಲಂಕಾ ಸರಣಿಯಿಂದ ಹೀಗಾಗಿ ದೂರ ಉಳಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ವೈದ್ಯಕೀಯ ತಂಡ ಅವರಿಗೆ ಮುಂದಿನ 2 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ತಿಳಿಸಿದೆಯಂತೆ. ಹೀಗಾಗಿ ಅವರು ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಆಗಿಲ್ಲ. ಮುಂದಿನ ನ್ಯೂಜಿಲ್ಯಾಂಡ್​ ಸರಣಿಗೆ ಆಯ್ಕೆ ಆಗುವ ಸಾಧ್ಯತೆ ಇದೆ.


2022ರಲ್ಲಿ ಪಂತ್​ ಪ್ರದರ್ಶನ ಹೇಗಿತ್ತು?:


ಪಂತ್​ 2022ರ T20 ಅಂತರರಾಷ್ಟ್ರೀಯ ಪ್ರದರ್ಶನವನ್ನು ನೋಡಿದರೆ, 25 ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ 364 ರನ್ ಗಳಿಸಿದ್ದು, ಸ್ಟ್ರೈಕ್ ರೇಟ್ 133 ಆಗಿತ್ತು. ಮತ್ತೊಂದೆಡೆ, ಕೆಎಲ್ ರಾಹುಲ್ 16 ಇನ್ನಿಂಗ್ಸ್‌ಗಳಲ್ಲಿ 29 ಸರಾಸರಿಯಲ್ಲಿ 434 ರನ್ ಗಳಿಸಿದ್ದಾರೆ. 6 ಅರ್ಧಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 127 ಆಗಿತ್ತು. ಆದರೆ, ದೊಡ್ಡ ತಂಡಗಳ ಎದುರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅವರ ಪ್ರದರ್ಶನ ಸರಾಸರಿಗಿಂತ ಕಡಿಮೆ ಇತ್ತು.


ಇದನ್ನೂ ಓದಿ: Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್​ ಶಾಕ್​! ಟಿ20 ಕ್ರಿಕೆಟ್​ಗೆ​ ವಿರಾಟ್ ತಾತ್ಕಾಲಿಕ ಬ್ರೇಕ್?


ಪಂತ್​-ರಾಹುಲ್​ ಔಟ್​:


ಇನ್ನು, 2022ರ ಏಕದಿನ ಮಾದರಿಯಲ್ಲಿ ರಿಷಬ್ ಪಂತ್ 10 ಇನ್ನಿಂಗ್ಸ್‌ಗಳಲ್ಲಿ 37ರ ಸರಾಸರಿಯಲ್ಲಿ 336 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದಾರೆ. ಅದೇ ವೇಳೆ ಕೆಎಲ್ ರಾಹುಲ್ ಪ್ರದರ್ಶನ ಕಳಪೆಯಾಗಿತ್ತು. ಅವರು 9 ಇನ್ನಿಂಗ್ಸ್‌ಗಳಲ್ಲಿ 28ರ ಸರಾಸರಿಯಲ್ಲಿ 251 ರನ್ ಗಳಿಸಿದ್ದಾರೆ. ಈ ವೇಳೆ ಕೇವಲ 2 ಅರ್ಧಶತಕಗಳನ್ನು ಗಳಿಸಲು ಸಾಧ್ಯವಾಯಿತು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.


ಅವರು 2022 ರಲ್ಲಿ 60 ರ ಸರಾಸರಿಯಲ್ಲಿ 417 ODIಗಳ ODI ಇನ್ನಿಂಗ್ಸ್‌ಗಳಲ್ಲಿ 417 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡಿದೆ. ಇತ್ತೀಚೆಗೆ ಅವರು ಬಾಂಗ್ಲಾದೇಶ ವಿರುದ್ಧ 210 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಅವರ ಸ್ಟ್ರೈಕ್ ರೇಟ್ ಕೂಡ ಪಂತ್ ಮತ್ತು ರಾಹುಲ್ ಗಿಂತ ಉತ್ತಮವಾಗಿದೆ. ಈ ನಡುವೆ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂಬ ಸುದ್ದಿಯೂ ಬರುತ್ತಿದೆ.


ಶ್ರೀಲಂಕಾ ಸರಣಿಗೆ ಭಾರತದ T20 ತಂಡ:


ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ ಶಿವಂ ಮಾವಿ, ಮುಖೇಶ್ ಕುಮಾರ್.


ಶ್ರೀಲಂಕಾ ಸರಣಿಗೆ ಭಾರತ ODI ತಂಡ:


ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

Published by:shrikrishna bhat
First published: