ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕಳೆದ ಹಲವು ತಿಂಗಳುಗಳಿಂದ ಮೈದಾನದಿಂದ ದೂರ ಉಳಿದಿದ್ದಾರೆ. 2022ರ ಏಷ್ಯಾಕಪ್ ವೇಳೆ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್ (T20 World Cup) ತಂಡದಿಂದಲೂ ದೂರವಿದ್ದರು. ಇದು ಭಾರತ ತಂಡಕ್ಕೆ ಸಹ ಹಿನ್ನಡೆ ಆಯಿತು. ಬಾಂಗ್ಲಾದೇಶ ಪ್ರವಾಸದಿಂದ (IND vs BAN) ಜಡೇಜಾ ಮೈದಾನಕ್ಕೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಈಗ ಜಡೇಜಾ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಫಿಟ್ನೆಸ್ ಕಡೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾರತ-ಶ್ರೀಲಂಕಾ ಪ್ರವಾಸ:
ಭಾರತ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ. ಆದರೆ ಈ ಸರಣಿಗೆ ಭಾರತ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಅದೇ ಸಮಯದಲ್ಲಿ ರವೀಂದ್ರ ಜಡೇಜಾ ಫಿಟ್ನೆಸ್ ಪರೀಕ್ಷೆ ನಡೆಸಲು ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಭಾರತ ತಂಡದ ಟಿ20 ತಂಡದಲ್ಲಿ ರವೀಂದ್ರ ಜಡೇಜಾ ಆಯ್ಕೆ ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ. ಇದಾದ ನಂತರ ಆಲ್ ರೌಂಡರ್ ಕೂಡ ODI ತಂಡವನ್ನು ಸೇರಿಕೊಳ್ಳಬಹುದು. ಶ್ರೀಲಂಕಾ ವಿರುದ್ಧ ಮೊದಲ ಟಿ20 ಜನವರಿ 3 ರಂದು, ಎರಡನೇ ಪಂದ್ಯ ಜನವರಿ 5 ರಂದು ಮತ್ತು ಮೂರನೇ ಪಂದ್ಯ ಜನವರಿ 7 ರಂದು ನಡೆಯಲಿದೆ.
ಭಾರತ- ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ:
1ನೇ ಏಕದಿನ ಪಂದ್ಯ: ಜನವರಿ 10, ಮಂಗಳವಾರ - ಗುವಾಹಟಿ
2ನೇ ಏಕದಿನ ಪಂದ್ಯ: ಜನವರಿ 12, ಗುರುವಾರ - ಕೋಲ್ಕತ್ತಾ
3ನೇ ಏಕದಿನ ಪಂದ್ಯ: ಜನವರಿ 15, ರವಿವಾರ - ತಿರುವನಂತಪುರ.
ಪ್ರಚಾರದಲ್ಲಿ ಜಡ್ಡು ಫುಲ್ ಬ್ಯೂಸಿ:
ಮೈದಾನದಿಂದ ದೂರವಿರುವಾಗ ರವೀಂದ್ರ ಜಡೇಜಾ ಬೇರೆಡೆ ಬ್ಯುಸಿಯಾಗಿದ್ದರು. ವಾಸ್ತವವಾಗಿ, ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪತ್ನಿ ರಿವಾಬಾ ಜಡೇಜಾ ಪರ ಪ್ರಚಾರ ಮಾಡುತ್ತಿದ್ದರು. ರಿವಾಬಾ ಅವರು ಜಾಮ್ನಗರ ಉತ್ತರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ರಿವಾಬಾ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಫೋಟೋಗಳನ್ನು ಜಡೇಜಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜಡೇಜಾ ಅವರು ಗಾಯದಿಂದ ಸಿಕ್ಕ ವಿರಾಮವನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ. ಕೆಲವು ದಿನಗಳ ಹಿಂದೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಆಸಕ್ತಿದಾಯಕ ಕಥೆಯನ್ನು ವಿವರಿಸಿದ್ದರು.
ಇದನ್ನೂ ಓದಿ: Team India: ಆಸೀಸ್, ಕಿವೀಸ್ & ಶ್ರೀಲಂಕಾ ವಿರುದ್ಧದ ಟೀಂ ಇಂಡಿಯಾ ವೇಳಾಪಟ್ಟಿ ಪ್ರಕಟ
ಜಡೇಜಾ, '2010 ರಲ್ಲಿ, ನಾನು ಮತ್ತು ಪ್ರಧಾನಿ ಮೋದಿ ಮೊದಲ ಬಾರಿಗೆ ಭೇಟಿಯಾದೆವು. ಆಗ ಅವರು ಗುಜರಾತ್ ಸಿಎಂ ಆಗಿದ್ದರು. ಅಹಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಾವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಆಡುತ್ತಿದ್ದೆವು. ಅದನ್ನು ನೋಡಲು ನರೇಂದ್ರ ಮೋದಿ ಕೂಡ ಬಂದಿದ್ದರು. ಅವರು ಆಟಗಾರರನ್ನು ಭೇಟಿ ಮಾಡಲು ಬಂದಾಗ, ಅವರು ನಮ್ಮ ನಾಯಕ ಮಹಿ ಭಾಯ್ (ಎಂಎಸ್ ಧೋನಿ) ಕಡೆಗೆ ನೋಡಿ, ಇವನು ನಮ್ಮ ಹುಡುಗ, ಅವನನ್ನು ನೋಡಿಕೊಳ್ಳಿ ಎಂದು ಹೇಳಿದ್ದರು. ಇಷ್ಟು ದೊಡ್ಡವರು ನಿಮ್ಮ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವಾಗ ಖುಷಿಯಾಗುತ್ತದೆ ಎಂದು ಜಡೇಜಾ ಹೇಳಿದ್ದಾರೆ. ಆ ಸಮಯದಲ್ಲಿ ನನಗೆ ತುಂಬಾ ಸಂತೋಷವಾಯಿತು ಎಂದು ಹೇಳಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ