• Home
  • »
  • News
  • »
  • sports
  • »
  • IND vs SL 2023: ಶ್ರೀಲಂಕಾ ಸರಣಿಗೆ ಮುಂದಿನ ವಾರ ಟೀಂ ಇಂಡಿಯಾ ಪ್ರಕಟ, ರೋಹಿತ್​ ಆಡೋದು ಡೌಟ್​?

IND vs SL 2023: ಶ್ರೀಲಂಕಾ ಸರಣಿಗೆ ಮುಂದಿನ ವಾರ ಟೀಂ ಇಂಡಿಯಾ ಪ್ರಕಟ, ರೋಹಿತ್​ ಆಡೋದು ಡೌಟ್​?

IND vs SL 2023

IND vs SL 2023

IND vs SL 2023: ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಯು ಮುಂದಿನ ವರ್ಷ 2023ರ ಜನವರಿ 3ರಿಂದ ಆರಂಭವಾಗಲಿದೆ. ಈ ಸರಣಿಗೆ ಮುಂದಿನ ವಾರ ಟೀಂ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೇ ಈ ಸರಣಿಯಿಂದ ಕೆಲ ಆಟಗಾರರು ಹೊರಗುಳಿಯುವ ಸಾಧ್ಯತೆಯೂ ಇದೆ.

  • Share this:

ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್​ ಸರಣಿ ನಡೆಯುತ್ತಿದ್ದು, ಟೀಂ ಇಂಡಿಯಾ ಇದಿಗ ಬಾಂಗ್ಲಾ ಪ್ರವಾಸದಲ್ಲಿದೆ. ಇಂದಿನಿಂದ ಆರಂಭವಾಗಿರುವ 2ನೇ ಟೆಸ್ಟ್​ ಸರಣಿಯು ಡಿಸೆಂಬರ್​ 26ರ ವರೆಗೆ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ (Team India) ಆಟಗಾರರು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಇದಾದ ಬಳಿಕ ತಂಡವು ಜನವರಿ 3ರಿಂದ ತವರಿನಲ್ಲಿ ಶ್ರೀಲಂಕಾ (IND vs SL 2023) ವಿರುದ್ಧಸ ಸರಣಿಯಲ್ಲಿ ಭಾಗಿಯಾಗಲಿದೆ. ಹೀಗಾಗಿ ಈ ಸರಣಿಗೆ ಬಿಸಿಸಿಐ (BCCI) ಮುಂದಿನ ವಾರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದ್ದು, ರೋಹಿತ್​ ಶರ್ಮಾ ಅವರನ್ನು ಈ ಬಾರಿ ತಂಡದಿಂದ ಕೈಬಿಡಬಹುದು ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ ಟೆಸ್ಟ್ ಸರಣಿಯಿಂದ ಹೊರಗುಳಿದ ನಂತರ ನಾಯಕ ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳುವ ಅಂತಿಮ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.


ಶ್ರೀಲಂಕಾ ವಿರುದ್ಧದ ಸರಣಿ:


ಟೀಂ ಇಂಡಿಯಾ ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಜನವರಿ 3 ರಂದು ಪ್ರಾರಂಭವಾಗಲಿರುವ ಸರಣಿಗೆ ರೋಹಿತ್ ಲಭ್ಯರಾಗುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಶ್ರೀಲಂಕಾ ವಿರುದ್ಧದ ODI ಸರಣಿಯು 2023 ಜನವರಿ 10ರಿಂದ ಪ್ರಾರಂಭವಾಗಲಿದೆ.ಹೀಗಾಗಿ ಟಿ20 ಸರಣಿಗೆ ರೋಹಿತ್​ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎಂದು ಕೇಳಿಬಂದಿದೆ.


ರೋಹಿತ್​ ಆಡುವುದು ಅನುಮಾನ?:


ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್ ಶರ್ಮ ಆಯ್ಕೆ ಕುರಿತು ಮುಂದಿನ ವಾರ ಅಂತಿಮವಾಗಲಿದೆ. ಮುಂದಿನ ವಾರ ಶ್ರೀಲಂಕಾ ಸರಣಿಗೆ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಹೊಸ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದೆ. ಆದಾಗ್ಯೂ, ರೋಹಿತ್ ಅವರ ಸೇರ್ಪಡೆಯ ನಿರ್ಧಾರವು ಬಿಸಿಸಿಐನ ವೈದ್ಯಕೀಯ ತಂಡದ ಅನುಮತಿಯನ್ನು ಅವಲಂಬಿಸಿರುತ್ತದೆ. WTC ರೇಸ್​ನಲ್ಲಿ ಭಾರತ ತಂಡ ಉಳಿಯಬೇಕಾದರೆ ಈಗ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಪಂದ್ಯವನ್ನೂ ಗೆಲ್ಲಬೇಕು. ಅಲ್ಲದೇ ಮುಂದಿನ ಆಸೀಸ್​ ವಿರುದ್ಧದ ಸರಣಿಯನ್ನೂ ಗೆಲ್ಲಲೇಬೇಕಿದೆ.


ಇದನ್ನೂ ಓದಿ: IND vs SL: ಶ್ರೀಲಂಕಾ ವಿರುದ್ಧ ಕಂಬ್ಯಾಕ್​ ಮಾಡಲಿದ್ದಾರೆ ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​


ಹೀಗಾಗಿ ರೋಹಿತ್ ಪ್ರಸ್ತುತ ತನ್ನ ಹೆಬ್ಬೆರಳಿನಲ್ಲಿ ಸ್ವಲ್ಪ ಬಿಗಿತವನ್ನು ಅನುಭವಿಸುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ರೋಹಿತ್‌ಗೆ ಸಂಪೂರ್ಣ ಪುನರ್ವಸತಿಗೆ ಸಲಹೆ ನೀಡಿದ್ದು, ಇದರ ಅವಧಿ ಇನ್ನೂ ತಿಳಿದಿಲ್ಲ. ಆದರೆ ಇದೀಗ, ರೋಹಿತ್​ ಅವರು ಮುಂದಿನ ಮೂರರಿಂದ ನಾಲ್ಕು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು NCA ತಿಳಿದೆಯಂತೆ. ಏಕೆಂದರೆ ಆಸೀಸ್​ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್​ ಲಭ್ಯತೆ ಬಹಳ ಮುಖ್ಯವಾಗಿರುತ್ತದೆ.


ಭಾರತ- ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ:


ಭಾರತ ಮತ್ತು ಶ್ರೀಲಂಕಾ ತಂಡಗಳು ಮುಂದಿನ ವರ್ಷ ಮುಖಾಮುಖಿ ಆಗಲಿದೆ. ಈ ವೇಳೆ ಉಭಯ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.


ಮೊದಲ ಟಿ20: ಜನವರಿ 3, 2023 ಮಂಗಳವಾರ - ಮುಂಬೈ
2ನೇ ಟಿ20: ಜನವರಿ 5, 2023 ಗುರುವಾರ - ಪುಣೆ
3ನೇ ಟಿ20: ಜನವರಿ 7, ಶನಿವಾರ - ರಾಜ್ಕೋಟ್​


1ನೇ ಏಕದಿನ ಪಂದ್ಯ: ಜನವರಿ 10, ಮಂಗಳವಾರ - ಗುವಾಹಟಿ
2ನೇ ಏಕದಿನ ಪಂದ್ಯ: ಜನವರಿ 12, ಗುರುವಾರ - ಕೋಲ್ಕತ್ತಾ
3ನೇ ಏಕದಿನ ಪಂದ್ಯ: ಜನವರಿ 15, ರವಿವಾರ - ತಿರುವನಂತಪುರ.


ಶ್ರೀಲಂಕಾ ODI ಸರಣಿಗಾಗಿ ಸಂಭಾವ್ಯ ಭಾರತ ತಂಡ:


ರೋಹಿತ್ ಶರ್ಮಾ (ಸಿ), ರಿಷಭ್ ಪಂತ್ (ವಿಸಿ) (ಡಬ್ಲ್ಯುಕೆ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್.

Published by:shrikrishna bhat
First published: