ಭಾರತ ತಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು (IND vs SL) ಭಾರತ ತಂಡದ ಗೆಲುವಿನೊಂದಿಗೆ ಆರಂಭಿಸಿದೆ. ಈ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ (Team India) ಪ್ರವಾಸಿ ತಂಡವನ್ನು 67 ರನ್ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಆತಿಥೇಯ ತಂಡ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು. ಅದೇ ಸಮಯದಲ್ಲಿ, ಪಂದ್ಯದ ಅಂತ್ಯದ ವೇಳೆ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಭಾರತೀಯ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಆ ಒಂದು ನಿರ್ಧಾರಕ್ಕೆ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಅಭಿಮಾನಿಗಳ ಮನ ಗೆದ್ದ ರೋಹಿತ್:
ಕೊನೆಯ ಓವರ್ ವರೆಗೂ ಪಂದ್ಯ ಸಂಪೂರ್ಣ ಭಾರತದ ಹಿಡಿತದಲ್ಲಿತ್ತು. ಆದರೆ ಶ್ರೀಲಂಕಾದ ನಾಯಕ ದಸುನ್ ಶನಕ ಶತಕಕ್ಕೆ ಕೇವಲ 2 ರನ್ ಅಂತರದಲ್ಲಿದ್ದರು. ಶಮಿ ಅವರ ಓವರ್ ಪೂರ್ಣಗೊಳ್ಳಲು ಕೇವಲ 3 ಎಸೆತಗಳು ಉಳಿಡಿತ್ತು. ಈ ಸಮಯದಲ್ಲಿ ಶ್ರೀಲಂಕಾ ನಾಯಕ ನಾನ್ ಸ್ಟ್ರೈಕ್ನಲ್ಲಿ ನಿಂತಿದ್ದರು. ನಾಲ್ಕನೇ ಎಸೆತದಲ್ಲಿ ಶ್ರೀಲಂಕಾ ನಾಯಕ ತಪ್ಪು ಮಾಡಿ ಬೌಲಿಂಗ್ ಕ್ರಮ ಪೂರ್ಣಗೊಳ್ಳುವ ಮುನ್ನವೇ ಕ್ರೀಸ್ ತೊರೆದಿದ್ದರು. ಮೊಹಮ್ಮದ್ ಶಮಿ ಅವಕಾಶವನ್ನು ಕಳೆದುಕೊಳ್ಳಲಿಲ್ಲ ಮತ್ತು ಚೆಂಡನ್ನು ಸ್ಟಂಪ್ ಮಾಡಿದರು. ಅದು ಔಟ್ ಎಂದು ಶಮಿ ಅಪೀಲ್ ಮಾಡಿದರು. ಆದರೆ ಶಮಿಯ ಈ ಕ್ರಮಕ್ಕೆ ನಾಯಕ ರೋಹಿತ್ ಶರ್ಮಾ ಮಾತನಾಡಿ ಮನವಿಯನ್ನು ಹಿಂಪಡೆಯುವಂತೆ ಹೇಳಿದ್ದಾರೆ. ಇದಾದ ಬಳಿಕ ಶ್ರೀಲಂಕಾ ನಾಯಕ ಶತಕ ಪೂರೈಸಿದರು.
Captain @ImRo45 explains why he withdrew the run-out appeal at non striker’s end involving Dasun Shanaka.#INDvSL @mastercardindia pic.twitter.com/ALMUUhYPE1
— BCCI (@BCCI) January 10, 2023
ಶನಕ ರನೌಟ್ ಆದ ನಂತರ ರೋಹಿತ್ ಮನವಿ ಹಿಂಪಡೆದ ನಂತರ ರವಿಚಂದ್ರನ್ ಅಶ್ವಿನ್ ಕೂಡ ನೆನಪಾದರು. ಐಪಿಎಲ್ನಿಂದ ಅಂತರರಾಷ್ಟ್ರೀಯ ಪಂದ್ಯಗಳವರೆಗೆ ಮಂಕಡಿಂಗ್ ಮಾಡುವ ಆಟಗಾರರಲ್ಲಿ ಅಶ್ವಿನ್ ಒಬ್ಬರು. ಆದಾಗ್ಯೂ, ಕ್ರೀಡಾ ಪ್ರಪಂಚವು ಈ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದೆ. ಒಂದು ವರ್ಗವು ಈ ನಿಯಮವನ್ನು ಬೆಂಬಲಿಸುತ್ತದೆ. ಎರಡನೆಯ ವರ್ಗವು ಅದನ್ನು ನ್ಯಾಯೋಚಿತ ಆಟವೆಂದು ಪರಿಗಣಿಸುವುದಿಲ್ಲ. ಅದಕ್ಕಾಗಿಯೇ ಐಸಿಸಿ ನಿಯಮದ ಹೊರತಾಗಿಯೂ ಅದನ್ನು ಬಳಸಲು ಅನೇಕರು ಇಷ್ಟಪಡುತ್ತಿಲ್ಲ.
ಇದನ್ನೂ ಓದಿ: Prithvi Shaw: 49 ಬೌಂಡರಿ, 4 ಸಿಕ್ಸರ್, 400 ಜಸ್ಟ್ ಮಿಸ್! ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರ
ಈ ರೀತಿ ಔಟ್ ಮಾಡಲು ಸಾಧ್ಯವಿಲ್ಲ:
ಭಾರತ ತಂಡದ ನಾಯಕನೊಂದಿಗಿನ ಪಂದ್ಯದ ನಂತರ ಈ ಬಗ್ಗೆ ಮಾತನಾಡುವಾಗ, 'ಶಮಿ ಈ ರೀತಿ ಮಾಡಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ದಸುನ್ ಶನಕ 98* ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ನಾವು ಅವರನ್ನು ಈ ರೀತಿ ಔಟ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ರನೌಟ್ ಅನ್ನು ಹಿಂಪಡೆದೆ ಎಂದು ಹೇಳಿಕೊಂಡಿದ್ದಾರೆ.
ಶ್ರೀಲಂಕಾ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿರಬಹುದು. ಆದರೆ ನಾಯಕ ದಸುನ್ ಶನಕ ತಂಡವನ್ನು ಗೆಲುವಿಗೆ ಬಿಡದೆ ಕೊನೆಯ ಎಸೆತದವರೆಗೂ ಹೋರಾಡಿದರು. 88 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 108 ರನ್ಗಳ ಅಮೋಘ ಇನಿಂಗ್ಸ್ ಆಡಿದರು. ರೋಹಿತ್ ಶರ್ಮಾ ಅವರಿಂದ ಲೈಫ್ ಪಡೆದ ಬಳಿಕ ಶ್ರೀಲಂಕಾ ನಾಯಕನ ಮುಖದಲ್ಲಿ ಸಂತಸ ಮೂಡಿತ್ತು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ