• Home
  • »
  • News
  • »
  • sports
  • »
  • IND vs SA: ಆಫ್ರಿಕಾ ವಿರುದ್ಧ ಮುಗ್ಗರಿಸಿದ ಭಾರತ, ಐತಿಹಾಸಿಕ ಸರಣಿ ಗೆಲುವಿನೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ

IND vs SA: ಆಫ್ರಿಕಾ ವಿರುದ್ಧ ಮುಗ್ಗರಿಸಿದ ಭಾರತ, ಐತಿಹಾಸಿಕ ಸರಣಿ ಗೆಲುವಿನೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾಗೆ ಜಯ

ದಕ್ಷಿಣ ಆಫ್ರಿಕಾಗೆ ಜಯ

IND vs SA: ಭಾರತ ತಂಡ 18.3 ಓವರ್​ಗಳಲ್ಲಿ 10 ವಿಕೆಟ್ ನಷ್ಟಕ್ಕೆ 178 ರನ್​ಗಳಿಸುವ ಮೂಲಕ 49 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಸರಣಿಯನ್ನು ಗೆದ್ದು ಬೀಗಿತು.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ 3ನೇ ಪಂದ್ಯ ಇಂದು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕ (South Africa national cricket team) ಇಂದು ಭರ್ಜರಿ ಬ್ಯಾಟಿಂಗ್​ ಮಾಡಿತು. ಅಲ್ಲದೇ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 227 ರನ್ ಗಳಿಸಿತು.  ಈ ಮೊತ್ತ ಬೆನ್ನಟ್ಟಿದ ಭಾರತ ತಂಡ (Team India) 18.3 ಓವರ್​ಗಳಲ್ಲಿ 10 ವಿಕೆಟ್ ನಷ್ಟಕ್ಕೆ 178 ರನ್​ಗಳಿಸುವ ಮೂಲಕ 49 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಸರಣಿಯನ್ನು ಗೆದ್ದು ಬೀಗಿತು.


ಆಫ್ರಿಕಾ  ದಾಳಿಗೆ ತತ್ತರಿಸಿದ ಟೀಂ ಇಂಡಿಯಾ:


ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯ ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್​ ಆದರೆ, ಬರ್ತ ಡೇ ಬಾಯ್​ ರಿಷಭ್ ಪಂತ್​ 27 ರನ್ ಗಳಿಸಿ ಫೆವೆಲಿಯನ್ ತೆರಳಿದರು. ಆದರೆ ದಿನೇಶ್​ ಕಾರ್ತಿಕ್​ 21 ಬೌಲ್​ಗಳಲ್ಲಿ 4 ಸಿಕ್ಸ್ ಮತ್ತು 4 ಬೌಂಡರಿ್ಗಳ ನೆರವಿನಿಂದ 46 ರನ್​ ಗಳಿಸಿ ಮಿಂಚಿದರು. ಉಳಿದಂತೆ ಶ್ರೇಯಸ್​ ಅಯ್ಯರ್ 1 ರನ್, ಸೂರ್ಯಕುಮಾರ್ ಯಾದವ್ 8 ರನ್, ಅಕ್ಷರ್ ಪಟೇಲ್ 9 ರನ್, ಹರ್ಷಲ್ ಪಟೇಲ್ 17 ರನ್, ಆರ್​ ಅಶ್ವಿನ್​ 2 ರನ್, ದೀಪಕ್​ ಚಹರ್​ 17 ಎಸೆತದಲ್ಲಿ 3 ಸಿಕ್ಸ್ ಮತ್ತು 2 ಪೋರ್​ ಮೂಲಕ 31 ರನ್ ಗಳಿಸುವ ಮೂಲಕ ಒಮ್ಮೆ ಗೆಲುವಿನ ಆಸೆ ಮೂಡಿಸಿದ್ದರು. ಉಳಿದಂತೆ ಉಮೇಶ್​ ಯಾದವ್ 20 ರನ್ ಮತ್ತು ಮೊಹಮ್ಮದ್ ಸಿರಾಜ್ ಅಂತಿಮವಾಗಿ 5 ರನ್ ಗಳಿಸಿದರು.



ಸರಣಿ ಗೆದ್ದು ದಾಖಲೆ ಬರೆದ ಭಾರತ:


ಇನ್ನು, ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ಕೊನೆಯ ಪಂದ್ಯವನ್ನು ಸೋತರೂ ಮೊದಲೆರಡು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. ಈ ಮೂಲಕ ರೋಹಿತ್ ಪಡೆ ಐತಿಹಾಸಿಕ ಸರಣಿ ಗೆದ್ದು ದಾಖಲೆ ಬರೆದಿದೆ. ಹೌದು, ದಕ್ಷಿಣ ಆಫ್ರಿಕಾ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐದು ಪಂದ್ಯಗಳ T20I ಸರಣಿಯನ್ನು ಆಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ನಿರ್ಣಾಯಕ ಪಂದ್ಯ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಸರಣಿಯು 2-2ರಲ್ಲಿ ಕೊನೆಗೊಂಡಿತು. 2018 ರಿಂದ ತವರಿನಲ್ಲಿ ನಡೆದ T20I ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಇನ್ನೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿರಲಿಲ್ಲ. ಆದರೆ ಇದೀಗ ಈ ಗೆಲುವಿನ ಓಟಕ್ಕೆ ಟೀಂ ಇಂಡಿಯಾ ಬ್ರೇಕ್​ ಹಾಕಿದೆ.


ಇದನ್ನೂ ಓದಿ: Sourav Ganguly: ದುರ್ಗಾಪೂಜೆಯ ಸಂಭ್ರಮದಲ್ಲಿ ಗಂಗೂಲಿ, ಢಕ್ಕೆ ಬಾರಿಸಿ ದೇವಿಗೆ ನಮಿಸಿದ ದಾದಾ


ಉತ್ತಮ ಬೌಲಿಂಗ್​ ದಾಳಿ ಮಾಡಿದ ಆಫ್ರಿಕಾ:


ಇಂದು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಬೌಲರ್​ಗಳು ಉತ್ತಮ ದಾಳಿ ನಡೆಸಿದರು. ಆಪ್ರಿಕಾ ಪರ ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ ಮತ್ತು ಡ್ವೈನ್ ಪ್ರಿಟೋರಿಯಸ್ ತಲಾ 4 ಓವರ್​ ಬೌಲ್​ ಮಾಡಿ 2 ವಿಕೆಟ್​ ಪಡೆದು ಭಾರತದ ಕುಸಿತಕ್ಕೆ ಕಾರಣರಾದರು. ಉಳಿದಂತೆ ,  ಕಗಿಸೊ ರಬಾಡ ಸಹ 1 ವಿಕೆಟ್​ ಪಡೆದರು.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೂ ಮೊದಲೇ ಟೀಂ ಇಂಡಿಯಾದಲ್ಲಿ ಟೆನ್ಷನ್, ಬುಮ್ರಾ ನಂತರ ಮತ್ತೊಬ್ಬ ಆಟಗಾರ ಇಂಜೂರಿ


ಟಿ20 ವಿಶ್ವಕಪ್​ಗಾಗಿ ಆಸೀಸ್​ಗೆ ಹಾರಲಿರುವ ಭಾರತ:


ಇನ್ನು, ಟಿ20 ವಿಶ್ವಕಪ್​ಗೂ ಮುನ್ನ ಭಾರತದ ಕೊನೆಯ ಸರಣಿ ಇದಾಗಿತ್ತು. ಇದೀಗ ಸರಣಿ ಮುಕ್ತಾಗೊಂಡಿದ್ದು, ಭಾರತ ತಂಡ ಇದೇ ಅಕ್ಟೋಬರ್​ 8ರಂದು ಟೀಂ ಇಂಡಿಯಾ ತಂಡವು ಆಸ್ಟ್ರೇಲಿಯಾಗೆ ತೆರಳಲಿದೆ. ಟೂರ್ನಿಗೂ ಮುನ್ನ ಭಾರತ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.

Published by:shrikrishna bhat
First published: