• Home
  • »
  • News
  • »
  • sports
  • »
  • IND vs SA: ಗುವಾಹಟಿಯಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ? ಇಂದಿನ ಪಂದ್ಯ ಗೆಲ್ಲುವವರು ಯಾರು?

IND vs SA: ಗುವಾಹಟಿಯಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ? ಇಂದಿನ ಪಂದ್ಯ ಗೆಲ್ಲುವವರು ಯಾರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SA: ಭಾರತ ತಂಡ ಇದುವರೆಗೆ ಗುವಾಹಟಿಯಲ್ಲಿ ಮೂರು T20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಭಾರತ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು.

  • Share this:

ಟೀಂ ಇಂಡಿಯಾ ಇಂದು ದಕ್ಷಿಣ ಆಫ್ರಿಕಾ (IND vs SA) ವಿರುದ್ಧ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ (Barsapara Cricket Stadium) ಎರಡನೇ ಟಿ20 ಪಂದ್ಯವನ್ನು ಆಡಲಿದೆ.  3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ನಡೆಯಲಿದ್ದು, ಇಂದಿನ ಪಂದ್ಯ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಅಲ್ಲದೇ ಈ ಸರಣಿಯು ಟಿ20 ವಿಶ್ವಕಪ್​ನ (T20 World Cup) ಆಧಾರದ ಮೇಲೆ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ. ಅಲ್ಲದೇ 2018 ರಿಂದ ತವರಿನಲ್ಲಿ ನಡೆದ T20I ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಇನ್ನೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿಲ್ಲ.


ಗುವಾಹಟಿಯಲ್ಲಿ ಟೀಂ ಇಂಡಿಯಾದ ದಾಖಲೆ:


ಭಾರತ ತಂಡ ಇದುವರೆಗೆ ಗುವಾಹಟಿಯಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಭಾರತ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು. 2018ರಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿತ್ತು. 2020ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.



ಮತ್ತೊಂದೆಡೆ, ಭಾರತ ತಂಡ ಗುವಾಹಟಿಯಲ್ಲಿ ಇದುವರೆಗೆ 12 ಏಕದಿನ ಪಂದ್ಯಗಳನ್ನು ಆಡಿದೆ. ಆದರೆ ಅದರಲ್ಲಿ ಎರಡು ಪಂದ್ಯಗಳು ರದ್ದಾಗಿದ್ದವು. ಇನ್ನುಳಿದ 10 ಪಂದ್ಯಗಳಲ್ಲಿ ಭಾರತ ಆರರಲ್ಲಿ ಗೆದ್ದಿದೆ. ನಾಲ್ಕು ಪಂದ್ಯಗಳಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದೆ.


ಇದನ್ನೂ ಓದಿ: IND vs SA: ಮತ್ತೊಂದು ದಾಖಲೆಯ ಸನಿಹದಲ್ಲಿ ಕಿಂಗ್​ ಕೊಹ್ಲಿ? ರೋಹಿತ್​ ರೆಕಾರ್ಡ್ ಮೇಲೆ ವಿರಾಟ್ ಕಣ್ಣು


ಆಫ್ರಿಕಾದ ದಾಖಲೆಯನ್ನು ಮುರಿಯುತ್ತಾರೆಯೇ?:


2015-16ರ ಋತುವಿನಲ್ಲಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಟಿ20 ಸರಣಿಯನ್ನು ಆಡಲು ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ನಂತರ ದಕ್ಷಿಣ ಆಫ್ರಿಕಾ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತ್ತು. ಆ ಬಳಿಕ 2019 ಮತ್ತು 2020ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಆದರೆ ಆಗ ದಕ್ಷಿಣ ಆಫ್ರಿಕಾ ಟಿ20 ಸರಣಿಯನ್ನು 1-1 ಮತ್ತು 2-2ರಲ್ಲಿ ಸಮಬಲಗೊಳಿಸಿತ್ತು. ಹಾಗಾಗಿ ಅವರಿಗೆ ಸರಣಿ ಸೋಲುವ ಸಮಯ ಬರಲಿಲ್ಲ. ಆದರೆ ಈ ವರ್ಷ ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಗೆಲ್ಲಲು ಬಿಡಬಾರದು ಎಂಬ ಉದ್ದೇಶದಿಂದ ಟೀಂ ಇಂಡಿಯಾ ಫೀಲ್ಡಿಗಿಳಿದಿದೆ.



 ಭಾರತ ತಂಡದಲ್ಲಿ ಬದಲಾವಣೆ?:


ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಟೀಮ್ ಇಂಡಿಯಾ ಈಗ ಕೇವಲ ಎರಡು ಅಭ್ಯಾಸ ಪಂದ್ಯಗಳನ್ನು ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಬುಮ್ರಾ ಬದಲಿಗೆ ತಂಡಕ್ಕೆ ಸೇರ್ಪಡೆಗೊಂಡಿರುವ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುತ್ತದೆಯೇ ಎಂಬುದು ಮುಖ್ಯ. ಹಾಗಾದರೆ ಶ್ರೇಯಸ್ ಅಯ್ಯರ್‌ಗೆ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಅವಕಾಶ ಸಿಗುತ್ತದೆಯೇ? ಇದು ಕೂಡ ಒಂದು ಪ್ರಶ್ನೆಯಾಗಿದೆ.


ಇದನ್ನೂ ಓದಿ: Team India: ಅಕ್ಟೋಬರ್​ ತಿಂಗಳಲ್ಲಿನ ಟೀಂ ಇಂಡಿಯಾದ ವೇಳಾಪಟ್ಟಿ, ಇಲ್ಲಿದೆ ಲೈವ್​ ಸ್ಟ್ರೀಮಿಂಗ್​ ಸಂಪೂರ್ಣ ವಿವರ


IND vs SA  ಸಂಭಾವ್ಯ ಪ್ಲೇಯಿಂಗ್ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಅಶ್ವಿನ್, ಅರ್ಷದೀಪ್, ಹರ್ಷಲ್ ಪಟೇಲ್, ದೀಪಕ್ ಚಹಾರ್


ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ, ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಿಯನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಶಮ್ಸಿ, ಅನ್ರಿಚ್ ನಾರ್ಟ್ಜೆ

Published by:shrikrishna bhat
First published: