• Home
  • »
  • News
  • »
  • sports
  • »
  • IND vs SA: ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಟೀಂ ಇಂಡಿಯಾದ 3 ಸ್ಟಾರ್​ ಪ್ಲೇಯರ್ಸ್​ ಔಟ್​, ಮೂವರು ಇನ್​

IND vs SA: ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಟೀಂ ಇಂಡಿಯಾದ 3 ಸ್ಟಾರ್​ ಪ್ಲೇಯರ್ಸ್​ ಔಟ್​, ಮೂವರು ಇನ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SA: ಇಂದಿನಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯು ಆರಂಭವಾಗಲಿದೆ. ಮೊದಲ ಪಂದ್ಯವು ತಿರುವನಂತಪುರ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಸರಣಿಯಿಂದ ಭಾರತ ತಂಡದ ಮೂವರು ಸ್ಟಾರ್​ ಪ್ಲೇಯರ್ಸ್​ ಹೊರಗುಳಿದಿದ್ದಾರೆ.

  • Share this:

ಇಂದಿನಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯವು ತಿರುವನಂತಪುರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಟೀಂ ಇಂಡಿಯಾ ಮತ್ತು ಸೌತ್​ ಆಫ್ರಿಕಾ (South Africa) ತಂಡಗಳು ತಿರುವನಂತಪುರಗೆ ತಲುಪಿದೆ. ಈಗಾಗಲೇ ಟಿ20 ವಿಶ್ವಕಪ್​ಗೆ (T20 World Cup) ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ಹೀಗಾಗಿ ಈ ಸರಣಿಯು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ.  ಟಿ20 ವಿಶ್ವಕಪ್​ನಂತೆ ಆಫ್ರಿಕಾ ಸರಣಿಗೂ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಆದರೆ ಈ ಸರಣಿಯಿಂದ ಭಾರತ ತಂಡದ ಪ್ರಮುಖ ಮೂವರು ಆಟಗಾರರು ಹೊತರಗುಳಿಯಲಿದ್ದಾರೆ. ಇವರ ಬದಲಾಗಿ ಬೇರೆ 3 ಪ್ಲೇಯರ್ಸ್​ಗಳು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ.


ಮೂವರು ಸ್ಟಾರ್​ ಪ್ಲೇಯರ್ಸ್​ ಔಟ್​:


ಹೌದು, ದಕ್ಷಿಣ ಆಫ್ರಿಕಾ ಸರಣಿಗೆ ಭಾ ರತ ತಂಡದ ಪ್ರಮುಖ ಮೂವರು ಆಟಗಾರರು ಹೊರಗುಳಿದಿದ್ದಾರೆ. ಆಸೀಸ್​ ವಿರುದ್ಧದ ಟಿ20 ಸರಣಿಯಿಂದ ಕೊರೋನಾ ಕಾರಣದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಈ ಸರಣಿಯಿಂದಲೂ ಹೊರಗುಳಿದಿದ್ದಾರೆ. ಇವರ ಬದಲಾಗಿ  ಉಮೇಶ್ ಯಾದವ್ ಅವನರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ವ್ಯಯಕ್ತಿಕ ಕಾರಣದಿಂದ  ಹಾರ್ದಿಕ್ ಪಾಂಡ್ಯ ಸಹ ಸರಣಿಯಿಂದ ದೂರ ಉಳಿದಿದ್ದು, ಅವರ ಬದಲಿಗೆ   ಶ್ರೇಯಸ್ ಅಯ್ಯರ್ ಅವರಿಗೆ ಈ ಬಾರಿ ಚಾನ್ಸ್ ದೊರಕಿದೆ. ಇನ್ನು, ಕೊನೆಯದಾಗಿ ಸರಣಿಗೆ ಆಯ್ಕೆ ಆಗಿದ್ದ ಆಲ್​ರೌಂಡರ್ ದೀಪಕ್ ಹೂಡಾ ಬೆನ್ನು ನೋಡವಿನ ಕಾರಣದಿಂದಾಗಿ ಸರಣಿಯನ್ನು ತಪ್ಪಿಸಿಕೊಳ್ಳುತ್ತಿದ್ದು, ಬದಲಿ ಆಟಗಾರನಾಗಿ ಯುವ ಆಲ್​ರೌಂಡರ್ ಶಹಬಾಜ್ ಅಹ್ಮದ್​ಗೆ ಸ್ಥಾನ ನೀಡಲಾಗಿದೆ.IND vs SA  ಟಿ20 ಸರಣಿ ವಿವರ:


ಇನ್ನು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂನಲ್ಲಿ ನಡೆಯಲಿದೆ. ಸರಣಿಯ 3 ಪಂದ್ಯಗಳೂ ಸಹ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.


ಇದನ್ನೂ ಓದಿ: IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನಿಗೆ ಉಪನಾಯಕನ ಪಟ್ಟ?


ಭಾರತ Vs ದಕ್ಷಿಣ ಆಫ್ರಿಕಾ :


ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)


ಇದನ್ನೂ ಓದಿ: T20 World Cup 2022: ಹೀಗೆ ಆಡಿದರೆ ಈ ಮೂವರು ಆಟಗಾರರು ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಅನುಮಾನವಂತೆ!


ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್.

Published by:shrikrishna bhat
First published: