• Home
  • »
  • News
  • »
  • sports
  • »
  • IND vs SA ODI: ನಾಳೆ ಭಾರತ-ಆಫ್ರಿಕಾ ಏಕದಿನ ಪಂದ್ಯ; ಇಲ್ಲಿದೆ ಲೈವ್ ಸ್ಟ್ರೀಮಿಂಗ್, ಪ್ಲೇಯಿಂಗ್​ 11 ಸಂಪೂರ್ಣ ವಿವರ

IND vs SA ODI: ನಾಳೆ ಭಾರತ-ಆಫ್ರಿಕಾ ಏಕದಿನ ಪಂದ್ಯ; ಇಲ್ಲಿದೆ ಲೈವ್ ಸ್ಟ್ರೀಮಿಂಗ್, ಪ್ಲೇಯಿಂಗ್​ 11 ಸಂಪೂರ್ಣ ವಿವರ

IND vs SA ODI

IND vs SA ODI

IND vs SA ODI: ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಭಾರತ ತಂಡ ಗೆದ್ದು ಬೀಗಿದೆ. ಇದೀಗ ಟೀಂ ಇಂಡಿಯಾ ನಾಳೆಯಿಂದ ಆರಂಭವಾಗಲಿರುವ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಸಿದ್ದವಾಗಿದೆ. ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ.

  • Share this:

ಶಿಖರ್ ಧವನ್ ನಾಯಕತ್ವದ ಭಾರತ ಕ್ರಿಕೆಟ್ ತಂಡವು ನಾಳೆ (ಅಕ್ಟೋಬರ್ 6) 3 ಪಂದ್ಯಗಳ ಸರಣಿಯ ಮೊದಲ ಏಕದಿನ (ODI) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು (IND vs SA) ಎದುರಿಸಲಿದೆ. ಭಾರತ ತಂಡವೂ ಲಕ್ನೋದಲ್ಲಿ ಅಭ್ಯಾಸ ಆರಂಭಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್‌ಗಾಗಿ (T20 World Cup) ಭಾರತದ ಪ್ರಮುಖ ತಂಡ ಅದೇ ದಿನ ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಬೇಕಿದೆ. ಇತ್ತ ಶಿಖರ್​ ಧವನ್ (Shikhar Dhawan) ನಾಯಕತ್ವದಲ್ಲಿ ಭಾರತ ತಂಡ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Cricket Stadium) ನಾಳೆ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ದೀಪಕ್ ಚಹರ್ ಮತ್ತು ಅಯ್ಯರ್ ಏಕದಿನ ಸರಣಿಯ ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಇನ್ನು, ಪಂದ್ಯದ ವಿವರ ಮತ್ತು ಪ್ಲೇಯಿಂಗ್​ 11 ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ನಾಳೆ ನಡೆಯಲಿದೆ. ಪಂದ್ಯವು ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಧ್ಯಾಹ್ನ 1:30 ರಿಂದ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಗೆ ಟಾಸ್ ನಡೆಯಲಿದೆ. ಈ ಸರಣಿಯ ಅಷ್ಟು ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಹಾಗೂ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು.


ಪಿಚ್​ ವರದಿ:


ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್‌ಗೆ ಸ್ವಲ್ಪ ಅನುಕೂಲವಾಗಿದ್ದು, ಸಮತೋಲನದಲ್ಲಿದೆ. ಪಿಚ್‌ಗಳು ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದೆ ಆದ್ದರಿಂದ ಬೌಲರ್‌ಗಳು ವಿಕೆಟ್‌ನಿಂದ ಗಮನಾರ್ಹ ಪ್ರಮಾಣದ ಬೌನ್ಸ್ ಅನ್ನು ಹೊರತೆಗೆಯಲು ಸಾಧ್ಯವಾಗುತ್ತದೆ, ಇದು ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ. ಸೀಮರ್‌ಗಳು ಆಟದ ಆರಂಭಿಕ ಓವರ್‌ಗಳಲ್ಲಿ ಮೇಲುಗೈ ಸಾಧಿಸಬಹುದು. ಹೀಗಾಗಿ ಮೊದಲು ಟಾಸ್​ ಗೆದ್ದ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಲ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ಟೆನ್ಷನ್ ಹೆಚ್ಚಿಸಿದ ರೋಹಿತ್, ಈ ವಿಚಾರದಲ್ಲಿ ಹಿಟ್​ಮ್ಯಾನ್​ಗಿಂತ ಕೊಹ್ಲಿಯೇ ಬೆಸ್ಟ್!


ಹವಾಮಾನ ವರದಿ:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಸರಣಿಯ ಮೊದಲ ODI ಪಂದ್ಯವು ನಾಳೆ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿದೆ. ಲಕ್ನೋದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ಆಕಾಶವು ಹೆಚ್ಚಾಗಿ ಮೋಡ ಮತ್ತು ತೇವಾಂಶದಿಂದ ಕೂಡಿರುತ್ತದೆ. ದಿನದ ಅವಧಿಯಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಗುರುವಾರ ಮಳೆ ಪ್ರಮಾಣ ಶೇ 95ರಷ್ಟಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ. ಗಾಳಿಯ ವೇಗ ಗಂಟೆಗೆ 19 ಕಿ.ಮೀ ಆಗಿರಬಹುದು ಮತ್ತು ಲಕ್ನೋದಲ್ಲಿ ಸಂಜೆ ಆರ್ದ್ರವಾಗಿರುತ್ತದೆ.


ಇದನ್ನೂ ಓದಿ: Urvashi-Rishabh: ರಿಷಭ್ ಪಂತ್​ಗೆ ಫ್ಲೈಯಿಂಗ್ ಕಿಸ್ ಮೂಲಕ ವಿಶ್​ ಮಾಡಿದ ಊರ್ವಶಿ, ಇಬ್ಬರು ಗೆಳತಿಯರ ಮುದ್ದಿನ ಹೀರೋ ಎಂದ ನೆಟ್ಟಿಗರು


IND vs SA ODI ಸಂಭಾವ್ಯ  ತಂಡ:


ಭಾರತ ಸಂಭಾವ್ಯ ತಂಡ: ಶಿಖರ್ ಧವನ್ (c), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (WK), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ರವಿ ಬಿಷ್ಣೋಯ್


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (WK), ಟೆಂಬಾ ಬವುಮಾ (c), ಐಡೆನ್ ಮಾರ್ಕ್ರಾಮ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ.

Published by:shrikrishna bhat
First published: