• Home
  • »
  • News
  • »
  • sports
  • »
  • IND vs SA ODI: ಟಾಸ್​ ಗೆದ್ದ ಟೀಂ ಇಂಡಿಯಾ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs SA ODI: ಟಾಸ್​ ಗೆದ್ದ ಟೀಂ ಇಂಡಿಯಾ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs SA ODI

IND vs SA ODI

IND vs SA ODI: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೊದಲ ಏಕದಿನ ಪಂದ್ಯಕ್ಕೆ (ODI Match) ಕೊನೆಗೂ ಮಳೆ ನಿಂತಿರುವ ಕಾರಣ ಪಂದ್ಯ ಆರಂಭವಾಗಿದೆ. ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಸ್ವೀಕರಿಸಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಮೊದಲ ಏಕದಿನ ಪಂದ್ಯಕ್ಕೆ (ODI Match) ಕೊನೆಗೂ ಮಳೆ ನಿಂತಿರುವ ಕಾರಣ ಪಂದ್ಯ ಆರಂಭವಾಗಿದೆ. ಲಕ್ನೋದ ಇಕಾನಾ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಯಾಯಿತು. ಇದರಿಂದ ಸುಮಾರು ಎರಡು ಗಂಟೆಗಳ ಆಟ ವ್ಯರ್ಥವಾಯಿತು. ಆದರೆ ಅಂತಿಮವಾಗಿ ಈ ಪಂದ್ಯವನ್ನು ಟಾಸ್ ಮಾಡಲಾಗಿದ್ದು, ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಸ್ವೀಕರಿಸಿದೆ. ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ (Ruturaj Gaikwad) ಈ ಪಂದ್ಯದ ತಂಡದಲ್ಲಿ ಅಂತಿಮವಾಗಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಮಳೆಯಿಂದಾಗಿ ಈ ಪಂದ್ಯ 40-40 ಓವರ್‌ ಗಳಿಗೆ ಸೀಮಿತಗೊಳಿಸಲಾಗಿದೆ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸರಣಿಯ ಎಲ್ಲಾ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಹಾಗೂ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು. ಅಲ್ಲದೇ ಪಂದ್ಯದಲ್ಲಿ ಪ್ರತೀ ತಂಡವು ಕೇವಲ 40 ಓವರ್​ಗಳನ್ನು ಆಡಲಿದೆ. ಪವರ್ ಪ್ಲೇ 8 ಓವರ್‌ಗಳಾಗಿರುತ್ತದೆ.ಚೊಚ್ಚಲ ಪಂದ್ಯವಾಡಲಿರುವ ಯಂಗ್​ ಪ್ಲೇಯರ್ಸ್​:


ಜಿಂಬಾಬ್ವೆ ಪ್ರವಾಸದಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರದ ರಿತುರಾಜ್ ಗಾಯಕ್ವಾಡ್ ಕೊನೆಗೂ ಅವಕಾಶ ದೊರಕಿದೆ. ಅವರು ಲಕ್ನೋದಲ್ಲಿ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ರಿತುರಾಜ್ ಜೊತೆಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಲಕ್ನೋದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಲಿದ್ದಾರೆ.


ಇದನ್ನೂ ಓದಿ: T20 Cricket: ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವೆಸ್ಟ್ ಇಂಡೀಸ್ ದೈತ್ಯ; 22 ಸಿಕ್ಸರ್, 17 ಫೋರ್


IND vs SA ODI ಹೆಡ್​ ಟು ಹೆಡ್​:


2022ರಲ್ಲಿ ಟೀಂ ಇಂಡಿಯಾ ಇದುವರೆಗೆ 15 ಏಕದಿನ ಪಂದ್ಯಗಳನ್ನು ಆಡಿದೆ. 11ರಲ್ಲಿ ಗೆದ್ದಿದ್ದರೆ 4ರಲ್ಲಿ ಸೋತಿದ್ದಾರೆ. ಈ ವರ್ಷ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 3 ಏಕದಿನ ಪಂದ್ಯಗಳು ನಡೆದಿವೆ. 2 ಪಂದ್ಯಗಳಲ್ಲಿ ಆಫ್ರಿಕಾ ಒಂದು ಪಂದ್ಯ ಭಾರತ ಗೆದ್ದಿದೆ.


ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 87 ODIಗಳನ್ನು ಆಡಿವೆ. ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 49 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ತವರು ನೆಲದಲ್ಲಿ ಆಡುತ್ತಿರುವಾಗ ಭಾರತ 28 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 13 ಪಂದ್ಯಗಳನ್ನು ಗೆದ್ದಿದೆ.


ಇದನ್ನೂ ಓದಿ: Sandeep Lamichhane: ಅತ್ಯಾಚಾರದ ಆರೋಪದಡಿ ಖ್ಯಾತ ಕ್ರಿಕೆಟ್ ಆಟಗಾರನ ಬಂಧನ


ಭಾರತ-ಆಫ್ರಿಕಾ ಏಕದಿನ ತಂಡ:


ಭಾರತ ತಂಡ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ರಿತುರಾಜ್ ಗಾಯಕ್ವಾಡ್, ಶ್ರೇಯರ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (WK), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್.

Published by:shrikrishna bhat
First published: