• Home
  • »
  • News
  • »
  • sports
  • »
  • IND vs SA ODI: ಟೀಂ ಇಂಡಿಯಾಗೆ ಭರ್ಜರಿ ಜಯ, ಹರಿಣಗಳ ವಿರುದ್ಧ ಸರಣಿ ಗೆದ್ದ ಭಾರತ ತಂಡ

IND vs SA ODI: ಟೀಂ ಇಂಡಿಯಾಗೆ ಭರ್ಜರಿ ಜಯ, ಹರಿಣಗಳ ವಿರುದ್ಧ ಸರಣಿ ಗೆದ್ದ ಭಾರತ ತಂಡ

ಭಾರತಕ್ಕೆ ಸರಣಿ ಜಯ

ಭಾರತಕ್ಕೆ ಸರಣಿ ಜಯ

IND vs SA ODI: ಆಫ್ರಿಕಾ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ  19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 105 ರನ್ ಗಳಿಸುವ ಮೂಲಕ 7 ವಿಕೆಟ್​ಗಳ ಜಯ ದಾಖಲಿಸಿ, ಸರಣಿಯನ್ನು ಗೆದ್ದುಕೊಂಡಿದೆ. 

  • News18 Kannada
  • Last Updated :
  • New Delhi, India
  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಆಫ್ರಿಕಾ ವಿರುದ್ಧ ಭರ್ಜರಿಯಾಗಿ ಜಯ ದಾಖಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ  ಆಫ್ರಿಕನ್ನರು ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್ ಆದರು. ಈ ಅಲ್ಪಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ (Team India) 19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 105 ರನ್ ಗಳಿಸುವ ಮೂಲಕ 7 ವಿಕೆಟ್​ಗಳ ಜಯ ದಾಖಲಿಸಿ, ಸರಣಿಯನ್ನು ಗೆದ್ದುಕೊಂಡಿದೆ. 


ಉತ್ತಮ ಬ್ಯಾಟಿಂಗ್ ಮಾಡಿದ ಗಿಲ್​:


ಇನ್ನು, ಆಫ್ರಿಕಾ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ  19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 105 ರನ್ ಗಳಿಸುವ ಮೂಲಕ 7 ವಿಕೆಟ್​ಗಳ ಜಯ ದಾಖಲಿಸಿ, ಸರಣಿಯನ್ನು ಗೆದ್ದುಕೊಂಡಿದೆ. ಟೀಂ ಇಂಡಿಯಾ ಪರ ಶುಭ್​ಮನ್​ ಗಿಲ್​ ಉತ್ತಮ ಬ್ಯಾಟಿಂಗ್​ ಮಾಡಿದ್ದು, 57 ಬೌಲ್​ಗೆ 8 ಫೊರ್​ ಸಿಡಿಸಿ 49 ರನ್ ಗಳಿಸಿದರು. ಕೇವಲ 1 ರನ್​ ನಿಂದ ಅರ್ಧಶತಕ ವಂಚಿತರಾದರು. ಉಳಿದಂತೆ ನಾಯಕ ಶಿಖರ್ ಧವನ್ 8 ರನ್, ಇಶಾನ್ ಕಿಶನ್ 10 ರನ್, ಶ್ರೇಯಸ್​ ಅಯ್ಯರ್ 28 ರನ್ ಮತ್ತು ಕೊನೆಯಲ್ಲಿ ಸಂಜು ಸ್ಯಾಮ್ಸನ್ 2 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಇನ್ನು, ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್​ಗಿಡಿ ಮತ್ತು ಇಮ್ಮಾದ್ ಪ್ರೋಟೆನ್​ ತಲಾ 1 ವಿಕೆಟ್​ ಪಡೆದರು.ಕುಲದೀಪ್​ ಸ್ಪಿನ್​​ ದಾಳಿ:


ಟಾಸ್​ ಗೆದ್ದು ಮೊದಲು ಬೌಲಿಂಗ್​ ಆರಂಭಿಸಿದ ಭಾರತೀಯರು. ಇಂದು ಆಫ್ರಿಕನ್ನರನ್ನು ಇನ್ನಿಲ್ಲದಂತೆ ಕಾಡಿದರು. ಭಾರತೀಯರ ದಾಳಿಗೆ ಉತ್ತರವಿಲ್ಲದೇ ಹರಿಣಗಳು ಫೆವೆಲಿಯನ್​ ಹಾದಿ ಹಿಡಿದರು. ಭಾರತದ ಪರ ಕುಲದೀಪ್​ ಯಾವದ್ 3.3 ಓವರ್​ಗಳಲ್ಲಿ 18 ರನ್ ನೀಡಿ ಪ್ರಮುಖ 4 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ವಾಷಿಂಗ್ಟನ್​ ಸುಂದರ್​ 4 ಓವರ್​ಗೆ 15 ರನ್ ನೀಡಿ 2 ವಿಕೆಟ್​, ಮೊಹಮ್ಮದ್ ಸಿರಾಜ್ 5 ಓವರ್​ಗೆ 17 ರನ್ ನೀಡಿ 2 ವಿಕೆಟ್​ ಮತ್ತು ಶಹಬಾದ್​ ಅಹ್ಮದ್​ 7 ಓವರ್​ಗೆ 32 ರನ್​ ನೀಡಿ 2 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: Shreyas Iyer: ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​ ತಲೆನೋವು ಹೆಚ್ಚಿಸಿದ ಶ್ರೇಯಸ್ ಅಯ್ಯರ್, ಈ ಅಂಕಿಅಂಶಗಳೇ ಕಾರಣವಂತೆ!


ಅಲ್ಪಮೊತ್ತಕ್ಕೆ ಕುಸಿದಿದ್ದ ಆಫ್ರಿಕಾ:


ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಫ್ರಿಕಾ ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಭಾರತ ತಂಡಕ್ಕೆ 100 ರನ್​ಗಳ ಅಲ್ಪಮೊತ್ತದ ಟಾರ್ಗೆಟ್​ ನೀಡಿದೆ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 6 ರನ್, ಜಾನ್ನೆಮನ್ ಮಲನ್ 15 ರನ್, ರೀಜಾ ಹೆಂಡ್ರಿಕ್ಸ್ 3 ರನ್, ಐಡೆನ್ ಮಾರ್ಕ್ರಾಮ್ 9 ರನ್, ಹೆನ್ರಿಕ್ ಕ್ಲಾಸೆನ್ 34 ರನ್, ಡೇವಿಡ್ ಮಿಲ್ಲರ್ 7 ರನ್, ಮಾರ್ಕೊ ಯಾನ್ಸೆನ್ 14 ರನ್, ಅಂಡಿಲ್ಲೆ ಫೇಹುಲಕಾವೋ 5 ರನ್, ಇಮಾಧ್ 1 ರನ್ ಮತ್ತು ಎನ್ರಿಚ್ ಮತ್ತು ಲುಂಗಿ ಎನ್​ಗಿಡಿ ಶೂನ್ಯಕ್ಕೆ ಔಟ್​ ಆದರು.


ಇದನ್ನೂ ಓದಿ: Shubman Gill: ಸ್ವಿಮಿಂಗ್​ ಫೂಲ್​ನಲ್ಲಿ ಸಿಕ್ಸ್ ಪ್ಯಾಕ್​ ತೋರಿಸಿದ ಶುಭ್​ಮನ್ ಗಿಲ್​, ಏನ್ ಲುಕ್ ಗುರು ಅಂತಿದ್ದಾರೆ ಲೇಡಿ ಫ್ಯಾನ್ಸ್​​


ಇನ್ನೊಂದು ವಾರಕ್ಕೆ ಟಿ20 ವಿಶ್ವಕಪ್​ ಆರಂಭ:


ಹೌದು, ಸದ್ಯ ಟೀಂ ಇಂಡಿಯಾದ ಸರಣಿಗಳು ಅಂತ್ಯಗೊಂಡಿದ್ದು, ಇನ್ನೇನಿದ್ದರೂ ಕೇವಲ ಟಿ20 ವಿಶ್ವಕಪ್​ ಗಾಗಿ ಕಾಯಬೇಕಿದೆ. ಇದೇ ತಿಂಗಳು 23ರಂದು ಭಾರತ ವಿಶ್ವಕಪ್​ನಲ್ಲಿ ತನ್ನ ಮೊದಲ ಪಂದ್ಯ ಆಡಲಿದ್ದು, ಅದೂ ಸಹ ಪಾಕಿಸ್ತಾನ ವಿರುದ್ಧವಾಗಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿದ್ದು, ಇದರ ಮೇಲಿನ ನಿರೀಕ್ಷ ಎಷ್ಟಿದೇ ಎನ್ನುವುದನ್ನು ತಿಳಿಸುತ್ತಿದೆ.

Published by:shrikrishna bhat
First published: