• Home
  • »
  • News
  • »
  • sports
  • »
  • IND vs SA: ಭಾರತ-ದಕ್ಷಿಣ ಆಫ್ರಿಕಾ ಸರಣಿ; ವೇಳಾಪಟ್ಟಿ, ತಂಡ-ಲೈವ್ ಸ್ಟ್ರೀಮಿಂಗ್ ಸಂಪೂರ್ಣ ವಿವರ

IND vs SA: ಭಾರತ-ದಕ್ಷಿಣ ಆಫ್ರಿಕಾ ಸರಣಿ; ವೇಳಾಪಟ್ಟಿ, ತಂಡ-ಲೈವ್ ಸ್ಟ್ರೀಮಿಂಗ್ ಸಂಪೂರ್ಣ ವಿವರ

IND vs SA

IND vs SA

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಮತ್ತು ಏಕದಿನ ಸರಣಿ ನಡೆಯಲಿದೆ. ಇದರಲ್ಲಿ ಮೊದಲಿಗೆ ಸಪ್ಟೆಂಬರ್​ 28ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯು ಸಂಪೂರ್ಣವಾಗಿ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

  • Share this:

ಟಿ20 ವಿಶ್ವಕಪ್ (T20 World Cup) ಮುನ್ನ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈಗಾಗಲೇ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ಹೀಗಾಗಿ ಈ ಸರಣಿಯು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ.  ಟಿ20 ವಿಶ್ವಕಪ್​ನಂತೆ ಆಫ್ರಿಕಾ ಸರಣಿಗೂ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಹಾಗಿದ್ದರೆ ದಕ್ಷಿಣ ಆಫ್ರಿಕಾ ಸರಣಿ ಎಂದಿನಿಂದ ಆರಂಭ, ಎಲ್ಲಿ, ಯಾವಾಗ, ಎಂಬ ಸಂಪೂರ್ಣ ಮಾಹಿತಿ ತಿಳಿಯೋಣ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಮತ್ತು ಏಕದಿನ ಸರಣಿ ನಡೆಯಲಿದೆ. ಇದರಲ್ಲಿ ಮೊದಲಿಗೆ ಸಪ್ಟೆಂಬರ್​ 28ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯು ಸಂಪೂರ್ಣವಾಗಿ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಅದರಂತೆ ಏಕದಿನ ಸರಣಿಯು ಅಕ್ಟೋಬರ್ 6ರಿಂದ ಆರಂಭವಾಗಲಿದ್ದು, ಇದು ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗಲಿದೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ 2022 ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.


ಹೊಸ ಸಾಧನೆ ಮಾಡಲಿದೆಯೇ ಭಾರತ?:


ದಕ್ಷಿಣ ಆಫ್ರಿಕಾ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐದು ಪಂದ್ಯಗಳ T20I ಸರಣಿಯನ್ನು ಆಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ನಿರ್ಣಾಯಕ ಪಂದ್ಯ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಸರಣಿಯು 2-2ರಲ್ಲಿ ಕೊನೆಗೊಂಡಿತು. 2018 ರಿಂದ ತವರಿನಲ್ಲಿ ನಡೆದ T20I ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಇನ್ನೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿಲ್ಲ.


ಇದನ್ನೂ ಓದಿ: IND vs AUS: ಭಾರತ- ಆಸ್ಟ್ರೇಲಿಯಾ ಅಂತಿಮ ಹಣಾಹಣಿ, ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್


ND vs SA 2022 ವೇಳಾಪಟ್ಟಿ:

ಸೆಪ್ಟೆಂಬರ್ 28, 1ನೇ T20I -  ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ
ಅಕ್ಟೋಬರ್ 2, 2 ನೇ T20I -  ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ
ಅಕ್ಟೋಬರ್ 4, 3ನೇ T20I -  ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
ಅಕ್ಟೋಬರ್ 6, 1ನೇ ODI -  ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಅಕ್ಟೋಬರ್ 9, 2 ನೇ ODI -  JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್, ರಾಂಚಿ
ಅಕ್ಟೋಬರ್ 11, 3ನೇ ODI -  ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ


ಭಾರತ-ದಕ್ಷಿಣ ಆಫ್ರಿಕಾ ತಂಡ:


T20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್. ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.


ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್


T20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (C), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಡಾ, ರಿವ್ಸಿ ರಬಾಡಾ, ಟ್ರಿಸ್ಟಾನ್ ಸ್ಟಬ್ಸ್, ಜಾರ್ನ್ ಫಾರ್ಟುಯಿನ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ.

Published by:shrikrishna bhat
First published: