• Home
  • »
  • News
  • »
  • sports
  • »
  • IND vs SA: ದಕ್ಷಿಣ ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ ಮತ್ತೊಬ್ಬ ಸ್ಟಾರ್ ಬೌಲರ್​ ಆಯ್ಕೆ ಮಾಡಿದ ಬಿಸಿಸಿಐ

IND vs SA: ದಕ್ಷಿಣ ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ ಮತ್ತೊಬ್ಬ ಸ್ಟಾರ್ ಬೌಲರ್​ ಆಯ್ಕೆ ಮಾಡಿದ ಬಿಸಿಸಿಐ

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ 3 T20 ಸರಣಿಯ ಉಳಿದ 2 ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಿಸಿಸಿಐ ಈ ಮಾಹಿತಿ ನೀಡಿದೆ.

  • Share this:

ಗಾಯದ ಸಮಸ್ಯೆಯಿಂದಾಗಿ ಭಾರತ ಕ್ರಿಕೆಟ್ (Team India) ತಂಡದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ (Jasprit Bumrah) ದಕ್ಷಿಣ  ಆಫ್ರಿಕಾ (IND vs SA) ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಬೆನ್ನುನೋವಿನ ಕಾರಣದಿಂದ ಅವರು ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಶುಕ್ರವಾರ, ಆಯ್ಕೆಗಾರರು ಈ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ (Mohammed Siraj) ಆಯ್ಕೆ ಆಗಿದ್ದಾರೆ. ಸದ್ಯ ಬಿಸಿಸಿಐ ಕೇವಲ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮಾತ್ರ ಸಿರಾಜ್ ಅವರನ್ನು ಆಯ್ಕೆ ಮಾಡಿದ್ದು, ಮುಂಬರುವ ವಿಶ್ವಕಪ್​ಗೆ ಬುಮ್ರಾ ಫಿಟ್​ ಆಗಲಿದ್ದಾರೆಯೇ ಅಥವಾ ಅವರ ಬದಲಿ ಆಟಗಾರ ಯಾರೆಂಬುದನ್ನು ತಿಳಿಸಿಲ್ಲ.


ಆಫ್ರಿಕಾ ಸರಣಿಗೆ ಸಿರಾಜ್ ಆಯ್ಕೆ:


ಸದ್ಯ ಬೆನ್ನು ನೋವಿನ ಕಾರಣ ಬುಮ್ರಾ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ಬಿಸಿಸಿಐ  ಆಯ್ಕೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ಕಣಕ್ಕಿಳಿದಿದ್ದ ಬುಮ್ರಾ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ, ಬೌಲಿಂಗ್ ನಲ್ಲಿ ವಿಶೇಷ ಏನನ್ನೂ ತೋರಿಸಲು ಸಾಧ್ಯವಾಗಲಿಲ್ಲ. ಅವರು 2 ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದರು. ಈ ಹಿಂದೆ ಬೆನ್ನುನೋವಿನ ಕಾರಣ ಬುಮ್ರಾ ಏಷ್ಯಾಕಪ್-2022ರಲ್ಲಿ ಆಡಲು ಸಾಧ್ಯವಾಗಿರಲಿಲ್ಲ.ಫೆಬ್ರವರಿಯಲ್ಲಿ ಧರ್ಮಶಾಲಾದಲ್ಲಿ ಶ್ರೀಲಂಕಾ ವಿರುದ್ಧ ಸಿರಾಜ್ ಕೊನೆಯ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅವರು 5 T20I ಗಳಲ್ಲಿ 10.45 ರ ಎಕಾನಮಿ ದರದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದರು. ಅಲ್ಲದೇ ಸದ್ಯ ಸಿರಾಜ್ ಉತ್ತಮ ಫಾರ್ಮ್​ನಲ್ಲಿರುವ ಕಾರಣ ಬಿಸಿಸಿಐ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಿದೆ.


ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಶಾಪವಾಗಿ ಪರಿಣಮಿಸಿದೆ ಆ ಒಂದು ಓವರ್​!


ಟಿ20 ವಿಶ್ವಕಪ್​ ಆಯ್ಕೆ ಬಗ್ಗೆ ಸ್ಪಷ್ಟನೆ ಇಲ್ಲ:


ಇನ್ನು, ಸಿರಾಜ್ ಅವರನ್ನು ಸದ್ಯ ದಕ್ಷಿಣ ಆಫ್ರಿಕಾ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿದೆ. ಹೀಗಾಗಿ ಬುಮ್ರಾ ಅವರು ಮುಂಬರುವ ಟಿ20 ವಿಶ್ವಕಪ್​ ವೇಳೆಗೆ ಗುಣಮುಖರಾಗಿ ತಂಡಕ್ಕೆ ಮರಳಲಿದ್ದಾರೆಯೇ? ಅಥವಾ ಇಲ್ಲವೋ? ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಸಿರಾಜ್ ಆಫ್ರಿಕಾ ಸರಣಿಗೆ ಮಾತ್ರ ಆಯ್ಕೆ ಆಗಿದ್ದು, ಒಂದು ವೇಳೆ ಬುಮ್ರಾ ವಿಶ್ವಕಪ್​ ಆಡದಿದ್ದಲ್ಲಿ ಅವರ ಬದಲಿಗೆ ಮತ್ತೆ ಬೇರೆ ಯಾವ ಬೌಲರ್ ವಿಶ್ವಕಪ್​ಗೆ ಆಯ್ಕೆ ಆಗುತ್ತಾರೆ ಎಂಬುದನ್ನು ಕಾದುನೋಡದಬೇಕಿದೆ.


ಇದನ್ನೂ ಓದಿ: Suryakumar Yadav: ಡ್ಯಾನ್ಸ್ ನೋಡಿ ಲವ್ವಲ್ಲಿ ಬಿದ್ದ ಸೂರ್ಯಕುಮಾರ್​ ಯಾದವ್! ಈ ಜೋಡಿಗೆ ದೃಷ್ಟಿ ಬೀಳ್ದೇ ಇರ್ಲಿ


ರವಿವಾರ ಆಫ್ರಿಕಾ ವಿರುದ್ಧ 2ನೇ ಪಂದ್ಯ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ 8 ವಿಕೆಟ್​ಗಳ ಜಯದಾಖಲಿಸಿದೆ. ಇದೀಗ 2ನೇ ಪಂದ್ಯವು ರವಿವಾರ ಅಂದರೆ ಅಕ್ಟೋಬರ್​ 2ರಂದು ಅಸ್ಸಾಂನ ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಟೀಂ ಇಂಡಿಯಾ ತಂಡವು ಗುವಾಹಟಿಗೆ ಬಂದಿಳಿದಿದೆ. ಈ ಪಂದ್ಯವನ್ನು ಗೆದ್ದು ಭಾರತವು ಸರಣಿ ಕೈವಶ ಮಾಡಿಕೊಳ್ಳಲು ಸಿದ್ಧವಾಗಿದ್ದು, ಇಂದಿನಿಂದ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದೆ.

Published by:shrikrishna bhat
First published: