• Home
  • »
  • News
  • »
  • sports
  • »
  • IND vs SA: ಆಕರ್ಷಕ ಶತಕ ಸಿಡಿಸಿದ ರೊಸೊವ್, ಟೀಂ ಇಂಡಿಯಾಗೆ ಬೃಹತ್​ ಮೊತ್ತದ ಟಾರ್ಗೆಟ್​

IND vs SA: ಆಕರ್ಷಕ ಶತಕ ಸಿಡಿಸಿದ ರೊಸೊವ್, ಟೀಂ ಇಂಡಿಯಾಗೆ ಬೃಹತ್​ ಮೊತ್ತದ ಟಾರ್ಗೆಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SA 3rd T20: ದಕ್ಷಿಣ ಆಫ್ರಿಕ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿತು. ಅಲ್ಲದೇ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 227 ರನ್ ಗಳಿಸಿದೆ. ಭಾರತ ತಂಡಕ್ಕೆ ಈ ಮೂಲಕ 228 ರನ್ ಗಳ ಟಾರ್ಗೇಟ್​ ನೀಡಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ 3ನೇ ಪಂದ್ಯ ಇಂದು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಲಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ (Team India) ಇದೊಂದು ಔಪಚಾರಿಕ ಪಂದ್ಯವಾಗಿದ್ದರೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಉತ್ತಮ ಅವಕಾಶವಾಗಿದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ( Rohith Sharma) ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಆಪ್ರಿಕಾ ಬ್ಯಾಟಿಂಗ್​ ಮಾಡಲಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿತು. ಅಲ್ಲದೇ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 227 ರನ್ ಗಳಿಸಿದೆ. ಭಾರತ ತಂಡಕ್ಕೆ ಈ ಮೂಲಕ 228 ರನ್ ಗಳ ಟಾರ್ಗೆಟ್​​ ನೀಡಿದೆ.


ಆಕರ್ಷಕ ಶತಕ ಸಿಡಿಸಿದ ರೊಸೊವ್:


ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿತು. ಅಲ್ಲದೇ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 227 ರನ್ ಗಳಿಸಿದೆ. ಭಾರತ ತಂಡಕ್ಕೆ ಈ ಮೂಲಕ 228 ರನ್ ಗಳ ಟಾರ್ಗೆಟ್​ ನೀಡಿದೆ. ಆಫ್ರಿಕಾ ಪರ ಇಂದು ರಿಲೀ ರೊಸೊವ್ ಭರ್ಜರಿ ಬ್ಯಾಟಿಂಗ್​ ಮಾಡಿದ್ದು, ತಮ್ಮ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕವನ್ನು ಸಿಡಿಸಿದರು. ಅವರು 48 ಬೌಲ್​ಗಳಲ್ಲಿ 8 ಸಿಕ್ಸ್ ಮತ್ತು 7 ಫೋರ್​ಗಳ ಮೂಲಕ ಆಪರ್ಷಕ 100 ರನ್​ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ನಾಯಕ ತೆಂಬಾ ಬವುಮಾ 3 ರನ್, ಕ್ವಿಂಟನ್ ಡಿ ಕಾಕ್ 4 ಸಿಕ್ಸ್ ಮತ್ತು 6 ಪೋರ್​ ಮೂಲಕ 68 ರನ್​, ಡೇವಿಡ್ ಮಿಲ್ಲರ್ 19 ರನ್ ಮತ್ತು ಟ್ರಿಸ್ಟನ್​ ಸ್ಟಬ್ಸ್ 23 ರನ್ ಗಳಿಸಿ ಮಿಂಚಿದರು.



ದುಬಾರಿಯಾದ ಟೀಂ ಇಂಡಿಯಾ ಬೌಲರ್ಸ್:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಯಿತು. ಭಾರತದ ಪರ ಬೌಲರ್​ಗಳು ಹೇರಳವಾಗಿ ರನ್​ ಬಿಟ್ಟುಕೊಡುವ ಮೂಲಕ ದುಬಾರಿಯಾದರು.  ಭಾರತದ ಪರ ದೀಪಕ್​ ಚಹರ್​ 4 ಓವರ್​ ಬೌಲ್​ ಮಾಡಿ 48 ರನ್ ನೀಡಿ 1 ವಿಕೆಟ್​ ಪಡೆದರು. ಅವರಂತೆ ಉಮೇಶ್ ಯಾದವ್ ಸಹ 3 ಓವರ್​ಗೆ 34 ರನ್ ನೀಡಿ 1 ವಿಕೆಟ್​, ಮೊಹ್ಮಮದ್ ಸಿರಾಜ್ 4 ಓವರ್​ 44 ರನ್, ಆರ್​ ಅಶ್ವಿನ್​ 4 ಓವರ್ 35 ರನ್, ಹರ್ಷಲ್ ಪಟೇಲ್​ 4 ಓವರ್ 49 ರನ್ ನೀಡುವ ಮೂಲಕ ಭಾರತದ ಪರ ದುಬಾರಿಯಾದರು.



ಭಾರತ-ದಕ್ಷಿಣ ಆಫ್ರಿಕಾ ತಂಡ:


ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ರಿಷಭ್ ಪಂತ್ (ಉಪ ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್‌ ಯಾದವ್, ದಿನೇಶ್‌ ಕಾರ್ತಿಕ್, ಅಕ್ಷರ್‌ ಪಟೇಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವೀನ್, ದೀಪಕ್‌ ಚಾಹರ್‌,  ಮೊಹಮ್ಮದ್‌ ಸಿರಾಜ್, ಉಮೇಶ್​ ಯಾದವ್.


ಇದನ್ನೂ ಓದಿ: T20 World Cup 2022: ಫ್ಲೈಟ್ ತಪ್ಪಿದ್ದಕ್ಕೆ ಟಿ20 ವಿಶ್ವಕಪ್​ನಿಂದಲೇ ಔಟ್​! ವಿಂಡೀಸ್​ ಕ್ರಿಕೆಟಿಗನ ದುರಂತ ಕಥೆ


ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

Published by:shrikrishna bhat
First published: