• Home
  • »
  • News
  • »
  • sports
  • »
  • IND vs SA: ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಅಯ್ಯರ್, ಟೀಂ ಇಂಡಿಯಾಗೆ ಜಯ

IND vs SA: ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಅಯ್ಯರ್, ಟೀಂ ಇಂಡಿಯಾಗೆ ಜಯ

ಭಾರತಕ್ಕೆ ಭರ್ಜರಿ ಜಯ

ಭಾರತಕ್ಕೆ ಭರ್ಜರಿ ಜಯ

IND vs SA: ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ  45.5 ಓವರ್​ಗಳಲ್ಲಿ  3 ವಿಕೆಟ್​ ನಷ್ಟಕ್ಕೆ282  ರನ್​ ಗಳಿಸುವ ಮೂಲಕ 7 ವಿಕೆಟ್​ಗಳಿಂದ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 1-1-ರ ಸಮಬಲ ಸಾಧಿಸಿದೆ.

ಮುಂದೆ ಓದಿ ...
  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA ODI)  ನಡುವಿನ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಶ್ರೇಯಸ್ಸ್​ ಅಯ್ಯರ್​ (Shreyas Iyerಮತ್ತು ಇಶಾನ್​ ಕಿಶಾನ್​ (Ishan Kishan) ಇಬ್ಬರೂ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾಗೆ (Team India) ಜಯ ತಂದುಕೊಟ್ಟರು. ಅಲ್ಲದೇ ಈ ಪಂದ್ಯದಲ್ಲಿ ಶ್ರೇಯಸ್ಸ್ ಅಯ್ಯರ್​ ತಮ್ಮ ಏಕದಿನ ಕ್ರಿಕೆಟ್​ನ 2ನೇ ಶತಕವನ್ನು ಗಳಿಸಿ ಮಿಮಚಿದರು. ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ  45.5 ಓವರ್​ಗಳಲ್ಲಿ  3 ವಿಕೆಟ್​ ನಷ್ಟಕ್ಕೆ282  ರನ್​ ಗಳಿಸುವ ಮೂಲಕ 7 ವಿಕೆಟ್​ಗಳಿಂದ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 1-1-ರ ಸಮಬಲ ಸಾಧಿಸಿದೆ.


ಭರ್ಜರಿ ಬ್ಯಾಟಿಂಗ್​ ಮಾಡಿದ ಅಯ್ಯರ್:


ಭಾರತ  45.5 ಓವರ್​ಗಳಲ್ಲಿ  3 ವಿಕೆಟ್​ ನಷ್ಟಕ್ಕೆ282  ರನ್​ ಗಳಿಸುವ ಮೂಲಕ 7 ವಿಕೆಟ್​ಗಳಿಂದ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 1-1-ರ ಸಮಬಲ ಸಾಧಿಸಿದೆ. ಇನ್ನು, ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಅವರು, 111 ಎಸೆತದಲ್ಲಿ 15 ಪೋರ್​ ಮೂಲಕ 113 ರನ್​ ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಅವರಂತೆ, ಇಶಾನ್​ ಕಿಶನ್ ಸಹ 84 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಪೋರ್ ಗಳ ಮೂಲಕ 93 ರನ್ ಗಳಿಸಿ ಶತಕ ವಂಚಿತರಾದರು. ಉಳಿದಂತೆ ನಾಯಕ ಶಿಖರ್ ಧವನ್ 13 ರನ್, ಶುಭ್​ಮನ್​ ಗಿಲ್​ 28 ರನ್ ಮತ್ತು ಅಂತಿಮವಾಗಿ ಸಂಜು ಸ್ಯಾಮ್ಸನ್​ 30 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.



ಸಂಘಟಿತ ಬೌಲಿಂಗ್ ದಾಳಿ ಮಾಡಿದ ಭಾರತ:


ಇನ್ನು, ಟಾಸ್​ ಸೋತು ಮೊದಲು ಬೌಲಿಂಗ್ ಆರಂಭಿಸಿದ ಟೀಂ ಇಂಡಿಯಾ, ಆಫ್ರಿಕನ್ನರಿಗೆ ಆರಂಭಿಕ ಆಘಾತ ನೀಡಿತು. ಅದರಂತೆ ಭಾರತದ ಪರ ಶಹಬಾದ್​ ಅಹಮ್ಮದ್​, ಕುಲದೀಪ್​ ಯಾದವ್, ವಾಷಿಂಗ್ಟನ್​ ಸುಂದರ್​, ಶಾರ್ದೂಲ್ ಠಾಕೂರ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು. ಅದೇ ರೀತಿ ಮೊಹಮ್ಮದ್ ಸಿರಾಜ್ ಸಹ 3 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​!


ಉತ್ತಮ ಬ್ಯಾಟಿಂಗ್​ ಮಾಡಿದ್ದ ಆಫ್ರಿಕಾ:


ಟಾಸ್​  ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸೌತ್ ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿದೆ. ಆಫ್ರಿಕಾ ತಂಡದ ಬ್ಯಾಟ್ಸ್​ಮನ್​ಗಳು ಇಂದು ಭಾರತದ ಬೌಲರ್​ಗಳ ದಾಳಿಯನ್ನು ಸರಿಯಾಗಿ ಎದುರಿಸಿದರು. ಆಫ್ರಿಕಾ ಪರ ಉತ್ತಮವಾಗಿ ಆಡುತ್ತಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೇವಲ 5 ರನ್ ಮತ್ತು ಜಾನೆಮನ್ ಮಲನ್ 25 ರನ್ ಗಳಿಸಿ ಔಟ್​ ಆದರು. ನಂತರ ಬಂದ ರೀಜಾ ಹೆಂಡ್ರಿಕ್ಸ್ 76 ಎಸೆತದಲ್ಲಿ 9 ಫೋರ್​ ಮತ್ತು 1 ಸಿಕ್ಸ್ ನೆರವಿನಿಂದ 74 ರನ್ ಮತ್ತು ಐಡೆನ್ ಮಾರ್ಕ್ರಾಮ್ 89 ಎಸೆತದಲ್ಲಿ 7 ಪೋರ್​ ಹಾಗೂ 1 ಸಿಕ್ಸ್ ಮೂಲಕ 79 ರನ್ ಗಳಿಸಿದರು. ಉಳಿದಂತೆ ಹೆನ್ರಿಕ್ ಕ್ಲಾಸೆನ್ 30 ರನ್, ವೇಯ್ನ್ ಪಾರ್ನೆಲ್ 16 ರನ್, ಡೇವಿಡ್ ಮಿಲ್ಲರ್ 35 ರನ್, ನಾಯಕ ಕೇಶವ್ ಮಹಾರಾಜ್ ಕೇವಲ 5 ರನ್ ಮತ್ತು ಜಾರ್ನ್ ಫೋರ್ಟ್ಯುಯ್ನ್ ಶೂನ್ಯ ರನ್ ಗಳಿಸಿದರು.

Published by:shrikrishna bhat
First published: