• Home
  • »
  • News
  • »
  • sports
  • »
  • IND vs SA ODI: ಭರ್ಜರಿ ಬ್ಯಾಟಿಂಗ್ ಮಾಡಿದ ಆಫ್ರಿಕಾ, ಟೀಂ ಇಂಡಿಯಾಗೆ ಬೃಹತ್ ಮೊತ್ತದ ಟಾರ್ಗೆಟ್

IND vs SA ODI: ಭರ್ಜರಿ ಬ್ಯಾಟಿಂಗ್ ಮಾಡಿದ ಆಫ್ರಿಕಾ, ಟೀಂ ಇಂಡಿಯಾಗೆ ಬೃಹತ್ ಮೊತ್ತದ ಟಾರ್ಗೆಟ್

IND vs SA

IND vs SA

IND vs SA ODI: ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿದೆ. ಈಗಾಗಲೇ ಸರಣಿಯಲ್ಲಿ ಆಫ್ರಿಕಾ 1-0 ಮುನ್ನಡೆ ಸಾಧಿಸಿದ್ದು, ಭಾರತಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA ODI) ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದ ಸೋಲಿನ ನಂತರ ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಇದೀಗ 2ನೇ ಪಂದ್ಯವನ್ನು ರಾಂಚಿಯಲ್ಲಿ (Ranchi) ಆಡುತ್ತಿದೆ. ಟಾಸ್​ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್​ ಮಾಡುವ ಮೂಲಕ ಟೀಂ ಇಂಡಿಯಾಗೆ ಉತ್ತಮ ಮೊತ್ತದ ಟಾರ್ಗೆಟ್​ ನೀಡಿದೆ. ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿದೆ. ಈಗಾಗಲೇ ಸರಣಿಯಲ್ಲಿ ಆಫ್ರಿಕಾ 1-0 ಮುನ್ನಡೆ ಸಾಧಿಸಿದ್ದು, ಭಾರತಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.


ಉತ್ತಮ ಬ್ಯಾಟಿಂಗ್ ಮಾಡಿದ ಆಫ್ರಿಕನ್ನರು:


ಟಾಸ್​  ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸೌತ್ ಆಫ್ರಿಕಾ ನಿಗದಿತ 50 ಓವರ್​ ಗಳಲ್ಲಿ  7 ವಿಕೆಟ್​ ನಷ್ಟಕ್ಕೆ 278 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 279 ರನ್​ ಗಳ ಟಾರ್ಗೆಟ್​ ನೀಡಿದೆ. ಆಫ್ರಿಕಾ ತಂಡದ ಬ್ಯಾಟ್ಸ್​ಮನ್​ಗಳು ಇಂದು ಭಾರತದ ಬೌಲರ್​ಗಳ ದಾಳಿಯನ್ನು ಸರಿಯಾಗಿ ಎದುರಿಸಿದರು. ಆಫ್ರಿಕಾ ಪರ ಉತ್ತಮವಾಗಿ ಆಡುತ್ತಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೇವಲ 5 ರನ್ ಮತ್ತು ಜಾನೆಮನ್ ಮಲನ್ 25 ರನ್ ಗಳಿಸಿ ಔಟ್​ ಆದರು. ನಂತರ ಬಂದ ರೀಜಾ ಹೆಂಡ್ರಿಕ್ಸ್ 76 ಎಸೆತದಲ್ಲಿ 9 ಫೋರ್​ ಮತ್ತು 1 ಸಿಕ್ಸ್ ನೆರವಿನಿಂದ 74 ರನ್ ಮತ್ತು ಐಡೆನ್ ಮಾರ್ಕ್ರಾಮ್ 89 ಎಸೆತದಲ್ಲಿ 7 ಪೋರ್​ ಹಾಗೂ 1 ಸಿಕ್ಸ್ ಮೂಲಕ 79 ರನ್ ಗಳಿಸಿದರು. ಉಳಿದಂತೆ ಹೆನ್ರಿಕ್ ಕ್ಲಾಸೆನ್ 30 ರನ್, ವೇಯ್ನ್ ಪಾರ್ನೆಲ್ 16 ರನ್, ಡೇವಿಡ್ ಮಿಲ್ಲರ್ 35 ರನ್, ನಾಯಕ ಕೇಶವ್ ಮಹಾರಾಜ್ ಕೇವಲ 5 ರನ್ ಮತ್ತು ಜಾರ್ನ್ ಫೋರ್ಟ್ಯುಯ್ನ್ ಶೂನ್ಯ ರನ್ ಗಳಿಸಿದರು.ಸಂಘಟಿತ ಬೌಲಿಂಗ್ ದಾಳಿ ಮಾಡಿದ ಭಾರತ:


ಇನ್ನು, ಟಾಸ್​ ಸೋತು ಮೊದಲು ಬೌಲಿಂಗ್ ಆರಂಭಿಸಿದ ಟೀಂ ಇಂಡಿಯಾ, ಆಫ್ರಿಕನ್ನರಿಗೆ ಆರಂಭಿಕ ಆಘಾತ ನೀಡಿತು. ಅದರಂತೆ ಭಾರತದ ಪರ ಶಹಬಾದ್​ ಅಹಮ್ಮದ್​, ಕುಲದೀಪ್​ ಯಾದವ್, ವಾಷಿಂಗ್ಟನ್​ ಸುಂದರ್​, ಶಾರ್ದೂಲ್ ಠಾಕೂರ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು. ಅದೇ ರೀತಿ ಮೊಹಮ್ಮದ್ ಸಿರಾಜ್ ಸಹ 3 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್,​ ಐಪಿಎಲ್ 2023ರ ಕುರಿತು ಮಹತ್ವದ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್


IND vs SA ಪ್ಲೇಯಿಂಗ್​ 11:


ಭಾರತ ತಂಡ:  ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್.


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಜಾನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್ (ನಾಯಕ), ಜಾರ್ನ್ ಫೋರ್ಟ್ಯುಯ್ನ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ.

Published by:shrikrishna bhat
First published: