• Home
  • »
  • News
  • »
  • sports
  • »
  • IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ಮತ್ತೆ ನಾಯಕತ್ವದಲ್ಲಿ ಬದಲಾವಣೆ

IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ಮತ್ತೆ ನಾಯಕತ್ವದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs SA ODI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (IND v SA ODI) ಭಾರತ ತಂಡವನ್ನು ಪ್ರಕಟಿಸಿದೆ. ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ಮಾಡಲಾಗಿದ್ದು, ಉಪನಾಯಕತ್ವದ ಜವಾಬ್ದಾರಿ ಶ್ರೇಯಸ್ ಅಯ್ಯರ್ ಅವರ ಹೆಗಲ ಮೇಲಿದೆ.

  • Share this:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (IND v SA ODI) ಭಾರತ ತಂಡವನ್ನು ಪ್ರಕಟಿಸಿದೆ. ಶಿಖರ್ ಧವನ್ (Shikhar Dhawan) ಅವರನ್ನು ನಾಯಕರನ್ನಾಗಿ ಮಾಡಲಾಗಿದ್ದು, ಉಪನಾಯಕತ್ವದ ಜವಾಬ್ದಾರಿ ಶ್ರೇಯಸ್ ಅಯ್ಯರ್ ಅವರ ಹೆಗಲ ಮೇಲಿದೆ. ಇಬ್ಬರು ವಿಕೆಟ್ ಕೀಪರ್‌ಗಳಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಸಂಜು ಅಭಿಮಾನಿಗಳ ಕೂಗು ಬಿಸಿಸಿಐ ತನಕ ಮುಟ್ಟಿದೆ. ಅಲ್ಲದೇ ಈ ಬಾರಿ ಸಂಪೂರ್ಣವಾಗಿ ಯುವ ಪ್ರತಿಭೆಗಳಿಗೆ ಬಿಸಿಸಿಐ ಮಣೆ ಹಾಕಿದ್ದು, ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಯುವ ಭಾರತ ಪಡೆ ಕಣಕ್ಕಿಳಿಯಲಿದೆ.


ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:


ಶಿಖರ್ ಧವನ್ (ಸಿ), ಶ್ರೇಯಸ್ ಅಯ್ಯರ್ (ವಿಸಿ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ಡಬ್ಲ್ಯುಕೆ), ಸಂಜು ಸ್ಯಾಮ್ಸನ್ (ಡಬ್ಲ್ಯುಕೆ), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್. ಸಿರಾಜ್, ದೀಪಕ್ ಚಹಾರ್.ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಯುವ ಪ್ಲೇಯರ್ಸ್​:


ಮೊದಲ ಬಾರಿಗೆ ರಜತ್ ಪಾಟಿದಾರ್ ಮತ್ತು ಮುಖೇಶ್ ಏಕದಿನ ಸರಣಿಗಾಗಿ ತಂಡದಲ್ಲಿ ಆಯ್ಕೆ ಆಗಿದ್ದಾರೆ. ODI ಸರಣಿಯ ನಂತರ, ಮೂವರೂ ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ ತಂಡವನ್ನು ಸೇರಿಕೊಳ್ಳುತ್ತಾರೆ. ಸಂಜು ಸ್ಯಾಮ್ಸನ್ ಕೂಡ ಏಕದಿನ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಮುಖೇಶ್ ಕುಮಾರ್ ಮತ್ತು ರಜತ್ ಪಾಟಿದಾರ್ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: IND vs SA: ಮತ್ತೊಂದು ದಾಖಲೆಯ ಸನಿಹದಲ್ಲಿ ಕಿಂಗ್​ ಕೊಹ್ಲಿ? ರೋಹಿತ್​ ರೆಕಾರ್ಡ್ ಮೇಲೆ ವಿರಾಟ್ ಕಣ್ಣು


ಏಕದಿನ ಸರಣಿ ವೇಳಾಪಟ್ಟಿ:


ಏಕದಿನ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದ್ದು, ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದ್ದು, ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಅಕ್ಟೋಬರ್ 11 ರಂದು ನಡೆಯಲಿದೆ. ಕೊನೆಯ ಏಕದಿನ ಪಂದ್ಯದ ಆರು ದಿನಗಳ ನಂತರ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಭಾರತ ತಂಡ ಅಕ್ಟೋಬರ್ 10 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ.


ಇದನ್ನೂ ಓದಿ: Sarfaraz Khan: ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಮತ್ತೊಬ್ಬ ಯಂಗ್​ ಪ್ಲೇಯರ್​, 29 ಪಂದ್ಯಗಳಲ್ಲಿ 10 ಶತಕ


ಶಮಿ ಔಟ್​-ಸಂಜು ಇನ್​:


ಸಂಜು ಸ್ಯಾಮ್ಸನ್​ ಇದೀಗ ಅನೇಕ ದಿನಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ಟಿ20 ಸರಣಿಗೆ ಅವರ ಅಯ್ಕೆ ಆಗದಿರುವುದ್ಕಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಇದೀಗ ಬಿಸಿಸಿಐ ಇದಕ್ಕೆ ಮಣಿದಿದ್ದು, ಅವರನ್ನು ಮತ್ತೆ ಭಾರತ ತಂಡಕ್ಕೆ ಕರೆತಂದಿದ್ದಾರೆ. ಆದರೆ ಇತ್ತ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ ಆಗಿದ್ದಲ್ಲದೇ ಟಿ20 ವಿಶ್ವಕಪ್​ಗಾಗಿ ಸ್ಟಾಂಡ್​ಬೈ ಆಟಗಾರರಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ.

Published by:shrikrishna bhat
First published: