ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಹಾಗೂ ಕೊನೆಯ ಟಿ20 (5th T20) ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಉಭಯ ತಂಡಗಳು ಈಗಾಗಲೇ ಸರಣಿಯಲ್ಲಿ 2-2ರ ಸಮಬಲ ಸಾದಿಸಿರುವುದರಿಂದ ಸರಣಿಯನ್ನು ಎರಡೂ ತಂಡಗಳಿಗೂ ಹಂಚಿಕೆ ಮಾಡಲಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಪಂದ್ಯ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಸತತ ಮಳೆಯ ಕಾರಣದಿಂದಾಗಿ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಿರುವುದಾಗಿ ಬಿಸಿಸಿಐ ತಿಳಿಸಿದೆ. ಇನ್ನು, ಸತತ 2 ಗೆಲುವುಗಳನ್ನು ಕಂಡಿರುವ ರಿಷಭ್ ಪಂತ್ (Rishabh pant) ನಾಯಕತ್ವದ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳುವ ತವಕದಲ್ಲಿತ್ತು.
ಮಳೆಯಿಂದ ಉಭಯ ತಂಡಗಳಿಗೆ ಸರಣಿ ಹಂಚಿಕೆ:
ಇನ್ನು, ಬೆಂಗಳೂರಲ್ಲಿ ಆರಂಭವಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಕೊನೆ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಕುರಿತುತು ಬಿಸಿಸಿಐ ಮಾಹಿತಿ ನೀಡಿದ್ದು, ಸರಣಿಯನ್ನು ಈಗಾಗಲೇ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿರುವುದರಿಂದ ಎರಡೂ ತಂಡಗಳಿಗೂ ಸರಣಿಯ ಫಲಿತಾಂಶವನ್ನು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ 2011ರಿಂದ ದಕ್ಷಿಣ ಆಫ್ರಿಕಾ ಭಾರತದ ನೆದಲ್ಲಿ ಯಾವುದೇ ಟಿ20 ಸರಣಿಯನ್ನೂ ಸೋಲದ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆ.
🚨 Update 🚨
Play has heen officially called off.
The fifth & final @Paytm #INDvSA T20I has been abandoned due to rain. #TeamIndia pic.twitter.com/tQWmfaK3SV
— BCCI (@BCCI) June 19, 2022
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 3.3 ಓವರ್ ಗಳಲ್ಲಿ 28 ರನ್ ಗೆ 2 ವಿಕೆಟ್ ಕಳೆದುಕೊಂಡಿತು. ಮಳೆಯ ಕಾರಣ ಪಂದ್ಯವನ್ನು 19 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವು ಅಂತಿಮವಾಗಿ ರದ್ದುಪಡಿಸಲಾಗಿದ ಎಂದು ಬಿಸಿಸಿಐ ಘೋಷಿಸಿತು. ದಕ್ಷಿಣ ಆಫ್ರಿಕಾ ಪರ ಲುಂಗಿ ನಿಗಾಡಿ 2 ವಿಕೆಟ್ ಪಡೆದುಕೊಂಡರೆ, ಭಾರತದ ಪರ ಇಶಾನ್ ಕಿಶನ್ 15 ರನ್, ರುತುರಾಜ್ ಗಾಯಕ್ವಾಡ 10 ಮತ್ತು ರಿಷಭ್ ಪಂತ್ 1 ರನ್ ಗಳಿಸಿದ್ದರು.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್ / ಟೆಂಬಾ ಬವುಮಾ (ಸಿ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ವೈನ್ ಪ್ರಿಟೋರಿಯಸ್, ಹೆನ್ರಿಕ್ ಕ್ಲಾಸೆನ್ (ವಾಕ್), ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ