• Home
  • »
  • News
  • »
  • sports
  • »
  • IND vs SA: ಭಾರತ-ಆಫ್ರಿಕಾ ಕೊನೆಯ ಟಿ20 ಪಂದ್ಯ, ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್​ಗಳಿಗೆ ವಿಶ್ರಾಂತಿ

IND vs SA: ಭಾರತ-ಆಫ್ರಿಕಾ ಕೊನೆಯ ಟಿ20 ಪಂದ್ಯ, ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್​ಗಳಿಗೆ ವಿಶ್ರಾಂತಿ

IND v SA

IND v SA

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಲಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಲಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ (Team India) ಇದೊಂದು ಔಪಚಾರಿಕ ಪಂದ್ಯವಾಗಿದ್ದರೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಉತ್ತಮ ಅವಕಾಶವಾಗಿದೆ. ಅಲ್ಲದೇ ಟಿ20 ವಿಶ್ವಕಪ್ (T20 World Cup)​ ಕಾರಣದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಅಲ್ಲದೇ ಇಂದಿನ ಪಂದ್ಯದಿಂದ ಇಬ್ಬರು ಸ್ಟಾರ್​ ಆಟಗಾರರಿಗೆ ವಿರ್ಶರಾಂತಿ ನೀಡಲಾಗಿದೆ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು   ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ಟಾಸ್ ಸಂಜೆ 6.30ಕ್ಕೆ ನಡೆಯಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.


ಪಿಚ್​ ವರದಿ:


ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದು ಮೂರನೇ ಟಿ20ಐ ಪಂದ್ಯವಾಗಿದ್ದು, ಭಾರತವು ಹಿಂದಿನ ಎರಡೂ ಮುಖಾಮುಖಿಗಳಲ್ಲಿ ಗೆದ್ದಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಭಾರತ ಟಿ20ಯಲ್ಲಿ ಗರಿಷ್ಠ ಮೊತ್ತ ದಾಖಲಿಸಿತ್ತು. ಈ ಆಟವು ಕೊನೆಯ ಪಂದ್ಯದಂತೆ ಬ್ಯಾಟಿಂಗ್​ ನಿರೀಕ್ಷಿಸಬಹುದು. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನು, ಈ ಮೈದಾನದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 260 ರನ್ ಗಳಿಸಿತ್ತು. ಇದು ಟೀಮ್ ಇಂಡಿಯಾದ ದಾಖಲೆಯ ಟಿ20 ಸ್ಕೋರ್ ಆಗಿದೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ಸ್ಟಾರ್​ ಬೌಲರ್​ ಔಟ್​!


ರಾಹುಲ್ ಕೊಹ್ಲಿಗೆ ವಿಶ್ರಾಂತಿ:


ಸದ್ಯ, ದಕ್ಷಿಣ ಆಫ್ರಿಕಾದ ಕೊನೆಯ ಪಂದ್ಯದಲ್ಲಿ ಕ್ರಿಕೆಟ್ ಮ್ಯನೆಜ್ಮೆಂಟ್ ಕೊಹ್ಲಿ ಹಾಗೂ ರಾಹುಲ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಶ್ರೇಯಸ್ ಅವರು ಕೊಹ್ಲಿ ಬದಲಾಗಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು ತಂಡದಲ್ಲಿ ಸ್ಪೆಶಲಿಸ್ಟ್ ಬ್ಯಾಟ್ಸ್ ಮನ್ ಯಾರೂ ಇಲ್ಲ. ಇನ್ನು ಉಮೇಶ್ ಯಾದವ್ ಅಥವಾ ಮೊಹ್ಮದ್ ಸಿರಾಜ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಭಾರತ ತಂಡವು ಸದ್ಯ ಉತ್ತಮ ಸ್ಕ್ವಾಡ್ ಹೊಂದಿದ್ದರೂ ಬಾಲರ್ ಗಳ ವಿಷಯ ಬಂದಾಗ ರೋಹಿತ್ ಸ್ವಲ್ಪ ಕಷ್ಟವನ್ನೇ ಅನುಭವಿಸುತ್ತಿದ್ದಾರೆ, ಏಕೆಂದರೆ ಭಾರತದ ಸೀಮ್ ಬಾಲರ್ ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು ಮುಂಬರುವ ವಿಶ್ವಕಪ್​ನಲ್ಲಿ ಅವರು ಲಭ್ಯರಿಲ್ಲ.


ಇದನ್ನೂ ಓದಿ: T20 World Cup IND vs PAK: ಭಾರತ-ಪಾಕ್ ಪಂದ್ಯಕ್ಕಾಗಿ ಹೊಸ ಪ್ರೋಮೋ ರಿಲೀಸ್​, ಮೌಕಾ ಮೌಕಾ ಬದಲಿಗೆ ಮೋಡಿ ಮಾಡೋಕೆ ಬರ್ತಿದ್ದಾರೆ ಶರ್ಮಾ ಜೀ!


IND vs SA ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ರೋಹಿತ್‌ ಶರ್ಮಾ (ನಾಯಕ), ರಿಷಭ್ ಪಂತ್ (ಉಪ ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್‌ ಯಾದವ್, ದಿನೇಶ್‌ ಕಾರ್ತಿಕ್, ಅಕ್ಷರ್‌ ಪಟೇಲ್, ಹರ್ಷಲ್ ಪಟೇಲ್, ದೀಪಕ್‌ ಚಾಹರ್‌, ಯುಜ್ವೇಂದ್ರ ಚಹಲ್, ಆರ್ಷದೀಪ್‌ ಸಿಂಗ್, ಮೊಹಮ್ಮದ್‌ ಸಿರಾಜ್.


ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ಹೆನ್ರಿಕ್ ಕ್ಲಾಸೆನ್, ಆ್ಯಡಂ ಮರ್ಕ್ರನ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ ಮಹಾರಾಜ್, ಕಗಿಸೊ ರಬಾಡ, ಎನ್ರಿಚ್ ನಾಕಿಯಾ, ಲುಂಗಿ ಗಿಡಿ.

Published by:shrikrishna bhat
First published: