• Home
  • »
  • News
  • »
  • sports
  • »
  • IND vs SA: ಟಾಸ್​ ಗೆದ್ದ ಭಾರತ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ; RCB ಆಟಗಾರನಿಗೆ ಚಾನ್ಸ್

IND vs SA: ಟಾಸ್​ ಗೆದ್ದ ಭಾರತ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ; RCB ಆಟಗಾರನಿಗೆ ಚಾನ್ಸ್

IND v SA

IND v SA

IND vs SA 3rd ODI: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ 3ನೇ ಪಂದ್ಯ ಇಂದು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಲಿದೆ. 

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ 3ನೇ ಪಂದ್ಯ ಇಂದು ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಲ್ಲಿ ನಡೆಯಲಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಕ್ಕೆ (Team India) ಇದೊಂದು ಔಪಚಾರಿಕ ಪಂದ್ಯವಾಗಿದ್ದರೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಉತ್ತಮ ಅವಕಾಶವಾಗಿದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಆಪ್ರಿಕಾ ಬ್ಯಾಟಿಂಗ್​ ಮಾಡಲಿದೆ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು   ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಪಿಚ್ ನಡೆಯಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.ಬ್ಯಾಟಿಂಗ್​ಗೆ ಸಹಕಾರಿಯಾಗಲಿದೆ ಪಿಚ್​:


ಇನ್ನು, ಇಂದೋರ್​ ಪಿಚ್​ ಹೆಚ್ಚು ಬ್ಯಾಟಿಂಗ್​ಗೆ ಸಹಾಯಕಾರಿಯಾಗಲಿದೆ. ಭಾರತವು ಹಿಂದಿನ ಎರಡೂ ಮುಖಾಮುಖಿಗಳಲ್ಲಿ ಗೆದ್ದಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಭಾರತ ಟಿ20ಯಲ್ಲಿ ಗರಿಷ್ಠ ಮೊತ್ತ ದಾಖಲಿಸಿತ್ತು. ಈ ಆಟವು ಕೊನೆಯ ಪಂದ್ಯದಂತೆ ಬ್ಯಾಟಿಂಗ್​ ನಿರೀಕ್ಷಿಸಬಹುದು. ಈ ಮೈದಾನದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 260 ರನ್ ಗಳಿಸಿತ್ತು. ಇದು ಟೀಮ್ ಇಂಡಿಯಾದ ದಾಖಲೆಯ ಟಿ20 ಸ್ಕೋರ್ ಆಗಿದೆ.


ಆರ್​ಸಿಬಿ ಆಟಗಾರಿನಿಗೆ ಚಾನ್ಸ್:


ಕೊಹ್ಲಿ ಹಾಗೂ ರಾಹುಲ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಶ್ರೇಯಸ್ ಅವರು ಕೊಹ್ಲಿ ಬದಲಾಗಿ ಸ್ಥಾನ ಪಡೆದಿದ್ದಾರೆ. ಉಮೇಶ್ ಯಾದವ್ ಅಥವಾ ಮೊಹ್ಮದ್ ಸಿರಾಜ್ ಇಬ್ಬರಿಗೂ ಈ ಬಾರಿ ಪಂದ್ಯದಲ್ಲಿ ಸ್ಥಾನ ನೀಡಲಾಗಿದೆ. ಅಲ್ಲದೇ ಈ ಮೂಲಕ ಟಿ20 ವಿಶ್ವಕಪ್​ನಿಂದ ಹೊರಗುಳಿದ ಬುಮ್ರಾ ಬದಲಿಗೆ ಬೇರೆ ಆಟಗಾರನ್ನು ಆಯ್ಕೆ ಮಾಡಲು ಈ ಪಂದ್ಯವೂ ಸಹಾಯಕವಾಗಲಿದೆ.


ಇದನ್ನೂ ಓದಿ: T20 World Cup 2022: ಫ್ಲೈಟ್ ತಪ್ಪಿದ್ದಕ್ಕೆ ಟಿ20 ವಿಶ್ವಕಪ್​ನಿಂದಲೇ ಔಟ್​! ವಿಂಡೀಸ್​ ಕ್ರಿಕೆಟಿಗನ ದುರಂತ ಕಥೆ


ಭಾರತ-ದಕ್ಷಿಣ ಆಫ್ರಿಕಾ ತಂಡ:


ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ರಿಷಭ್ ಪಂತ್ (ಉಪ ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್‌ ಯಾದವ್, ದಿನೇಶ್‌ ಕಾರ್ತಿಕ್, ಅಕ್ಷರ್‌ ಪಟೇಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವೀನ್, ದೀಪಕ್‌ ಚಾಹರ್‌,  ಮೊಹಮ್ಮದ್‌ ಸಿರಾಜ್, ಉಮೇಶ್​ ಯಾದವ್.ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

Published by:shrikrishna bhat
First published: