IND vs SA: ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್, ಟೀಂ ಇಂಡಿಯಾಗೆ ಸತತ 2ನೇ ಸೋಲು

ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಮೂಲಕ ಸೌತ್​ ಆಫ್ರಿಕಾ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ದಕ್ಷಿಣ ಆಫ್ರಿಕಾಗೆ ಜಯ

ದಕ್ಷಿಣ ಆಫ್ರಿಕಾಗೆ ಜಯ

  • Share this:
ಭಾರತ ಮತ್ತು ದಕ್ಷಿಣ (IND vs SA) ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20ಐ ಸರಣಿ ಆರಂಭವಾಗಿದೆ. ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬೌಮಾ (Temba Bavuma) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ (Rishabh Pant) ನಾಯಕತ್ವದ ಟಿಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಮೂಲಕ ಸೌತ್​ ಆಫ್ರಿಕಾ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಸಾಧಾರಣ ಮೊತ್ತ ಕಲೆಹಾಕಿದ ಟೀಂ ಇಂಡಿಯಾ:

ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ರುತಾಜ್ ಗಾಯಕ್ವಾಡ ಕೇವಲ 1 ರನ್ ಗಳಿಸಿ ಫೆವೆಲಿಯನ್ ನತ್ತ ಹೆಜ್ಜೆ ಹಾಕಿದರೆ, ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ 34 ರನ್ ಗಳಸಿ ಅಲ್ಪ ಚೇತರಿಕೆ ತಂದರು. ಉಳಿದಂತೆ ಶ್ರೇಯಸ್​ ಐಯ್ಯರ್ 40 ರನ್, ನಾಯಕ ರಿಷಭ್ ಪಂತ್ 5 ರನ್, ಹಾರ್ದಿಕ್ ಪಾಂಡ್ಯ 9 ರನ್, ಅಕ್ಷರ್ ಪಟೇಲ್ 10 ರನ್ ದಿನೇಶ್ ಕಾರ್ತಿಕ್ 30 ರನ್ ಮತ್ತುಹರ್ಷಲ್ ಪಟೇಲ್ 12 ರನ್ ಗಳಿಸುವ ಮೂಲಕ ತಂಡವು ಸಾಧಾರಣ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು.

ಉತ್ತಮ ಬೌಲಿಂಗ್ ಮಾಡಿದ ಆಫ್ರಿಕಾ:

ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತು. ಸೌತ್ ಆಫ್ರಿಕಾ ಪರ ಅನ್ರಿಚ್ 2 ವಿಕೆಟ್ ಮತ್ತು ಕಗಿಸೋ ರಬಾಡಾ, ವೈನೆ ಪಾರ್ನವೆಲ್ ಡ್ವೈನ್ ಹಾಗೂ ಕೇಶವ್ ಮಹರಾಜ್ ತಲಾ 1 ವಿಕೆಟ್ ಪಡೆಯುವ ಮೂಲಕ ಭಾರತೀಯ ಬ್ಯಾಟ್ಸ್​ಮನ್ ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: IND vs SA: ಅಬ್ಬರಿಸಿದ ವ್ಯಾನ್ ಡೆರ್ ಡಸ್ಸೆನ್; ದಕ್ಷಿಣ ಆಫ್ರಿಕಾಗೆ 7 ವಿಕೆಟ್​ಗಳ ಜಯ

ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್:

ಇನ್ನು, ಟೀಂ ಇಂಡಿಯಾ ನೀಡಿದ 148 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಆದರೂ ನಂತರ ಹೆನ್ರಿಕ್ ಕ್ಲಾಸೆನ್ ಅಬ್ಬರಕ್ಕೆ 18.2 ಓವರ್​ ಗಳಲ್ಲಿ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸೆನ್ 46 ಎಸೆತದಲ್ಲಿ 5 ಸಿಕ್ಸ್ ಮತ್ತು 7 ಫೋರ್​ ಗಳ ಮೂಲಕ 81 ರನ್ ಸಿಡಿಸಿ ಮಿಂಚಿದರು. ಉಳಿದಂತೆ ಟೆಂಬಾ ಬುವಾಮಾ 35 ರನ್, ಹೆಂಡ್ರಿಕ್ಸ್ ಮತ್ತು ಡ್ವೈನ್ 4 ರನ್, ದುಸೇನಾ 1 ರನ್ ಡೇವಿಡ್ ಮಿಲ್ಲರ್ 20 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಅತ್ಯಾಚಾರ ಪ್ರಕರಣ, ಕೋರ್ಟ್ ತೀರ್ಪು ಪ್ರಕಟ

ಭುವನೇಶ್ವರ್ ಕುಮಾರ್ ಬೌಲಿಂಗ್ ವ್ಯರ್ಥ:

ಟೀಂ ಇಂಡಿಯಾ ಪರ ಬೌಲಿಂಗ್​ ನಲ್ಲಿ ಭುವನೇಶ್ವರ್ ಕುಮಾರ್ ಇಂದು ಮಿಂಚು ಹರಿಸಿದರು. ಆದರೆ ಅವರ ಆಟ ತಂಡದ ಗೆಲುವಿಗೆ ಪ್ರಯೀಜನವಾಗಲಿಲ್ಲ. ಭುವನೇಶ್ವರ್ ಕುಮಾರ್ 4 ಓವರ ಮಾಡಿ 13 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದಮತೆ ಚಹಾಲ್ 49 ರನ್ ನೀಡಿ ದುಭಾರಿಯಾದರು ಆದರೆ 1 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಸಹ ಕೇವಲ 1 ವಿಕೆಟ್ ಪಡೆದರು. ಉಳಿದ ಯಾವೊಬ್ಬ ಬೌಲರ್ ಸಹ ಸೌತ್ ಆಫ್ರಿಕಾ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಸಫಲರಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಢ ಗೆಲುವಿನ ನಗೆ ಬೀರಿತು.
Published by:shrikrishna bhat
First published: