• Home
  • »
  • News
  • »
  • sports
  • »
  • IND vs SA: ಟಾಸ್​ ಗೆದ್ದ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ

IND vs SA: ಟಾಸ್​ ಗೆದ್ದ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ

IND vs SA

IND vs SA

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA ODI) ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದ ಸೋಲಿನ ನಂತರ ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಇದೀಗ 2ನೇ ಪಂದ್ಯವನ್ನು ರಾಂಚಿಯಲ್ಲಿ (Ranchi) ಆಡುತ್ತಿದೆ.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA ODI) ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದ ಸೋಲಿನ ನಂತರ ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಇದೀಗ 2ನೇ ಪಂದ್ಯವನ್ನು ರಾಂಚಿಯಲ್ಲಿ (Ranchi) ಆಡುತ್ತಿದೆ. ಈಗಾಗಲೇ ಟಾಸ್​ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಇನ್ನು, ಭಾರತ ತಂಡದ ಪ್ಲೇಯಿಂಗ್​ 11ನಲ್ಲಿ 2 ಮಹತ್ವದ ಬದಲಾವಣೆಳು ಆಗಿದ್ದು,  RCB ಆಟಗಾರ ಶಹಬಾಜ್ ಅಹ್ಮದ್ ಚೊಚ್ಚಲ ಏಕದಿನ ಪಂದ್ಯವಾಡತ್ತಿದ್ದಾರೆ. ಅಲ್ಲದೇ ದೀಪಕ್ ಚಹಾರ್ ಬದಲಿಗೆ ಆಟಗಾರ ವಾಷಿಂಗ್ಟನ್ ಸುಂದರ್‌ಗೂ ಅವಕಾಶ ದೊರಕಿದೆ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ 2ನೇ ಪಂದ್ಯವು ನಾಳೆ ರಾಂಚಿಯಲ್ಲಿರುವ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.   ಸರಣಿಯ ಎಲ್ಲಾ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಹಾಗೂ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು.IND vs SA ODI ಹೆಡ್​ ಟು ಹೆಡ್​:


ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 88 ODIಗಳನ್ನು ಆಡಿವೆ. ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 50 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ತವರು ನೆಲದಲ್ಲಿ ಆಡುತ್ತಿರುವಾಗ ಭಾರತ 29 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 14 ಪಂದ್ಯಗಳನ್ನು ಗೆದ್ದಿದೆ.


ಇದನ್ನೂ ಓದಿ: IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಚಹಾರ್​ ಔಟ್​, ಯುವ ಆಲ್​ರೌಂಡರ್​ಗೆ ಅವಕಾಶ


ಸರಣಿಯಿಂದ ಚಹಾರ್ ಔಟ್​ಸುಂದರ್‌ ಇನ್​​:


ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ದೀಪಕ್ ಚಹಾರ್ ಬದಲಿಗೆ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದೆ ಎಂದು ಬಿಸಿಸಿಐ ತಿಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ. ಮೂರನೇ ಮತ್ತು ಅಂತಿಮ ಟಿ20 ಪಂದ್ಯದ ನಂತರ ಇಂದೋರ್‌ನಲ್ಲಿ, ಚಹರ್ ಅವರ ಬೆನ್ನಿ ನೋವಿಗೆ ತುತ್ತಾಗಿದ್ದರು.


ಇದನ್ನೂ ಓದಿ: Sanju Samson: ಟೀಂ ಇಂಡಿಯಾಗೆ ಮತ್ತೊಬ್ಬ ಧೋನಿ ಎಂಟ್ರಿ? ಈ ಆಟಗಾರನಲ್ಲಿದೆ ಕ್ಯಾಪ್ಟನ್ ಕೂಲ್​ ಗುಣಲಕ್ಷಣಗಳು


IND vs SA ಪ್ಲೇಯಿಂಗ್​ 11:


ಭಾರತ ತಂಡ:  ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್.


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಜಾನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್ (ನಾಯಕ), ಜಾರ್ನ್ ಫೋರ್ಟ್ಯುಯ್ನ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ.

Published by:shrikrishna bhat
First published: