• Home
  • »
  • News
  • »
  • sports
  • »
  • IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಅಬ್ಬರಿಸಿದ ರಾಹುಲ್​-ಯಾದವ್​

IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಅಬ್ಬರಿಸಿದ ರಾಹುಲ್​-ಯಾದವ್​

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

IND vs SA: ಭಾರತ ತಂಡ 16.4 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 110 ರನ್ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿದೆ.

  • Share this:

ಇಂದಿನ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು (IND vs SA) 3 ಪಂದ್ಯಗಳ T20I ಸರಣಿಯ ಮೊದಲ ಪಂದ್ಯ ಇಂದು  ತಿರುವನಂತಪುರ ಕ್ರೀಡಾಂಗಣದಲ್ಲಿ ನಡೆಯಿತು ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್ ಗಳಿಸುವ ಮೂಲಕಭಾರತ ತಂಡಕ್ಕೆ (Team India) 107 ರನ್​​ಗಳ ಸಾಧಾರಣ ಮೊತ್ತದ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ 16.4 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 110 ರನ್ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿದೆ.


ಅಬ್ಬರಿಸಿದ ರಾಹುಲ್​-ಯಾದವ್​:


ಇನ್ನು, ಆಫ್ರಿಕಾ ನೀಡಿದ ಅಲ್ಪ ಮೊತ್ತದ ಟಾರ್ಗೆಟ್​ ಬೆನ್ನಟ್ಟಿದ ಭಾರತ ತಂಡ 16.4 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 110 ರನ್ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿದೆ. ಭಾರತದ ಪರ ಇಂದು ಕನ್ನಡಿಗ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿದರು. ಇಬ್ಬರೂ ಸಹ ಅರ್ಧಶತಕ ಸಿಡಿಸಿ ಮಿಂಚಿದರು. ರಾಹುಲ್​ 56 ಎಸೆತಗಳಲ್ಲಿ 4 ಸಿಕ್ಸ್ ಮತ್ತು 2 ಬೌಮಡರಿಗಳ ನೆರವಿನಿಂದ 51 ರನ್ ಮತ್ತು ಸೂರ್ಯಕುಮಾರ್ ಯಾದವ್ 33 ಎಸೆತದಲ್ಲಿ 3 ಸಿಕ್ಸ್ ಮತ್ತು 5 ಫೋರ್​ಗಳ ನೆರವಿನಿಂದ 50 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ ಶೂನ್ಯ ಮತ್ತು ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿದರು.



ಬೌಲಿಂಗ್​ನಲ್ಲೂ ಮಿಂಚದ ಆಫ್ರಿಕನ್ಸ್:


ಇನ್ನು, ಬ್ಯಾಟಿಂಗ್​ನಲ್ಲಿ ಎಡವಿದ್ದ ಆಫ್ರಿಕಾ ತಂಡವು ಬೌಲಿಂಗ್​ ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ. ಆಫ್ರಿಕಾ ಪರ ಕಗಿಸೋ ರಬಾಡಾ  ಮತ್ತು ಅನ್ರಿಚ್​ ನೊಟ್ರೇಜ್​ ತಲಾ 1 ವಿಕೆಟ್​ ಪಡೆದರೆ ಉಳಿದ ಬೌಲರ್​ಗಳು ಯಾವುದೇ ಪರಿಣಾಮಕಾರಿ ಬೌಲಿಂಗ್​ ಮಾಡಲಿಲ್ಲ.


ಇದನ್ನೂ ಓದಿ: Womens Asia Cup 2022: ಮಹಿಳಾ ಏಷ್ಯಾ ಕಪ್ 2022​ ತಂಡಗಳು, ಲೈವ್​ ಸ್ಟ್ರೀಮಿಂಗ್​ಗಳ ಸಂಪೂರ್ಣ ವಿವರ


ಟೀಂ ಇಂಡಿಯಾ ಸಂಘಟಿತ ಬೌಲಿಂಗ್​ ದಾಳಿ:


ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಟೀಂ ಇಂಡಿಯಾ ಅದ್ಭುತ ಬೌಲಿಂಗ್​ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು. ಭಾರತದ ಪರ ಪವರ್ ಪ್ಲೇ ಆರಂಭದಲ್ಲಿ ದೀಪಕ್​ ಚಹರ್​ ಮತ್ತು ಆರ್ಶದೀಪ್​ ಸಿಂಗ್​ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಆಫ್ರಿಕಾದ ಆರಂಭಿಕರನ್ನು ಫೆವೆಲಿಯನ್​ಗೆ ಅಟ್ಟಿದರು. ದೀಪಕ್ ಚಹರ್​ 4 ಓವರ್​ಗೆ 24 ರನ್​ಗೆ 2 ವಿಕೆಟ್​ ಮತ್ತು ಹರ್ಷಲ್​ ಪಟೇಲ್​ 4 ಓವರ್​ಗೆ 26 ರನ್​​ಗೆ 2 ವಿಕೆಟ್​ ಪಡೆದು ಮಿಂಚಿದರು. ಅರ್ಶದೀಪ್​ ಸಿಂಗ್​ 4 ಓವರ್​ಗೆ 32 ರನ್​ಗೆ 3 ವಿಕೆಟ್​ ಪಡೆದು ಅಬ್ಬರಿಸಿದರೆ, ಅಕ್ಷರ್​ ಪಟೇಲ್​ 1 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: FIFA World Cup 2022: ಈ ಇಬ್ಬರು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್! ಸಂಕಷ್ಟದಲ್ಲಿ ಮೆಸ್ಸಿ ತಂಡ


ಬ್ಯಾಟಿಂಗ್​-ಬೌಲಿಂಗ್​ ಎರಡರಲ್ಲೂ ಭಾರತ ಉತ್ತಮ ಪ್ರದರ್ಶನ:


ಅನೇಕ ದಿನಗಳ ನಂತರ ಭಾರತ ತಂಡವು ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಟಾಸ್​ ಗೆದ್ದು ಬೌಲಿಂಗ್ ಆರಂಭಿಸಿದ ಟೀಂ ಇಂಡಿಯಾ, ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಆರಂಭದಲ್ಲಿಯೇ ದೀಪಕ್ ಚಹರ್​ ಮತ್ತು ಅರ್ಶದೀಪ್​ ಸಿಂಗ್​ ಇಬ್ಬರೂ ಸಹ ಆಫ್ರಿಕಾ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡಿದರು. ಅದರಂತೆ ಬ್ಯಾಟಿಂಗ್​ನಲ್ಲಿಯೂ ಸಹ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್​ ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

Published by:shrikrishna bhat
First published: