• Home
  • »
  • News
  • »
  • sports
  • »
  • IND vs SA ODI: ಇಂದು ಭಾರತ-ಆಫ್ರಿಕಾ ಮೊದಲ ಏಕದಿನ ಪಂದ್ಯ, ಪ್ಲೇಯಿಂಗ್​ 11ನಲ್ಲಿ RCB ಸ್ಟಾರ್​ ಪ್ಲೇಯರ್​?

IND vs SA ODI: ಇಂದು ಭಾರತ-ಆಫ್ರಿಕಾ ಮೊದಲ ಏಕದಿನ ಪಂದ್ಯ, ಪ್ಲೇಯಿಂಗ್​ 11ನಲ್ಲಿ RCB ಸ್ಟಾರ್​ ಪ್ಲೇಯರ್​?

IND vs SA ODI

IND vs SA ODI

IND vs SA ODI: ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಭಾರತ ತಂಡ ಗೆದ್ದು ಬೀಗಿದೆ. ಇದೀಗ ಟೀಂ ಇಂಡಿಯಾ ಇಂದಿನಿಂದ ಆರಂಭವಾಗಲಿರುವ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಸಿದ್ದವಾಗಿದೆ. ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ.

  • Share this:

ಮೂರು ಪಂದ್ಯಗಳ T20I ಸರಣಿಯು ಮುಗಿದ ಎರಡು ದಿನಗಳ ನಂತರ, ಭಾರತವು ದಕ್ಷಿಣ ಆಫ್ರಿಕಾವನ್ನು ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಉಭಯ ತಂಡಗಳ ಮೊದಲ ಪಂದ್ಯವು  ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿದೆ.  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (IND v SA ODI) ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ.  ಶಿಖರ್ ಧವನ್ (Shikhar Dhawan) ಅವರನ್ನು ನಾಯಕರನ್ನಾಗಿ ಮಾಡಲಾಗಿದ್ದು, ಉಪನಾಯಕತ್ವದ ಜವಾಬ್ದಾರಿ ಶ್ರೇಯಸ್ ಅಯ್ಯರ್ ಅವರ ಹೆಗಲ ಮೇಲಿದೆ. ಹಾಗಿದ್ದರೆ ಇಂದಿನ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ ನೋಡಿ.


ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ನಾಳೆ ನಡೆಯಲಿದೆ. ಪಂದ್ಯವು ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಧ್ಯಾಹ್ನ 1:30 ರಿಂದ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಗೆ ಟಾಸ್ ನಡೆಯಲಿದೆ. ಈ ಸರಣಿಯ ಅಷ್ಟು ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಹಾಗೂ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು.ಪಿಚ್​ ರಿಪೋರ್ಟ್& ಹವಾಮಾನ ವರದಿ:


ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್‌ಗೆ ಸ್ವಲ್ಪ ಅನುಕೂಲವಾಗಿದ್ದು, ಸಮತೋಲನದಲ್ಲಿದೆ. ಪಿಚ್‌ಗಳು ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದೆ ಆದ್ದರಿಂದ ಬೌಲರ್‌ಗಳಿಗೆ ಹೆಚ್ಚು ಸಹಾಯಕವಾಗಲಿದೆ.  ಹೀಗಾಗಿ ಮೊದಲು ಟಾಸ್​ ಗೆದ್ದ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ಟೆನ್ಷನ್ ಹೆಚ್ಚಿಸಿದ ರೋಹಿತ್, ಈ ವಿಚಾರದಲ್ಲಿ ಹಿಟ್​ಮ್ಯಾನ್​ಗಿಂತ ಕೊಹ್ಲಿಯೇ ಬೆಸ್ಟ್!


ಲಕ್ನೋದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ಆಕಾಶವು ಹೆಚ್ಚಾಗಿ ಮೋಡ ಮತ್ತು ತೇವಾಂಶದಿಂದ ಕೂಡಿರುತ್ತದೆ. ದಿನದ ಅವಧಿಯಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಗುರುವಾರ ಮಳೆ ಪ್ರಮಾಣ ಶೇ 95ರಷ್ಟಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ. ಗಾಳಿಯ ವೇಗ ಗಂಟೆಗೆ 19 ಕಿ.ಮೀ ಆಗಿರಬಹುದು ಮತ್ತು ಲಕ್ನೋದಲ್ಲಿ ಸಂಜೆ ಆರ್ದ್ರವಾಗಿರುತ್ತದೆ.


IND v SA ODI ಸಂಭಾವ್ಯ ತಂಡಗಳು:


ಭಾರತ ಸಂಭಾವ್ಯ ತಂಡ: ಶಿಖರ್ ಧವನ್(ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್(ಉಪ ನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.


ಇದನ್ನೂ ಓದಿ: Urvashi-Rishabh: ರಿಷಭ್ ಪಂತ್​ಗೆ ಫ್ಲೈಯಿಂಗ್ ಕಿಸ್ ಮೂಲಕ ವಿಶ್​ ಮಾಡಿದ ಊರ್ವಶಿ, ಇಬ್ಬರು ಗೆಳತಿಯರ ಮುದ್ದಿನ ಹೀರೋ ಎಂದ ನೆಟ್ಟಿಗರು


ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (w), ಟೆಂಬಾ ಬವುಮಾ (c), ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆಸ್, ಡ್ವೈನ್ ಪ್ರೆಟೊರ್ಜೆಸ್

Published by:shrikrishna bhat
First published: