• Home
  • »
  • News
  • »
  • sports
  • »
  • IND vs SA ODI: ಭಾರತ-ಆಫ್ರಿಕಾ ಪಂದ್ಯಕ್ಕೆ ವರುಣನ ಕಾಟ, ಮ್ಯಾಚ್​ ಮತ್ತಷ್ಟು ವಿಳಂಬ

IND vs SA ODI: ಭಾರತ-ಆಫ್ರಿಕಾ ಪಂದ್ಯಕ್ಕೆ ವರುಣನ ಕಾಟ, ಮ್ಯಾಚ್​ ಮತ್ತಷ್ಟು ವಿಳಂಬ

IND vs SA ODI

IND vs SA ODI

IND vs SA ODI: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ODI ಸರಣಿಯು ಇಂದಿನಿಂದ ಪ್ರಾರಂಭವಾಗುತ್ತಿದೆ. ಆದರೆ ಹೊಸ ಅಪ್​ಡೇಟ್​ ಪ್ರಕಾರ ಮತ್ತೆ ಮಳೆಯು (Rain) ಆರಂಭವಾಗಿದ್ದು, ಪಂದ್ಯ ಮತ್ತಷ್ಟು ತಡವಾಗಬಹುದು.

  • Share this:

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ODI ಸರಣಿಯು ಇಂದಿನಿಂದ ಪ್ರಾರಂಭವಾಗುತ್ತಿದೆ. ಮೊದಲ ಪಂದ್ಯ ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದಕ್ಕೆ ಶಿಖರ್ ಧವನ್ (Shikhar Dhawan) ನೇತೃತ್ವದ ಯುವ ಭಾರತ ತಂಡ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.  ಈಗಾಗಲೇ ಮಳೆಯ ಕಾರಣ ಟಾಸ್​ ಅನ್ನು 1:30ಕ್ಕೆ ನಿರ್ಧರಿಸಲಾಗಿತ್ತು. ಅಲ್ಲದೇ ಪಂದ್ಯವು 2 ಗಂಟೆಯಿಂದ ಆರಂಭವಾಗಬೇಕಿತ್ತು. ಆದರೆ ಹೊಸ ಅಪ್​ಡೇಟ್​ ಪ್ರಕಾರ ಮತ್ತೆ ಮಳೆಯು (Rain) ಆರಂಭವಾಗಿದ್ದು, ಪಂದ್ಯ ಮತ್ತಷ್ಟು ತಡವಾಗಬಹುದು.


ಭಾರತ-ಆಫ್ರಿಕಾ ಪಂದ್ಯಕ್ಕೆ ಮಳೆ ಕಾಟ:


ಹೌದು, ಭಾರತ ಮತ್ತು ಸೌತ್​ ಆಫ್ರಿಕಾ ಮೊದಲ ಏಕದಿನ ಪಂದ್ಯವು ಇಂದು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಬೆಳಗ್ಗಿನಿಂದ ಲಕ್ನೋದಲ್ಲಿ ಸತತ ಮಳೆ ಆಗುತ್ತಿರುವ ಕಾರಣ ಪಂದ್ಯ ಮತ್ತಷ್ಟು ತಡವಾಗಲಿದೆ. ಈಗಾಗಳೇ ಮಧ್ಯಾಹ್ನ 1 ಗಂಟಗೆ ಟಾಸ್​ ಆಗಬೇಕಾಗಿರುವುದು 1:30ಕ್ಕೆ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ಪಿಚ್​ ಪರಿಶೀಲಿಸಿದ ಅಂಪೈರ್​ಗಳು ಪಂದ್ಯದ ಸಮಯವನ್ನು ತ್ತಷ್ಟು ಮುಂದೂಡಲ್ಪಟ್ಟಿದ್ದಾರೆ.ಪಂದ್ಯದ ವಿವರ:


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸರಣಿಯ ಎಲ್ಲಾ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಹಾಗೂ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು.


ಇದನ್ನೂ ಓದಿ: Pro Kabaddi League: ನಾಳೆಯಿಂದ ಪ್ರೊ ಕಬಡ್ಡಿ ಲೀಗ್​ ಆರಂಭ; ಇಲ್ಲಿದೆ ವೇಳಾಪಟ್ಟಿ, ಸಮಯದ​ ಸಂಪೂರ್ಣ ವಿವರ


IND vs SA ODI ಹೆಡ್​ ಟು ಹೆಡ್​:


2022ರಲ್ಲಿ ಟೀಂ ಇಂಡಿಯಾ ಇದುವರೆಗೆ 15 ಏಕದಿನ ಪಂದ್ಯಗಳನ್ನು ಆಡಿದೆ. 11ರಲ್ಲಿ ಗೆದ್ದಿದ್ದರೆ 4ರಲ್ಲಿ ಸೋತಿದ್ದಾರೆ. ಈ ವರ್ಷ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 3 ಏಕದಿನ ಪಂದ್ಯಗಳು ನಡೆದಿವೆ. 2 ಪಂದ್ಯಗಳಲ್ಲಿ ಆಫ್ರಿಕಾ ಒಂದು ಪಂದ್ಯ ಭಾರತ ಗೆದ್ದಿದೆ.


ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 87 ODIಗಳನ್ನು ಆಡಿವೆ. ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 49 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ತವರು ನೆಲದಲ್ಲಿ ಆಡುತ್ತಿರುವಾಗ ಭಾರತ 28 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 13 ಪಂದ್ಯಗಳನ್ನು ಗೆದ್ದಿದೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತೆರಳಿದ ಟೀಂ ಇಂಡಿಯಾ, ಇಲ್ಲಿದೆ ಮೆನ್ ಇನ್ ಬ್ಲೂ ಫೋಟೋಸ್​


ಭಾರತ-ಆಫ್ರಿಕಾ ಏಕದಿನ ಸಂಭಾವ್ಯ ತಂಡ:


ಭಾರತ ತಂಡ: ಶಿಖರ್ ಧವನ್(ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್(ಉಪ ನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.


ದಕ್ಷಿಣ ಆಫ್ರಿಕಾ ತಂಡ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (w), ಟೆಂಬಾ ಬವುಮಾ (c), ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆಸ್, ಡ್ವೈನ್ ಪ್ರೆಟೊರ್ಜೆಸ್

Published by:shrikrishna bhat
First published: