• Home
  • »
  • News
  • »
  • sports
  • »
  • IND vs PAK 2023: ಈ ವರ್ಷ 3 ಬಾರಿ ಮುಖಾಮುಖಿ ಆಗಲಿದೆ ಭಾರತ-ಪಾಕಿಸ್ತಾನ, ಬದ್ಧವೈರಿಗಳ ಸೆಣಸಾಟಕ್ಕೆ ಡೇಟ್​ ಫಿಕ್ಸ್!

IND vs PAK 2023: ಈ ವರ್ಷ 3 ಬಾರಿ ಮುಖಾಮುಖಿ ಆಗಲಿದೆ ಭಾರತ-ಪಾಕಿಸ್ತಾನ, ಬದ್ಧವೈರಿಗಳ ಸೆಣಸಾಟಕ್ಕೆ ಡೇಟ್​ ಫಿಕ್ಸ್!

IND vs PAK

IND vs PAK

IND vs PAK 2023: ಕಳೆದ ವರ್ಷ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಗಳ ನಂತರ, ಭಾರತ ಮತ್ತು ಪಾಕಿಸ್ತಾನ ಈಗ 2023ರಲ್ಲಿ ಮುಖಾಮುಖಿಯಾಗಲಿವೆ. ಏಷ್ಯಾ ಕಪ್ ಟೂರ್ನಮೆಂಟ್ ಸೆಪ್ಟೆಂಬರ್ 2023 ರಲ್ಲಿ ನಡೆಯಲಿದೆ ಮತ್ತು ಈ ವರ್ಷವೂ ಈ ಪಂದ್ಯಾವಳಿಯನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತದೆ.

ಮುಂದೆ ಓದಿ ...
  • Share this:

ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಪೂರ್ಣ ವರ್ಷದ ವೇಳಾಪಟ್ಟಿಯನ್ನು ಗುರುವಾರ ಅಂದರೆ ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ಏಕದಿನ ಏಷ್ಯಾಕಪ್ ಕೂಡ ಒಳಗೊಂಡಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಇದಲ್ಲದೆ, ಎರಡು ಸಾಂಪ್ರದಾಯಿಕ ಎದುರಾಳಿ ತಂಡಗಳನ್ನು ಮಹಿಳಾ ಟಿ20 ಏಷ್ಯಾಕಪ್, ಪುರುಷರ 50 ಓವರ್ ಏಷ್ಯಾಕಪ್ (Asia Cup 2023) ಮತ್ತು ಪುರುಷರ ಅಂಡರ್ -19 ಏಷ್ಯಾಕಪ್‌ನಲ್ಲಿ ಕೂಡ ಇರಿಸಲಾಗಿದೆ. ಈ ವಿಚಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜೈ ಶಾ (Jay Shah) ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.  ODI ವಿಶ್ವಕಪ್ (World Cup 2023) ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಇಲ್ಲಿಯೂ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಇದಲ್ಲದೇ ಅಂಡರ್-19 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕೂಡ ಸೆಣಸಾಡಲಿವೆ. ಅಂದರೆ, ಈ 6 ಟೂರ್ನಿಗಳಲ್ಲಿ ಇಬ್ಬರ ನಡುವೆ 10ಕ್ಕೂ ಹೆಚ್ಚು ಪಂದ್ಯಗಳು ನಡೆಯುವ ಸಾಧ್ಯತೆ ಇದೆ.


ಸಪ್ಟೆಂಬರ್​ನಲ್ಲಿ ಏಷ್ಯಾಕಪ್:


ಏಷ್ಯಾಕಪ್ ಕುರಿತು ಮಾತನಾಡುತ್ತಾ, ಪಂದ್ಯಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿವೆ. ಇದನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ ಭಾರತವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಬಹುದು. ಒಟ್ಟು 6 ತಂಡಗಳು ಟೂರ್ನಿಗೆ ಪ್ರವೇಶಿಸಲಿವೆ. ಭಾರತ ಮತ್ತು ಪಾಕಿಸ್ತಾನ ಹೊರತುಪಡಿಸಿ, ಕ್ವಾಲಿಫೈಯರ್-1 ಅನ್ನು ಗುಂಪಿನಲ್ಲಿ ಇರಿಸಲಾಗಿದೆ. ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇವೆ. ಇದಾದ ನಂತರ ಸೂಪರ್-4 ಮತ್ತು ನಂತರ ಫೈನಲ್ ನಡೆಯಲಿದೆ. ಅಂದರೆ ಭಾರತ ಮತ್ತು ಪಾಕಿಸ್ತಾನ ನಡುವೆ 3 ಪಂದ್ಯಗಳು ನಡೆಯಬಹುದು.ಏಕದಿನ ವಿಶ್ವಕಪ್‌:


ಏಕದಿನ ವಿಶ್ವಕಪ್ ಕುರಿತು ಮಾತನಾಡುತ್ತಾ, 10 ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಎಲ್ಲಾ ತಂಡಗಳು 9 ಗುಂಪುಗಳ ವಿರುದ್ಧ ಆಡಲಿವೆ. ಇದಾದ ನಂತರ ನಾಕೌಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಅಂಡರ್-19 ಮಹಿಳಾ ವಿಶ್ವಕಪ್ ಕುರಿತು ಮಾತನಾಡುತ್ತಾ, ಭಾರತ ಮತ್ತು ಪಾಕಿಸ್ತಾನವು ವಿಭಿನ್ನ ಗುಂಪುಗಳಲ್ಲಿವೆ. ಸೂಪರ್-6 ಮತ್ತು ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಇಬ್ಬರ ನಡುವೆ ಪಂದ್ಯ ನಡೆಯಲಿದೆ. ಈ ಎರಡೂ ಟೂರ್ನಿಗಳಲ್ಲಿ ಒಟ್ಟು 4 ಪಂದ್ಯಗಳು ನಡೆಯಲಿದೆ.


ಇದನ್ನೂ ಓದಿ: AUS vs SA Test: ಬ್ಯಾಟಿಂಗ್​ ನಡುವೆ ಸಿಗರೇಟ್​ ಲೈಟರ್​ ಕೇಳಿದ ಅಚ್ಚರಿ ಮೂಡಿಸಿದ ಆಸೀಸ್​ ಆಟಗಾರ


ಇದಲ್ಲದೇ ಮಹಿಳೆಯರ ಟಿ20 ಎಮರ್ಜಿಂಗ್ ಏಷ್ಯಾ ಕಪ್, ಪುರುಷರ ಎಮರ್ಜಿಂಗ್ 50 ಓವರ್ ಏಷ್ಯಾಕಪ್ ಮತ್ತು 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಜೂನಿಯರ್ ತಂಡಗಳು ಸ್ಪರ್ಧಿಸಲು ಸಿದ್ಧವಾಗಿವೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆದಿತ್ತು. ಕೊನೆಯ ಎಸೆತದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿತು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು