ಇಂದು ಟಿ20 ವಿಶ್ವಕಪ್ನ (T20 WC 2022) ಸೂಪರ್ 12 ಹಂತದ 3ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆದವು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿತು. ಈ ಮೂಲಕ ಪಾಕಿಸ್ತಾನ ಎದುರು ಭಾರತ ತಂಡ 4 ವಿಕೆಟ್ಗಳ ರೋಚಕ ಜಯ ದಾಖಲಿಸಿತು.
ಅಬ್ಬರಿಸಿದ ಕಿಂಗ್ ಕೊಹ್ಲಿ:
ಕಿಂಗ್ ಕೊಹ್ಲಿ ಇಂದು ಪಾಕ್ ಎದುರು ಭರ್ಜರಿ ಬ್ಯಾಟಿಂಗ್ ಮಾಡಿದರು. ಸಂಕಷ್ಟದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ 100 ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ವಿರಾಟ್ ಕೊಹ್ಲಿ 53 ಬೌಲ್ಗೆ 4 ಸಿಕ್ಸ್ 6 ಬೌಂಡರಿ ಮೂಲಕ 82 ರನ್ ಗಳಿಸಿ ಔಟಾಗದೇ ಉಳಿದರು. ಹಾರ್ದಿಕ್ ಪಾಂಡ್ಯ 37 ಎಸೆತದಲ್ಲಿ 2 ಸಿಕ್ಸ್ ಮತ್ತು 1 ಬೌಂಡರಿ ಮೂಲಕ 40 ರನ್ ಗಳಸಿದರು.
The KING is back 👑
Take a bow, Virat Kohli 🙌#T20WorldCup | #INDvPAK pic.twitter.com/OdAnbmso0h
— ICC (@ICC) October 23, 2022
ಇದನ್ನೂ ಓದಿ: T20 WC 2022 IND vs PAK: ರಾಷ್ಟ್ರ ಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ!
ಅದ್ಭುತ ಬೌಲಿಂಗ್ ದಾಳಿ ಮಾಡಿದ ಭಾರತ:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಉತ್ತಮ ದಾಳಿ ಮಾಡಿತು. ಭಾರತದ ಪರ ಅರ್ಷದೀಪ್ ಸಿಂಗ್ 4 ಓವರ್ ಮಾಡಿ 32 ರನ್ ನೀಡಿ 3 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ ಸಹ 4 ಓವರ್ಗೆ 30 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು. ಈ ಮೂಲಕ ಪಾಕಿಸ್ತಾನ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.
ಇದನ್ನೂ ಓದಿ: T20 World Cup 2022 IND vs PAK: ಪಾಕಿಸ್ತಾನದಲ್ಲಿ ರೋಹಿತ್ ಶರ್ಮಾಗೆ ಹೀಗೆ ಕರೆಯುತ್ತಾರಂತೆ, ಕೇಳಿದ್ರೆ ಅಚ್ಚರಿ ಪಡ್ತೀರಾ!
ಪಾಂಡ್ಯಾ -ಅರ್ಷದೀಪ್ ಬೆಂಕಿ ಬೌಲಿಂಗ್ಗೆ ತತ್ತರಿಸಿದ್ದ ಪಾಕ್:
ಅರ್ಷದೀಪ್ ಸಿಂಗ್ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಎಲ್ಬಿ ಮಾಡುವ ಮೂಲಕ ಶೂನ್ಯಕ್ಕೆ ಫೇವೆಲಿಯನ್ ಕಳಿಸಿದರು. ಮೊಹಮ್ಮದ್ ರಿಜ್ವಾನ್ ಅವರು ಅರ್ಷದೀಪ್ ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಗೆ ಕ್ಯಾಚ್ ನೀಡಿ 4 ರನ್ ಗಳಿಸಿ ಔಟಾದರು. ಉಳಿದಂತೆ ಶಾಬಾಜ್ ಖಾನ್ 5 ರನ್ ಮತ್ತು ಹೈದರ್ ಅಲಿ ಸಹ 2 ರನ್, ಇಫ್ತಿಖರ್ ಅಹ್ಮದ್ 34 ಎಸೆತದಲ್ಲಿ 2 ಬೌಂಡರಿ ಜೊತೆ 4 ಸಿಕ್ಸ್ ಸಿಡಿಸಿ 51 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಇವರ ಜೊತೆ ಶಾನ್ ಮಸೂದ್ 42 ಬೌಲ್ಗೆ 5 ಫೊರ್ ಗಳ ಮೂಲಕ 52 ರನ್ ಗಳಿಸಿದ್ದರು. ಆದರೆ ಪಾಂಡ್ಯ ಮತ್ತು ಅರ್ಷದೀಪ್ ದಾಳಿಗೆ ಪಾಕ್ ತತ್ತರಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ