• Home
  • »
  • News
  • »
  • sports
  • »
  • Hardik Pandya: ಪಂದ್ಯದ ಬಳಿಕ ಪುಟ್ಟ ಮಗುವಿನಂತೆ ಗಳಗಳನೇ ಕಣ್ಣೀರಿಟ್ಟ ಹಾರ್ದಿಕ್​ ಪಾಂಡ್ಯ! ಕಾರಣ ಇದು

Hardik Pandya: ಪಂದ್ಯದ ಬಳಿಕ ಪುಟ್ಟ ಮಗುವಿನಂತೆ ಗಳಗಳನೇ ಕಣ್ಣೀರಿಟ್ಟ ಹಾರ್ದಿಕ್​ ಪಾಂಡ್ಯ! ಕಾರಣ ಇದು

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

IND vs PAK: ಪಂದ್ಯ ಗೆದ್ದ ನಂತರ ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾವುಕರಾದರು. ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

  • Share this:

ನಿನ್ನೆ  ನಡೆದ ಇಂಡಿಯಾ ವರ್ಸಸ್​ ಪಾಕ್​ (IND vs PAK) ಪಂದ್ಯವನ್ನು ವೀಕ್ಷಿಸಿದವರು, ತಮ್ಮ ಜೀವನದಲ್ಲಿ ಅತ್ಯುತ್ತಮ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ರೀತಿಯ ಪಂದ್ಯಗಳು 10 ವರ್ಷಕ್ಕೊಮ್ಮೆ ನಡೆಯುತ್ತೆ ಅಂದರೆ ತಪ್ಪಾಗಲ್ಲ. ಯಾರೂ ಊಹಿಸಲಾಗದ ರೀತಿಯಲ್ಲಿ ಭಾರತ ತಂಡ ಪಾಕ್​ ತಂಡವನ್ನು ಬಗ್ಗು ಬಡಿದಿತ್ತು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತ (Team India) ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಿಂಗ್​ ಕೊಹ್ಲಿ (King Kohli), ಹಾರ್ದಿಕ್​ ಪಾಂಡ್ಯ (Hardik Pandya). ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್‌ಗಳ ವೇಗದ ಇನ್ನಿಂಗ್ಸ್‌ಗಳನ್ನು ಆಡಿದರು. ಇವರನ್ನು ಬಿಟ್ಟರೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಎಲ್ಲರ ಮನ ಗೆದ್ದಿದ್ದರು.


ಪಂದ್ಯದ ಬಳಿಕ ಕಣ್ಣೀರಿಟ್ಟ ಹಾರ್ದಿಕ್​ ಪಾಂಡ್ಯ!


ಪಂದ್ಯ ಗೆದ್ದ ನಂತರ ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾವುಕರಾದರು. ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನವನ್ನು ಸೋಲಿಸಿದ ನಂತರ ಪಾಂಡ್ಯ ಕೂಡ ಭಾವುಕರಾದರು


ಅಗಲಿದ ತಂದೆ ನೆನೆದು ಭಾವುಕರಾದ ಹಾರ್ದಿಕ್ ಪಾಂಡ್ಯ!


ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ, 'ನಾನು ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನಾನು ನನ್ನ ತಂದೆಗಾಗಿ ಅಳಲಿಲ್ಲ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ ಆದರೆ ತಂದೆ ನನಗಾಗಿ ಮಾಡಿದ್ದನ್ನು ನಾನು ನನ್ನ ಮಗನಿಗಾಗಿ ಮಾಡಬಹುದೇ ಎಂದು ನನಗೆ ತಿಳಿದಿಲ್ಲ! ಆರೂವರೆ ವರ್ಷದ ಬಾಲಕನ ಕನಸನ್ನು ನನಸು ಮಾಡಲು ನನ್ನ ತಂದೆ ಬೇರೆ ನಗರಕ್ಕೆ ತೆರಳಿದರು. ಇವತ್ತು ನಾನಿರುವ ಸ್ಥಿತಿಗೆ ನನ್ನ ತಂದೆ ಮಟ್ಟಕ್ಕೆ ತಲುಪಲು ಸಾಧ್ಯವೇ ಎಂದು ನನಗೆ ತಿಳಿದಿಲ್ಲ! ಹಾಗಾಗಿ ಈ ಇನ್ನಿಂಗ್ಸ್ ಅನ್ನು ತಂದೆಗೆ ಅರ್ಪಿಸುತ್ತೇನೆ ' ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿರಾಟ್​ ವಿಶ್ವರೂಪಕ್ಕೆ ಫ್ಯಾನ್ಸ್​ ಫಿದಾ, ಕೊಹ್ಲಿ ಆಟಕ್ಕೆ ಮನಸೋತ ಜೂನಿಯರ್​ ಎನ್​ಟಿಆರ್!


ಹಾರ್ದಿಕ್​ ಅಳುವ ವಿಡಿಯೋ ವೈರಲ್​!


ಹಾರ್ದಿಕ್ ಪಾಂಡ್ಯ , "ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಆ ದಿನ ನನ್ನ ತಂದೆ ನನಗೆ ಆಡಲು ಅವಕಾಶ ನೀಡದಿದ್ದರೆ ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ತಾಯಿ ಕೂಡ ತನ್ನ ಮಕ್ಕಳಿಗಾಗಿ ಬೇರೆ ನಗರಕ್ಕೆ ಹೋದರು. ನನ್ನ ತಂದೆ ತನ್ನ ಭವಿಷ್ಯದ ಬಗ್ಗೆ ಎಂದು ಯೋಚಿಸಲಿಲ್ಲ" ಎಂದು ಅಗಲಿದ ತಂದೆ ನೆನದು ಗಳಗಳನೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಬೌಲಿಂಗ್​ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಟೀಂ ಇಂಡಿಯಾ ಪರ ದೊಡ್ಡ ಪಂದ್ಯಗಳಲ್ಲಿ ಪದೇ ಪದೇ ಪ್ರದರ್ಶನ ನೀಡಿದ್ದಾರೆ. ಈ ದಿನ ಭಾರತದ ಗೆಲುವಿನ ನಾಯಕ ವಿರಾಟ್ ಕೊಹ್ಲಿ. ಅವರು 82 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಆದರೆ ಹಾರ್ದಿಕ್ ಪಾಂಡ್ಯ ಕೂಡ 40 ರನ್ ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಕೊಹ್ಲಿ ಜತೆಗೂಡಿ ಭಾರತದ ಇನ್ನಿಂಗ್ಸ್‌ ಮುನ್ನಡೆಸಿದರು.


ಇದನ್ನೂ ಓದಿ: ಹಾರ್ದಿಕ್ ಅಬ್ಬರಕ್ಕೆ ಪತರುಗುಟ್ಟಿದ ಪಾಕ್, ಅಪರೂಪದ ದಾಖಲೆ ಮಾಡಿದ ಏಕೈಕ ಭಾರತೀಯ ಪಾಂಡ್ಯ!

ಇದೇ ರೀತಿ ಟೀಂ ಇಂಡಿಯಾ ತನ್ನ ಆಟವನ್ನು ಪ್ರದರ್ಶಿಸಿದರೆ, ವಿಶ್ವಕಪ್​ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ.

Published by:ವಾಸುದೇವ್ ಎಂ
First published: