• Home
  • »
  • News
  • »
  • sports
  • »
  • IND vs NZ T20: ಭಾರತ-ನ್ಯೂಜಿಲ್ಯಾಂಡ್​ ಟಿ20 ಸರಣಿ ಯಾವಾಗ ಆರಂಭ? ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ

IND vs NZ T20: ಭಾರತ-ನ್ಯೂಜಿಲ್ಯಾಂಡ್​ ಟಿ20 ಸರಣಿ ಯಾವಾಗ ಆರಂಭ? ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ

IND vs NZ T20

IND vs NZ T20

IND vs NZ T20: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ಟಿ20 ಸರಣಿ ಆಡಲು ಸಿದ್ಧವಾಗಿದೆ. ಈ ಸರಣಿಯ ಸಮಯ, ಸ್ಥಳ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

  • Share this:

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಇದೀಗ ಭಾರತ ತಂಡ ಟಿ20 ಸರಣಿಯಲ್ಲಿ ಮತ್ತೆ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. 3 ಪಂದ್ಯಗಳ ಏಕದಿನ ಸರಣಿ ಬಳಿಕ ಭಾರತ ತಂಡ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಜನವರಿ 27 ಶುಕ್ರವಾರದಿಂದ ಆರಂಬವಾಗಲಿದೆ. ಈ ಸಿರೀಸ್​ನಿಂದ ಟೀಂ ಇಂಡಿಯಾದ (Team India) ಹಲವು ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಮೊಹಮ್ಮದ್ ಶಮಿಗೆ (Mohammed Shami) ವಿಶ್ರಾಂತಿ ನೀಡಲಾಗಿದೆ. ಏಕದಿನ ಸರಣಿಯ ಬಳಿಕ ಮುಂಬರಲಿರುವ ಆಸೀಸ್​ ವಿರುದ್ಧದ ಬಾರ್ಡರ್​ ಗವಾಸ್ಕರ್ ಟ್ರೋಪಿಗಾಗಿ (Border–Gavaskar Trophy) ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗಿದ್ದರೆ ಭಾರತ ಮತ್ತು ನ್ಯೂಜಿಲೆಂಡ್ (IND vs NZ) ಟಿ20 ಸರಣಿಯ ತಂಡ, ಸಮಯ, ಸ್ಥಳ ಮತ್ತು ಪ್ರಸಾರದ ವಿವರಗಳು ಇಲ್ಲಿದೆ.


ಭಾರತ - ನ್ಯೂಜಿಲ್ಯಾಂಡ್​ ಸರಣಿಯ ವೇಳಾಪಟ್ಟಿ:


1 ನೇ T20: ಜನವರಿ 27, 7 PM ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ರಾಂಚಿ),
2 ನೇ T20: ಜನವರಿ 29, 7 PM ಅಟಲ್ ಬಿಹಾರಿ ಬಾಜಪೇಯ್ ಏಕನಾ ಸ್ಟೇಡಿಯಂ (ಲಕ್ನೋ),
3 ನೇ T20: 1 ಫೆಬ್ರವರಿ 7 PM ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್


ಲೈವ್ ಪ್ರಸಾರದ ವಿವರ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಎಲ್ಲಾ ಭಾಷೆಯ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನೀವು ಈ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಸಹ ಆನಂದಿಸಬಹುದು. ಅಲ್ಲದೇ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್​​ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಅಲ್ಲದೇ ಸರಣಿಯ ಸಂಪೂರ್ಣ ಮಾಹಿತಿಗಾಗಿ ನ್ಯೂಸ್​ 18 ಕನ್ನಡ ವೆಬ್​ಸೈಟ್​ ಅನುಸರಿಸಬಹುದು.


ಇದನ್ನೂ ಓದಿ: ICC ODI Ranking: ನಂಬರ್​ 1 ಪಟ್ಟಕ್ಕೇರಿದ ಟೀಂ ಇಂಡಿಯಾ, ವಿಶ್ವ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬ್ಲೂ ಬಾಯ್ಸ್


ಭಾರತ - ನ್ಯೂಜಿಲ್ಯಾಂಡ್​ ಟಿ20 ತಂಡಗಳು:


ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) , ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಯಾ ಸುಂದರವ್, ಕುಲ್ದೀಪ್ ಯಾ ಸುಂದರವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.


ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ) , ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಶೇನ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಟಿ ಸೋಧಿನರ್.
ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಭಾರತ ನಂಬರ್ 1:


ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಅದ್ಭುತ ಆಟ ಪ್ರದರ್ಶಿಸಿದೆ. ಟೀಂ ಇಂಡಿಯಾ ಸತತ ಮೂರು ಪಂದ್ಯಗಳನ್ನು 3-0 ಅಂತರದಲ್ಲಿ ಗೆಲ್ಲುವ ಮೂಲಕ ಪ್ರವಾಸಿ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಭಾರತ ತಂಡ 114 ಅಂಕಗಳೊಂದಿಗೆ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. 113 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ಎರಡನೇ ಸ್ಥಾನಕ್ಕೆ ತಲುಪಿದೆ. 112 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿದೆ.


ಇದು ಮಾತ್ರವಲ್ಲದೇ ಭಾರತ ತಂಡ  ಟಿ20 ಮಾದರಿಯಲ್ಲಿಯೂ ನಂಬರ್​ 1 ಮತ್ತು  ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಆಸ್ಟ್ರೇಲಿಯಾ 126 ಅಂಕಗಳ ಜೊತೆ ಮೊದಲ ಸ್ಥಾನದಲ್ಲಿದ್ದು, 115 ಅಂಕಗಳೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ.

Published by:shrikrishna bhat
First published: