ಮುಂಬರುವ ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ (IND vs NZ) ತಂಡವನ್ನು ಪ್ರಕಟಿಸಲಾಗಿದೆ. ಮೂರು ಪಂದ್ಯಗಳ ಸರಣಿಗೆ ಮಿಚೆಲ್ ಸ್ಯಾಂಟ್ನರ್ (Mitchell Santner) ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಆದರೆ ಈ ಸರಣಿಗೆ ಕಿವೀಸ್ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 15 ಸದಸ್ಯರ ತಂಡದಲ್ಲಿ ಕೇನ್ ವಿಲಿಯಮ್ಸನ್ (Kane Williamson) ಮತ್ತು ಟಿಮ್ ಸೌಥಿಗೆ (Tim Southee) ಸ್ಥಾನ ನೀಡಲಾಗಿಲ್ಲ. ಜನವರಿ 27ರಿಂದ ಟಿ20 ಸರಣಿ ಆರಂಭವಾಗಲಿದ್ದು, ಸದ್ಯ ಭಾರತ ತಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತೊಡಗಿಕೊಂಡಿದೆ.
ತಂಡದಲ್ಲಿ ಹೊಸ ಮುಖಗಳು:
ನ್ಯೂಜಿಲೆಂಡ್ ತಂಡದಲ್ಲೂ ಇಬ್ಬರು ಹೊಸಬರಿಗೆ ಅವಕಾಶ ನೀಡಲಾಗಿದೆ. ಬೆನ್ ಲಿಸ್ಟರ್ ಮತ್ತು ಹೆನ್ರಿ ಶಿಪ್ಲಿ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ಎ ತಂಡ ಭಾರತ ಪ್ರವಾಸದಲ್ಲಿ ಲಿಸ್ಟರ್ ಭಾರತಕ್ಕೆ ಆಗಮಿಸಿದರು. ಉತ್ತಮ ಪ್ರದರ್ಶನದ ಆಧಾರದ ಮೇಲೆ ಈ ಯುವ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಶಿಪ್ಲಿ ಇತ್ತೀಚೆಗೆ ಪಾಕಿಸ್ತಾನ ಪ್ರವಾಸದಲ್ಲಿ ನ್ಯೂಜಿಲೆಂಡ್ ಏಕದಿನ ತಂಡದಲ್ಲಿ ಪಾದಾರ್ಪಣೆ ಮಾಡಿದ್ದರು. ಹೀಗಾಗಿ ಇದೀಗ ಶಿಪ್ಲಿ ಅವರಿಗೆ ಟಿ20 ಕ್ರಿಕೆಟ್ಗೂ ಸ್ಥಾನ ನೀಡಿದೆ.
Our T20 Squad to face India in 3 T20Is starting later this month in Ranchi! Congratulations to @aucklandcricket's Ben Lister and @CanterburyCrick's Henry Shipley on being selected in a BLACKCAPS T20 Squad for the first time. More | https://t.co/bwMhO2Zb76 #INDvNZ pic.twitter.com/jFpWbGPtGx
— BLACKCAPS (@BLACKCAPS) January 12, 2023
ಇದಕ್ಕೂ ಮುನ್ನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿತ್ತು. ಆ ತಂಡದಲ್ಲೂ ಟಿಮ್ ಸೌಥಿ ಹಾಗೂ ಕೇನ್ ವಿಲಿಯಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ತಂಡ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ. ಸೌದಿ ಮತ್ತು ವಿಲಿಯಮ್ಸನ್ ಪಾಕಿಸ್ತಾನದಿಂದ ನೇರವಾಗಿ ನ್ಯೂಜಿಲೆಂಡ್ಗೆ ಮರಳಲಿದ್ದಾರೆ. ಟಾಮ್ ಲ್ಯಾಥಮ್ಗೆ ಏಕದಿನ ಸರಣಿಯಲ್ಲಿ ಕಿವೀಸ್ ತಂಡದ ನಾಯಕತ್ವ ನೀಡಲಾಗಿದೆ. ಟ್ರೆಂಟ್ ಬೌಲ್ಟ್ಗೆ ಟಿ20 ಮತ್ತು ಏಕದಿನ ಎರಡೂ ತಂಡಗಳಲ್ಲಿ ಸ್ಥಾನ ನೀಡಲಾಗಿಲ್ಲ. ಮುಂಬರುವ ದಿನಗಳಲ್ಲಿ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಪ್ರವಾಸದಲ್ಲಿ ಈ ಮೂವರು ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ: Sandeep Lamichhane: ಅತ್ಯಾಚಾರ ಮಾಡಿ ಜೈಲು ಸೇರಿದ್ದ ಸ್ಟಾರ್ ಕ್ರಿಕೆಟರ್ಗೆ ಜಾಮೀನು! ಈ ಬಾರಿ ಮತ್ತೆ ಐಪಿಎಲ್ ಆಡ್ತಾರಾ?
ಭಾರತ ಪ್ರವಾಸಕ್ಕೆ ನ್ಯೂಜಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ಸಿ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್.
ಭಾರತ-ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ:
ಮೊದಲ ODI: ಜನವರಿ 18ರಂದು, ಹೈದರಾಬಾದ್ (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ)
2ನೇ ODI: ಜನವರಿ 21, ರಾಯ್ಪುರ, (ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣ)
3ನೇ ODI: ಜನವರಿ 24, ಇಂದೋರ್ ಕ್ರಿಕೆಟ್ ಸ್ಟೇಡಿಯಂ
ಮೊದಲ ಟಿ20: ಜನವರಿ 27, ರಾಂಚಿ (ಜೆಎಸ್ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ)
2ನೇ ಟಿ20: ಜನವರಿ 29, ಲಖನೌ (ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ)
3ನೇ ಟಿ20 : ಫೆಬ್ರವರಿ 01, ಅಹ್ಮದಾಬಾದ್ (ನರೇಂದ್ರ ಮೋದಿ ಸ್ಟೇಡಿಯಂ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ